ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯನಗರ ವಿಶೇಷ; ಹಳ್ಳ ಹಿಡಿದು ಹೋದ ಪುರಾತನ ನೀರಾವರಿ ಯೋಜನೆ!

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಜುಲೈ 14; ವ್ಯಾಸನಕೆರೆ ಏತ ನೀರಾವರಿ ಯೋಜನೆ ರೈತರಿಗೆ ಇದ್ದು ಇಲ್ಲದಂತೆ ಆಗಿದೆ. ಒಂದು ಕಾಲದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ವ್ಯಾಸನಕೆರೆ ಗ್ರಾಮದ ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಿರುವ ಈ ಏತ ನೀರಾವರಿ ಯೋಜನೆ ಸಾವಿರಾರು ಜನರ ರೈತರಿಗೆ ಬದುಕನ್ನು ಕಟ್ಟಿಕೊಟ್ಟಿತ್ತು. ಈಗ ಚಿತ್ರವಣವೇ ಬದಲಾಗಿದೆ.

ವ್ಯಾಸನಕೆರೆಯ ಏತ ನೀರಾವರಿ ಯೋಜನೆ ಈಗ ಸಂಪೂರ್ಣವಾಗಿ ಹಳ್ಳ ಹಿಡಿಯುವ ಸ್ಥಿತಿಗೆ ಬಂದಿದೆ. ತುಂಗಭದ್ರಾ ಜಲಾಶಯ ನಿರ್ಮಾಣ ಮಾಡುವ ಸಂದರ್ಭದಲ್ಲಿ ಮುಳುಗಡೆಯಾದ ಗ್ರಾಮದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲಾಯಿತು.

ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ ನರೇಗಾ ನೆರವಿನಲ್ಲಿ ಗುಲಾಬಿ ಬೆಳೆದು ಲಾಭಗಳಿಸಿದ ರೈತ

ಆಗ ಮೈಸೂರು ಸರ್ಕಾರದಲ್ಲಿ ನೀರಾವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದರು. ಕೃಷಿಯಿಂದ ಮಾತ್ರ ಎಲ್ಲಾರಿಗೂ ಉದ್ಯೋಗವನ್ನು ಕೊಡುವುದಕ್ಕೆ ಸಾಧ್ಯ ಎಂದು ಮನಗಂಡಿದ್ದರು. ಅದರ ಭಾಗವಾಗಿಯೇ ದೊಡ್ಡ ಮಟ್ಟದಲ್ಲಿ ಕೆರೆಗಳನ್ನು ನಿರ್ಮಾಣ ಮಾಡಿದರು.

ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ! ವಿಜಯನಗರ; ಬಾಯಿ ಬಡಿದು ಕೊಂಡ್ರು ಬಾಯಿ ತುಂಬಾ ನೀರು ಸಿಗಲ್ಲ!

ಸಣ್ಣಸಣ್ಣ ಕುಂಟೆಗಳನ್ನು ಸಹ ನಿರ್ಮಿಸಿದರು. ಆ ರಾಜ್ಯದಲ್ಲಿ ಕೃಷಿ ಮತ್ತು ಜಲಾಶಯಗಳಿಗೆ ಮೊದಲ ಆದ್ಯತೆ ನೀಡಿದರು. ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಮಾಡುವಾಗ ಹಣದ ಕೊರತೆ ಉಂಟಾಯಿತು. ಆಗ ಮೈಸೂರು ರಾಜರ ಪತ್ನಿಯ ಒಡವೆಗಳನ್ನು ಅಡ ಇಡಲಾಗಿತ್ತು ಎನ್ನುತ್ತದೆ ಇತಿಹಾಸ.

ಹೊಸಪೇಟೆ; ಭಾರೀ ಮಳೆ; ಬೆಳೆಗಳು ಸಂಪೂರ್ಣ ಜಲಾವೃತ ಹೊಸಪೇಟೆ; ಭಾರೀ ಮಳೆ; ಬೆಳೆಗಳು ಸಂಪೂರ್ಣ ಜಲಾವೃತ

ವ್ಯಾಸನ ಕೆರೆ ಏತ ನೀರಾವರಿ ಯೋಜನೆ

ವ್ಯಾಸನ ಕೆರೆ ಏತ ನೀರಾವರಿ ಯೋಜನೆ

ಮೈಸೂರು ರಾಜರು ಕೃಷಿಗೆ ಎಷ್ಟರ ಮಟ್ಟಿಗೆ ಮಹತ್ವ ನೀಡಿದ್ದರು ಅನ್ನುವುದಕ್ಕೆ ಸಾಕ್ಷಿ ಉತ್ತರ ಕರ್ನಾಟದಲ್ಲಿರುವ ವ್ಯಾಸನಕೆರೆ ಏತ ನೀರಾವರಿ ಯೋಜನೆ. ಈ ಯೋಜನೆಯನ್ನು 1972 ರಲ್ಲಿ ಪೂರ್ಣಗೊಳಿಸಲಾಗಿದೆ. ಏತ ನೀರಾವರಿ ಕಟ್ಟಡದ ಬಳಿ ಒಂದು ಬೋರ್ಡ್ ಹಾಕಲಾಗಿದೆ. ಅದರಲ್ಲಿ "ಮೈಸೂರು ಸರ್ಕಾರ ಲೋಕಪಯೋಗಿ ಇಲಾಖೆ ಮಲ್ಲಾಪುರ ತಾಲೂಕು ವ್ಯಾಸನಕೆರೆ ಮೈಸೂರು ರಾಜ್ಯದ ಹಣಕಾಸು ಮಂತ್ರಿಗಳಾದ ಎಂ. ವೈ. ಘೋರ್ಪಡೆ ಇವರ ಅಮೃತ ಹಸ್ತದಿಂದ ಉದ್ಘಾಟನೆ" ಎಂದು ಬರೆದಿದೆ.

ವ್ಯಾಸನಕೆರೆ ಏತ ನೀರಾವರಿ ಪ್ರದೇಶ ವ್ಯಾಪ್ತಿ

ವ್ಯಾಸನಕೆರೆ ಏತ ನೀರಾವರಿ ಪ್ರದೇಶ ವ್ಯಾಪ್ತಿ

ತುಂಗಭದ್ರಾ ಜಲಾಶಯವನ್ನು 1952ರಲ್ಲಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ನೂರಾರು ಹಳ್ಳಿಗಳು ಮುಳುಗಡೆಯಾದವು. ಅದರಲ್ಲಿ ಬಸಾಪುರ, ತಾರಿಹಳ್ಳಿ, ಗೌರೀಪುರ, ಮಲ್ಲಾಪುರ, ನಾಣಿಕೇರಿ ಹೀಗೆ ಹಲವು ಹಳ್ಳಿಗಳಿವೆ. ಮುಳುಗಡೆಯಾದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ಏತ ನೀರಾವರಿ ಯೋಜನೆ ಮಾಡಲಾಯಿತು. ಇದರ ವ್ಯಾಪ್ತಿ ಸರಿ ಸುಮಾರು 4 ಸಾವಿರ ಎಕರೆ ಪ್ರದೇಶಗ ಬರುತ್ತದೆ.

ಕಾಲುವೆಯಲ್ಲಿ ಹೂಳು ತುಂಬಿದೆ

ಕಾಲುವೆಯಲ್ಲಿ ಹೂಳು ತುಂಬಿದೆ

ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಏತ ನೀರಾವರಿಯನ್ನು ನಿರ್ಮಿಸಲಾಗಿದೆ. ಇದಕ್ಕೆ ತುಂಗಭದ್ರಾ ಜಲಾಶಯದಿಂದ ನೀರು ಬರುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಲುವೆಯನ್ನು ಮಾಡಲಾಗಿದೆ. ಪ್ರತಿ ವರ್ಷ ಹೊಳೆಗೆ ನೀರು ಬರುವಾಗ ಹೂಳು ಬರುತ್ತದೆ ಹೂಳನ್ನು ತೆಗೆಯದೇ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಸುಮಾರು ಕಾಲುವೆಗಳನ್ನು 20 ವರ್ಷಗಳಿಂದ ನಿರ್ವಹಣೆ ಮಾಡಿಲ್ಲ. ಇದರಿಂದಾಗಿ ಕಾಲುವೆಯ ನೀರು ಅಲ್ಲಲ್ಲಿ ಹೊಲಗದ್ದೆಗಳಿಗೆ ಪೊಲಾಗುತ್ತದೆ. ಇದರಿಂದಾಗಿ ಈಗ ಕೇವಲ 1200 ಎಕರೆಗಳು ಮಾತ್ರ ನೀರು ಹರಿಯುತ್ತಿದೆ.

ನೀರಾವರಿ ಪ್ರದೇಶದ ಬೆಳೆಗಳು

ನೀರಾವರಿ ಪ್ರದೇಶದ ಬೆಳೆಗಳು

ವ್ಯಾಸನಕೆರೆ, ವೆಂಕಟಾಪುರ, ಅಯ್ಯನಹಳ್ಳಿ, ಹನುಮನಹಳ್ಳಿ, ಡಣಾಪುರ, ಗಾಳೆಮ್ಮನ ಗುಡಿ, ನಂದಿಬಂಡಿ, ಮರಿಯಮನಹಳ್ಳಿ ಮರಿಯಮ್ಮನಹಳ್ಳಿ ತಾಂಡ, ಲೋಕಪ್ಪನ ಹೊಲ ಹೀಗೆ ಒಟ್ಟು 10 ಹಳ್ಳಿಗಳಿಗೆ ನೀರನ್ನು ಹಾಯಿಸಲಾಗುತ್ತದೆ.

ಈ ಕಾಲುವೆ ನೀರನ್ನು ಬಳಸಿಕೊಂಡು ರೈತರು ಕಬ್ಬು, ಭತ್ತ, ರಾಗಿ, ಜೋಳ, ಉದ್ದು, ಸಜ್ಜೆ ವಿಶೇಷವಾಗಿ ಶೇಂಗಾ ಬೆಳೆಯುತ್ತಾರೆ. ಪ್ರತಿ ವರ್ಷ ಮಳೆಗಾಲ ಆರಂಭವಾದ ಮೇಲೆ ಮೇ ಮತ್ತು ಜೂನ್ ತಿಂಗಳ ಅಂತ್ಯಕ್ಕೆ ತುಂಗಭದ್ರಾ ಜಲಾಶಯದ ಹಿನ್ನೀರು ಹೆಚ್ಚಳವಾಗುತ್ತದೆ. 35 ಟಿಎಂಸಿ ನೀರು ಹರಿದು ಬಂದಾಗ ಈ ಏತ ನೀರಾವರಿ ಯೋಜನೆಗೆ ನೀರು ಹರಿದು ಬರಬೇಕು. ಈಗಾಗಲೇ 40 ಟಿಎಂಸಿ ನೀರು ಸಂಗ್ರಹವಿದ್ದರೂ ನೀರು ಹರಿಸಿಲ್ಲ.

ಅಧಿಕವಾಗುತ್ತಿದೆ ನಿರ್ವಹಣೆ ವೆಚ್ಚ

ಅಧಿಕವಾಗುತ್ತಿದೆ ನಿರ್ವಹಣೆ ವೆಚ್ಚ

ಮಳೆಗಾಲ ಆರಂಭವಾಗುತ್ತಿದ್ದಂತೆ ಅಧಿಕಾರಿಗಳು ಏತ ನೀರಾವರಿಯ ಕೆಲಸ ಕಾರ್ಯಗಳನ್ನು ಆರಂಭ ಮಾಡಬೇಕಿತ್ತು. ಆದರೆ ಜುಲೈ ತಿಂಗಳು ಕಳೆಯುತ್ತಾ ಬಂದರೂ ಇನ್ನು ಕಾಲುವೆಗಳನ್ನು ಸರಿಪಡಿಸುವುದಾಗಲಿ ಮತ್ತು ಹೂಳು ತೆಗೆಯುವಿದಾಗಲಿ ಯಾವ ಕಾರ್ಯವೂ ಆಗಿಲ್ಲ.

ಪ್ರತಿ ಒಂದು ವರ್ಷಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ 10 ಲಕ್ಷ ರೂ. ನಿರ್ವಹಣೆ ವೆಚ್ಚವನ್ನು ಬಿಡುಗಡೆ ಮಾಡಲಾಗುತ್ತದೆ. ಇದರಲ್ಲಿ ವಿದ್ಯುತ್ ಸಂಪರ್ಕದ ನಿರ್ವಹಣೆ, ನೀರೆತ್ತುವ ಪಂಪ್ ಸೆಟ್ ಕಾಲುವೆಗಳ ನಿರ್ವಹಣೆ ಮಾಡಲಾಗುತ್ತದೆ. ವರ್ಷದಿಂದ ವರ್ಷಕ್ಕೆ ನಿರ್ವಹಣಾ ವೆಚ್ಚ ಅಧಿಕವಾಗುತ್ತಿದೆ.

ನಿರ್ವಹಣಾ ವೆಚ್ಚ ಸಾಕಾಗುವುದಿಲ್ಲ

ನಿರ್ವಹಣಾ ವೆಚ್ಚ ಸಾಕಾಗುವುದಿಲ್ಲ

ಏತ ನೀರಾವರಿಯ ಸಹಾಯಕ ಅಭಿಯಾಂತರ ನಾಗೇಂದ್ರಪ್ಪ ಮಾತನಾಡಿದ್ದು, "ಸರ್ಕಾರದಿಂದ ಒಂದು ವರ್ಷಕ್ಕೆ‌ ನಿರ್ವಹಣೆ ಮಾಡುವುದಕ್ಕೆ 10 ಲಕ್ಷ ರೂ. ಮಾತ್ರ ಬಿಡುಗಡೆಯಾಗುತ್ತದೆ. ಇದರಲ್ಲಿ ಟಿಸಿ ಗಳಿಗೆ ಆಯಿಲ್ ಗ್ರೀಸ್, ವಿದ್ಯುತ್ ಬಿಲ್, ಪಂಪ್ ಸೆಟ್‌ ರಿಪೇರಿ, ಮತ್ತೆ ಕಾಲುವೆಗಳನ್ನು ದುರಸ್ಥಿ ಮಾಡಿಸಬೇಕಾಗುತ್ತದೆ. ಇಷ್ಟು ಹಣ ಯಾವುದಕ್ಕೂ ಸಾಕಾಗುವುದಿಲ್ಲ" ಎಂದು ಹೇಳಿದ್ದಾರೆ.

"ಈ ವರ್ಷ ನಮಗೆ ನಿಗದಿತ ಸಮಯದಲ್ಲಿ ನೀರು ಬಿಡುವುದಿಲ್ಲ. ಈಗ ನಾವು ಭತ್ತವನ್ನು ನಾಟಿ ಮಾಡಿದ್ದೇವೆ ಇನ್ನು ನಮಗೆ ನೀರು ಬಿಡುತ್ತಿಲ್ಲ. ನಾವು ವ್ಯವಸಾಯವನ್ನು ನೆಚ್ಚಿಕೊಂಡು ಕೆಲಸ ಮಾಡುತ್ತೇವೆ. ಕಾಲುವೆಗಳನ್ನು ದುರಸ್ಥಿ ಮಾಡಿಕೊಡಿ ಎಂದು ಕೇಳಿದರೆ ಹಣ ಇಲ್ಲ ಎಂದು ಹೇಳುತ್ತಾರೆ. ಇದರಿಂದಾಗಿ ಕೆಳ ಹಂತದ ತನಕ ನೀರು ಬರುವುದಿಲ್ಲ" ಎಂದು ವೆಂಕಟಾಪುರ ಗ್ರಾಮದ ರೈತ ಅಂಜಿನಪ್ಪ ದೂರಿದ್ದಾರೆ.

English summary
Vyasanakere upper project need proper maintenance. Farmers urged the officials to take action on the issue. Project is at Hospet in Vijayanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X