• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಸಪೇಟೆ; ಸರ್ವೀಸ್ ರಸ್ತೆ ನಿರ್ಮಿಸಿದ ಟಾಟಾ, ಅಪಘಾತಕ್ಕೆ ಆಹ್ವಾನ

By ಭೀಮರಾಜ.ಯು. ವಿಜಯನಗರ
|

ವಿಜಯನಗರ, ಏಪ್ರಿಲ್ 12; ವಿಜಯನಗರ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿವೆ. ಡಣಾಪುರದಿಂದ ಪೊತಲಕಟ್ಟೆಯ ಕ್ರಾಸ್ ತನ ಸರ್ವಿಸ್ ರಸ್ತೆ ನಿರ್ಮಿಸದ ಕಾರಣ ಅಪಘಾತಗಳಿಗೆ ಆಹ್ವಾನ ನೀಡಲಾಗುತ್ತಿದೆ.

ಕಳೆದ ಒಂದೂವರೆ ವರ್ಷಗಳಿಂದ ರಸ್ತೆ ನಿರ್ಮಿಸಿ ಟೋಲ್‌ಗಳಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹನುಮನಹಳ್ಳಿಯವರೆಗೂ ಸರ್ವಿಸ್ ರಸ್ತೆಯ ನಿರ್ಮಿಸಲಾಗಿದೆ.

ಹೊಸಪೇಟೆ; ಹೆದ್ದಾರಿಯಲ್ಲಿ ಲಾರಿಗಳ ಘರ್ಜನೆ; ಸಂಚಾರ ದಟ್ಟಣೆ

ಆದರೆ ಡಣಾಪುರ, ಮರಿಯಮ್ಮನಹಳ್ಳಿ, ಮರಿಯಮ್ಮನಹಳ್ಳಿ ತಾಂಡ, ದೇವಲಾಪುರ, ಡಣನಾಯಕನಕೆರೆ, ಗೊಲ್ಲರಹಳ್ಳಿ, ಆರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ ಮತ್ತು ಪೋತಲಕಟ್ಟೆ ಕ್ರಾಸ್ ತನಕ ಸರ್ವಿಸ್ ರಸ್ತೆ ನಿರ್ಮಿಸಿಲ್ಲ.

ತುಮಕೂರು-ಶಿವಮೊಗ್ಗ 4 ಪಥದ ರಸ್ತೆ ಕಾಮಗಾರಿಗೆ ಸಿಗಲಿದೆ ವೇಗ

ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿರುವ ಟಾಟ ಕಂಪನಿ ಚಿತ್ರದುರ್ಗದಿಂದ ಗುಂಡಾ ಐಬಿವರೆಗೂ ಸುಮಾರು 120 ಕಿ. ಮೀ. ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ನಿರ್ಮಿಸುವುದಕ್ಕೆ ಸರ್ಕಾರದಿಂದ ಗುತ್ತಿಗೆ ಪಡೆದಿದ್ದಾರೆ. ರಸ್ತೆ ನಿರ್ಮಾಣಕ್ಕೆ ಸುಮಾರು 1,200 ಕೋಟಿ ರೂ. ವೆಚ್ಚವಾಗಿದ್ದು, ತಿಮ್ಮಲಾಪುರ ಬಳಿ ಟೋಲ್ ನಿರ್ಮಿಸಲಾಗಿದೆ.

ಉಡುಪಿ; ಟೋಲ್ ಕಂಪನಿಗೆ ಸೆಡ್ಡು, ಉಚಿತ ರಸ್ತೆ ನಿರ್ಮಾಣ!

ರಸ್ತೆ ಅಪಘಾತಗಳು

ರಸ್ತೆ ಅಪಘಾತಗಳು

ಸರ್ವಿಸ್ ರಸ್ತೆ ನಿರ್ಮಾಣ ಮಾಡದ ಕಾರಣ ಬೈಕ್ ಸವಾರರು, ಪಾದಚಾರಿಗಳು, ಹೊಲಗದ್ದೆಗಳಿಗೆ ಹೋಗುವ ರೈತರು, ಎತ್ತಿನ ಗಾಡಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕ ಮುಖ ರಸ್ತೆಯಲ್ಲಿಯೇ ಓಡಾಡುವುದು ಅನಿವಾರ್ಯವಾಗಿದೆ. ಹನುಮನಹಳ್ಳಿಯಿಂದ ಪೋತಲಕಟ್ಟೆಯ ಕ್ರಾಸ್ ತನಕ ತಿಂಗಳಲ್ಲಿ ಕಡಿಮೆ ಎಂದರೂ 5 ರಿಂದ 6 ಅಪಘಾತಗಳು ಸಂಭವಿಸುತ್ತವೆ. ಇದರಲ್ಲಿ ಬೈಕ್ ಸವಾರರೇ ಅಪಘಾತಕ್ಕೆ ಒಳಗಾಗುತ್ತಿರುವುದು ಹೆಚ್ಚು.

ಕಂಪನಿ ಇರುವಲ್ಲಿ ಸರ್ವಿಸ್ ರಸ್ತೆ

ಕಂಪನಿ ಇರುವಲ್ಲಿ ಸರ್ವಿಸ್ ರಸ್ತೆ

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹಾದು ಹೋಗುವ 114-ಡಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಂ. ಎಸ್. ಪಿ. ಎಲ್ ಮೈನ್ಸ್ ಲಿ. ಮತ್ತು ಡಣಾಪರದ ಬಿ. ಎಂ. ಎ ಇಸ್ಪಾತ್ ಲಿ. ಕಂಪನಿಗಳು ಇರುವಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಕೊಡಲಾಗಿದೆ. ಸರ್ಕಾರಕ್ಕೆ ಆದಾಯ ಕೊಡುವ ಕಂಪನಿಗಳಿರುವಲ್ಲಿ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ರೈತರು, ಎತ್ತಿನ ಗಾಡಿಗಳು, ಪಾದಚಾರಿಗಳು, ಬೈಕ್ ಸವಾರರು ಓಡಾಡುವರಲ್ಲಿ ರಸ್ತೆ ಮಾಡಿಲ್ಲ.

ರೈತರಿಗೆ ನಿತ್ಯದ ಗೋಳು

ರೈತರಿಗೆ ನಿತ್ಯದ ಗೋಳು

ಡಣನಾಯಕನಕೆರೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿದೊಡ್ಡ ಎರಡನೇ ಕೆರೆ. ಮೊದಲನೆಯದು ದರೋಜಿ ಕೆರೆಯಾಗಿದೆ. ಡಣನಾಯಕನಕೆರೆ ವ್ಯಾಪ್ತಿಗೆ ಸುಮಾರು ಎರಡು ಸಾವಿರ ಎಕರೆ ನೀರನ್ನು ಪೂರೈಸುತ್ತದೆ. ಹಾಗಾಗಿ ರೈತರ ಕೆಲಸ ಕಾರ್ಯಗಳು ವರ್ಷವಿಡಿ ಇರುತ್ತವೆ. ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳಬೇಕಾದರೆ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡು ಹೋಗಬೇಕಿದೆ. ಆದ್ದರಿಂದ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.

ಅವೈಜ್ಞಾನಿಕ ಫ್ಲೈ ಓವರ್

ಅವೈಜ್ಞಾನಿಕ ಫ್ಲೈ ಓವರ್

ಮರಿಯಮ್ಮನಹಳ್ಳಿಯಿಂದ ಡಣನಾಯಕನಕೆರೆಯ ಕ್ರಾಸ್ ತನಕ ಅತಿ ಹೆಚ್ಚು ರೈತರು ಮತ್ತು ಬೈಕ್ ಸವಾರರು ಓಡಾಡುತ್ತಾರೆ. ಹಲವು ಕಡೆ ಅವೈಜ್ಞಾನಿಕವಾಗಿ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ. ಹನುಮನಹಳ್ಳಿಯಿಂದ ಪೋತಲಕಟ್ಟೆಯ ಕ್ರಾಸ್ ತನಕ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ.

ನಮಗೆ ಸರ್ಕಾರದ ಆದೇಶದಂತೆ ರಸ್ತೆಯನ್ನು ನಿರ್ಮಾಣ ಮಾಡಿದ್ದೇವೆ. ಎಲ್ಲೆಲ್ಲಿ ಸರ್ವೀಸ್ ಮಾಡಬೇಕು ಅಂತ ನಮಗೆ ತಿಳಿಸಿದಲ್ಲೆಲ್ಲಾ ರಸ್ತೆ ಮಾಡಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ರೈತರು ಸಾಗುವ ಮಾರ್ಗದಲ್ಲಿ ರಸ್ತೆಯನ್ನು ಯಾರು ನಿರ್ಮಿಸುತ್ತಾರೆ? ಎಂಬುದಕ್ಕೆ ಉತ್ತರವಿಲ್ಲ.

English summary
No service road for farmers and villagers in the national highway 50 near Danapura to Potalakatte cross. These roads built by Tata projects Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X