ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕ; ಆಯ್ದ ಮಾರ್ಗದಲ್ಲಿ ಸರ್ಕಾರಿ ಬಸ್ ದರ ಇಳಿಕೆ

|
Google Oneindia Kannada News

ಬಳ್ಳಾರಿ, ಅಕ್ಟೋಬರ್ 29: ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಸಾರಿಗೆ ಸಂಸ್ಥೆಗಳಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.

ಗುರುವಾರ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಬಳ್ಳಾರಿ-ಬೆಂಗಳೂರು ರಾಜಹಂಸ ಸಾರಿಗೆ ಹಾಗೂ ಬಳ್ಳಾರಿ-ಶಿವಮೊಗ್ಗ, ಬಳ್ಳಾರಿ-ದಾವಣಗೆರೆ ಮಾರ್ಗಗಳಲ್ಲಿ ಮಾತ್ರ ಪ್ರಯಾಣ ದರ ಇಳಿಕೆ ಮಾಡಲಾಗಿದೆ.

ಫೋಟೋ ಶೂಟ್‌ಗೆ ಕೆಎಸ್ಆರ್‌ಟಿಸಿ ಬಸ್ ಬಾಡಿಗೆಗೆ ಲಭ್ಯ! ಫೋಟೋ ಶೂಟ್‌ಗೆ ಕೆಎಸ್ಆರ್‌ಟಿಸಿ ಬಸ್ ಬಾಡಿಗೆಗೆ ಲಭ್ಯ!

 NEKRTC Reduced Bus Fare In Selected Routes

ಬಸ್ ಪ್ರಯಾಣ ದರ ಇಳಿಕೆಯನ್ನು ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಆಯ್ದ ಮಾರ್ಗಗಳಿಗೆ ಮಾತ್ರ ದರ ಕಡಿತ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ರಸ್ತೆಗಿಳಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್; ವಿಶೇಷತೆಗಳು ಬೆಂಗಳೂರು ರಸ್ತೆಗಿಳಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್; ವಿಶೇಷತೆಗಳು

ಪ್ರತಿದಿನ ಬೆಳಗ್ಗೆ 8.30ಕ್ಕೆ ಬಳ್ಳಾರಿ-ಶಿವಮೊಗ್ಗ, ಬೆಳಗ್ಗೆ 9ಕ್ಕೆ ಬಳ್ಳಾರಿ-ದಾವಣಗೆರೆ ಹಾಗೂ ರಾತ್ರಿ 10.15ಕ್ಕೆ ಬಳ್ಳಾರಿ-ಬೆಂಗಳೂರು ಮಾರ್ಗದಲ್ಲಿ ವೇಗದೂತ, ರಾಜಹಂಸ ಬಸ್‌ಗಳು ಸಂಚಾರ ನಡೆಸುತ್ತವೆ.

ಲಾಕ್ ಡೌನ್ ಅಂತ್ಯ; ಎಲ್ಲಾ ಬಸ್ ಸಂಚಾರ ಆರಂಭಿಸಿದ NWKRTC ಲಾಕ್ ಡೌನ್ ಅಂತ್ಯ; ಎಲ್ಲಾ ಬಸ್ ಸಂಚಾರ ಆರಂಭಿಸಿದ NWKRTC

ದರ ಇಳಿಕೆ ಪಟ್ಟಿ ಹೀಗಿದೆ

* ಬಳ್ಳಾರಿ-ಚಿತ್ರದುರ್ಗ ಮಾರ್ಗ 146 ರೂ., ಬಳ್ಳಾರಿ-ಚಳ್ಳಕೆರೆ ಮಾರ್ಗ 113 ರೂ.
* ಚಳ್ಳಕೆರೆ-ಚಿತ್ರದುರ್ಗ ಮಾರ್ಗ 30 ರೂ., ಚಿತ್ರದುರ್ಗ-ದಾವಣಗೆರೆ ಮಾರ್ಗ 60 ರೂ.
* ಚಿತ್ರದುರ್ಗ-ಶಿವಮೊಗ್ಗ ಮಾರ್ಗ 90 ರೂ.
* ಬಳ್ಳಾರಿ-ಬೆಂಗಳೂರು ಮಾರ್ಗ 421 ರೂ.
* ಚಳ್ಳಕೆರೆ-ಬೆಂಗಳೂರು ಮಾರ್ಗ 260 ರೂ.
* ಹಿರಿಯೂರು-ಬೆಂಗಳೂರು ಮಾರ್ಗ 260 ರೂ.

English summary
North Eastern Karnataka Road Transport Corporation announced bus fare reduced in selected routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X