ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೇ ಪರಾಕ್'! ಕಾರಣಿಕ ಭವಿಷ್ಯ ಹೀಗಿದೆ

|
Google Oneindia Kannada News

Recommended Video

ಕಾರಣಿಕ ನುಡಿದ ಭವಿಷ್ಯದಂತೆ ರಾಜ್ಯದಲ್ಲಿ ಈ ವರ್ಷ ಏನಾಗುತ್ತೆ? | Oneindia Kannada

ಬಳ್ಳಾರಿ, ಫೆಬ್ರವರಿ 11: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ಫೆಬ್ರವರಿ 11ರಂದು ಹೊರಬಿದ್ದಿದ್ದು, "ಅಂಬಲಿ ರಾಶಿ ಮುದ್ದಿನ ಗಿಣಿ ಸಮೃದ್ಧಿ ಐತಲೆ ಪರಾಕ್' ಎಂದು ಗೊರವಪ್ಪ ನುಡಿದಿದ್ದಾನೆ.

ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದೇ ಈ ಭಾಗದಲ್ಲಿ ನಂಬಲಾಗುವ ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಿರುವುದಕ್ಕೂ ದಶಕಗಳ ಇತಿಹಾಸವಿದೆ. ಮುಂದೆ ಓದಿ..

ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!

ಈ ಬಾರಿಯ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿರುವ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದ್ದು, ಜನ ನೆಮ್ಮದಿ, ಸಹಬಾಳ್ವೆಯಿಂದ ಬದುಕುತ್ತಾರೆ ಎಂದು ಅರ್ಥೈಸಬಹುದಾಗಿದೆ. ರಾಜಕೀಯವಾಗಿಯೂ ಎಲ್ಲ ಗೊಂದಲಗಳು ಮುಗಿದಿದ್ದು, ಸರ್ಕಾರ ಸುಸ್ಥಿರವಾಗಿ ಇರುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಸದ್ಯ ಅಧಿಕಾರ ನಡೆಸುವ ಪಕ್ಷಗಳಿಗೆ ವಿಘ್ನ ಇಲ್ಲ ಎಂದು ವಿಶ್ಲೇಸಿದ್ದಾರೆ.

ಮೈಲಾರಲಿಂಗೇಶ್ವರನಿಗೆ ನೈವೇದ್ಯ

ಮೈಲಾರಲಿಂಗೇಶ್ವರನಿಗೆ ನೈವೇದ್ಯ

ಕಾರ್ಣಿಕೋತ್ಸವಕ್ಕೆ ರಾಣೇಬೆನ್ನೂರು, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಕಾರ್ಣಿಕ ಕೇಳಲು ಜಮಾಯಿಸಿದ್ದರು.

ಸುಕ್ಷೇತ್ರದ ದೇಗುಲ ಆವರಣ ಮತ್ತು ಡೆಂಕನಮರಡಿಯಲ್ಲಿ ಹರಕೆ ಹೊತ್ತ ಲಕ್ಷಾಂತರ ಭಕ್ತರು ವಿಶೇಷವಾಗಿ ಹಾಲು, ಬಾಳೆಹಣ್ಣು, ತುಪ್ಪ, ಹೋಳಿಗೆಯನ್ನು ಮೈಲಾರ ಲಿಂಗೇಶ್ವರನಿಗೆ ನೈವೇದ್ಯ ಮಾಡಿದರು.

ಗೊರವಯ್ಯ ನುಡಿಯುವ ಭವಿಷ್ಯ

ಗೊರವಯ್ಯ ನುಡಿಯುವ ಭವಿಷ್ಯ

ಗೊರವಯ್ಯ ನುಡಿಯುವ ಭವಿಷ್ಯ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.

ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ

ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ

ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.

ಮೈಲಾರ ಲಿಂಗ ಕ್ಷೇತ್ರ ತಲುಪುವುದು ಹೇಗೆ?

ಮೈಲಾರ ಲಿಂಗ ಕ್ಷೇತ್ರ ತಲುಪುವುದು ಹೇಗೆ?

ಬಳ್ಳಾರಿ ಜಿಲ್ಲೆ ಹಡಗಲಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯವಿದೆ. ಹಡಗಲಿಯಿಂದ ಈ ಕ್ಷೇತ್ರಕ್ಕೆ 40 ಕಿ.ಮೀ ಹಾಗೂ ರಾಣೆ ಬೆನ್ನೂರಿನಿಂಡ 34 ಕಿ.ಮೀ ಆಗುತ್ತದೆ. ಗೊರವ ಸಮುದಾಯದ ಅಧಿದೇವತೆ ಪರಮ ಶಿವನನ್ನು ಇಲ್ಲಿ ಮೈಲಾರ ಲಿಂಗರೂಪಿಯಾಗಿ ಪೂಜಿಸಲಾಗುತ್ತದೆ. ಕಂಬಳಿ ಹೊದ್ದು, ಢಮರುಗ ಹಿಡಿದು ಹಣೆಯಲ್ಲಿ ಭಂಡಾರ ತೊಟ್ಟು ಮೈಲಾರಿ ವೇಷಧಾರಿಯಾಗಿ ಶಿವನನ್ನು ಪೂಜಿಸಲಾಗುತ್ತದೆ. ಮಲ್ಲಾಸುರ, ಮಣಿಕಾಸುರನನ್ನು ಮೈಲಾರ ರೂಪದಲ್ಲಿ ಅವತರಿಸಿದ ಶಿವ ಕೊಂದು ಹಾಕಿದ್ದು ಪೌರಣಿಕ ಕಥೆಗಳಲ್ಲಿ ಓದಬಹುದು.

English summary
Goravappa said today that Mylara Lingeshwara Karnika in Mylara,Hoovinahadagali Taluk Bellary district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X