• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡಿಕೆ ಶಿವಕುಮಾರ್ ದುಃಸ್ಥಿತಿಗೆ ಮೈಲಾರಲಿಂಗದ ಶಾಪವೆ ಕಾರಣವೇ?

|

"ಕೊಂಕಣ ಸುತ್ತಿ ಮೈಲಾರಕ್ಕೆ ಬರಲಿಲ್ಲ, ಹೆಲಿಕಾಪ್ಟರ್ ಏರಿ ಬಂದರು ಈಗ ತೊಂದರೆ ಅನುಭವಿಸುತ್ತಿದ್ದಾರೆ" ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಇಂದಿನ ದುಃಸ್ಥಿತಿಗೆ ಅಂದು ಮೈಲಾರ ಲಿಂಗ ದೇಗುಲದ ಬಳಿ ನಡೆದ ಅಪಚಾರವೆ ಕಾರಣ ಎಂದು ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​​ ಅಭಿಪ್ರಾಯಪಟ್ಟಿದ್ದಾರೆ.

   Karnataka Crisis : ಕರ್ನಾಟಕ ರಾಜಕೀಯದ ಬಗ್ಗೆ ಮೈಲಾರದ ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ | ONeindia Kannada

   ಮನಿಲಾಂಡ್ರಿಂಗ್ ಪ್ರಕರಣದಲ್ಲಿ ಕಳೆದ 13 ದಿನಗಳಿಂದ ಸತತವಾಗಿ ವಿಚಾರಣೆಗೊಳಪಟ್ಟ ನಂತರವೂ ಡಿಕೆ ಶಿವಕುಮಾರ್ ಬಿಡುಗಡೆಯಾಗಿಲ್ಲ. ಸೆ. 19ರ ತನಕ ಮತ್ತೆ ಜಾರಿ ನಿರ್ದೇಶನಾಲಯ ಅಧಿಕಾರಗಳ ವಶಕ್ಕೆ ನೀಡಿ ವಿಶೇಷ ನ್ಯಾಯಾಲಯವು ಸೆ.13ರಂದು ಆದೇಶ ಹೊರಡಿಸಿದೆ.

   ಗೊರವಪ್ಪನ ಕಾರ್ಣಿಕ ಭವಿಷ್ಯ ನಿಜವಾಯ್ತು, ಜೆಡಿಎಸ್ ಗೆ ಪವರ್!

   ಮನಿಲಾಂಡ್ರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ ಬಳಿಕ ಅವರ ಆಪ್ತರಾದ ಸಚಿನ್ ನಾರಾಯಣ್, ಆಂಜನೇಯ, ಸುಶೀಲ್ ಶರ್ಮಾ ಅವರ ವಿಚಾರಣೆಯೂ ನಡೆದಿದೆ. ಇದಲ್ಲದೆ, ಡಿಕೆಶಿ ಮಗಳು ಐಶ್ವರ್ಯಾ ವಿಚಾರಣೆಯನ್ನು ನಡೆಸಲಾಗಿದೆ.

   ಕನಕಪುರ ತಾಲೂಕಿನ ದೊಡ್ಡ ಅಲಹಳ್ಳಿ ಗ್ರಾಮದ ಕೆಂಪೇಗೌಡ, ಗೌರಮ್ಮ ದಂಪತಿಯ ಮಗ ಡಿಕೆ ಶಿವಕುಮಾರ್ ಉದ್ಯಮಿ, ಸಮಾಜ ಸೇವಕ, ಶಿಕ್ಷಣ ಸಂಸ್ಥೆಗಳ ಪಾಲಕ, ಕಾಂಗೆಸ್ಸಿನ ಟ್ರಬಲ್ ಶೂಟರ್ ಎನಿಸಿಕೊಂಡರೂ ಈ ರೀತಿ ಸಂಕಷ್ಟಕ್ಕೆ ಸಿಲುಕಲು ಮೈಲಾರ ಲಿಂಗ ದೇಗುಲದ ಬಳಿ ನಡೆದ ಅಪಚಾರವೆ ಕಾರಣ ಎಂದು ಈಗ ನಂಬಲಾಗಿದೆ.

   ಅದಾನಿ ಸಂಸ್ಥೆಗೂ ನಿಮ್ಗೂ ಏನ್ ಸಂಬಂಧ? ಐಶ್ವರ್ಯಾಗೆ 'ಇಡಿ' ಹಿಟ್

   ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವತಿಯಿಂದ ನಡೆಯುವ ಕಾರ್ಣಿಕ ಭವಿಷ್ಯ ವಾಣಿ ಕಾರ್ಯಕ್ರಮ ನೋಡಲು ಡಿಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಬಂದಿದ್ದು, ಈ ವೇಳೆ ಅವರ ಹೆಲಿಕಾಪ್ಟರ್​ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಕಾರ್ಣಿಕ ನುಡಿಯುವ ಡೆಂಕಣಮರಡಿ ಕ್ಷೇತ್ರದ ಮೇಲೆ ಹಾರಾಡಿದೆ. ಇದರಿಂದಾಗಿಯೇ ಡಿ.ಕೆ. ಶಿವಕುಮಾರ್​ ಅವರಿಗೆ ಸಂಕಷ್ಟ ಎದುರಾಗಿದೆ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​​ ಅವರು ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

   ಮೈಲಾರಲಿಂಗೇಶ್ವರ ದೇಗುಲದ ಜಾತ್ರೆ ಕಾರ್ಣಿಕ

   ಮೈಲಾರಲಿಂಗೇಶ್ವರ ದೇಗುಲದ ಜಾತ್ರೆ ಕಾರ್ಣಿಕ

   ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ಜಾತ್ರೆ ವೇಳೆ ಶತ ಶತಮಾನಗಳಿಂದ ಹೇಳುತ್ತಾ ಬರುತ್ತಿರುವ ಕಾರ್ಣಿಕ ಭವಿಷ್ಯದ ಮುನ್ನುಡಿ ಎಂಬುದು ಸಾಬೀತಾದಂತಾಗಿದೆ ಎಂದಿದ್ದಾರೆ.

   ನಾಡಿನ ಭವಿಷ್ಯವಾಣಿಯಾದ ಕಾರ್ಣಿಕ, ಶುಭಾಶುಭ ಫಲಗಳ ಬಗ್ಗೆ ಸಾರ್ವಜನಿಕರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವ ವಿಶ್ಲೇಷಣೆಗಳು, ವಿಶೇಷ ಅರ್ಥಗಳು ಕೇಳುತ್ತಿದ್ದು, ಪರಸ್ಪರ ಚರ್ಚೆಗಳಿಗೆ ಕಾರಣವಾಗಿದೆ. ವ್ಯಾಪಾರದಲ್ಲಿ ಲಾಭ ನಷ್ಟ ಏರುಪೇರು, ರೈತರು ಈ ಬಾರಿ ಸಾಧಾರಣ ಮಳೆ, ರಾಜಕೀಯವಾಗಿ ಪಕ್ಷ ಒಡೆಯುವ ಸಂಭವ ಹೀಗೆ ಚರ್ಚೆಗಳು ಅರ್ಥಗಳು ನಡೆದಿವೆ.

   2018ರ ಕಾರ್ಣಿಕದ ದಿನ ನಡೆದಿದ್ದೇನು?

   2018ರ ಕಾರ್ಣಿಕದ ದಿನ ನಡೆದಿದ್ದೇನು?

   ಮೈಲಾರ ಲಿಂಗ ಕ್ಷೇತ್ರಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಬರುತ್ತಾರೆ. ಇಲ್ಲವೇ ಎತ್ತಿನ ಬಂಡಿ, ವಾಹನದಲ್ಲಿ ಅನುಕೂಲಕ್ಕೆ ತಕ್ಕಂತೆ ಬರುವ ಸಂಪ್ರದಾಯವಿದೆ. ಈ ಮುಂಚೆ ಕೊಂಕಣ ಪ್ರದೇಶವನ್ನು ಸುತ್ತಿ ಮೈಲಾರಕ್ಕೆ ಬರುತ್ತಿದ್ದರಂತೆ ಹಾಗಾಗಿ ಗಾದೆಯೂ ಪ್ರಚಲಿತವಾಗಿದೆ. 2018ರಲ್ಲಿ ಕಾರ್ಣಿಕ ಭವಿಷ್ಯ ವಾಣಿ ಕಾರ್ಯಕ್ರಮ ನೋಡಲು ಡಿಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಬಂದಿದ್ದರು. ಈ ವೇಳೆ ಅವರ ಹೆಲಿಕಾಪ್ಟರ್​ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಕಾರ್ಣಿಕ ನುಡಿಯುವ ಡೆಂಕಣಮರಡಿ ಕ್ಷೇತ್ರದ ಮೇಲೆ ಹಾರಾಡಿದೆ. ಇದರಿಂದ ಡಿ.ಕೆ. ಶಿವಕುಮಾರ್​ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.

   ತಪ್ಪಿಗೆ ಪ್ರಾಯಶ್ಚಿತವಿಲ್ಲವೇ?

   ತಪ್ಪಿಗೆ ಪ್ರಾಯಶ್ಚಿತವಿಲ್ಲವೇ?

   2008ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ಹೆಲಿಕಾಪ್ಟರ್​ ಮೂಲಕ ಈ ಕ್ಷೇತ್ರಕ್ಕೆ ಆಗಮಿಸಿದ್ದರು. ನಂತರ ಅವರ ಬದುಕಲ್ಲೂ ಸಾಕಷ್ಟು ಕಷ್ಟ ನೋವು, ಅವಮಾನ ಎದುರಿಸಬೇಕಾಗಿ ಬಂದಿತು. ಈಗ ಡಿ.ಕೆ. ಶಿವಕುಮಾರ್​ ಆದಷ್ಟು ಬೇಗ ಕ್ಷೇತ್ರಕ್ಕೆ ಬಂದು ಸ್ವಾಮಿಯ ದರ್ಶನ ಪಡೆದು, ತಪ್ಪು ಕಾಣಿಕೆ ಹಾಕಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೊಂದೇ ಮಾರ್ಗ ಎಂದು ವೆಂಕಪ್ಪಯ್ಯ ಹೇಳಿದ್ದಾರೆ.

   ಕಟ್ಟು ನಿಟ್ಟಿನ ವ್ರತಧಾರಿಯಿಂದ ಕಾರ್ಣಿಕ ಭವಿಷ್ಯ

   ಕಟ್ಟು ನಿಟ್ಟಿನ ವ್ರತಧಾರಿಯಿಂದ ಕಾರ್ಣಿಕ ಭವಿಷ್ಯ

   ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ.

   ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.

   ಮೈಲಾರ ಲಿಂಗ ತಲುಪುವುದು ಹೇಗೆ?

   ಮೈಲಾರ ಲಿಂಗ ತಲುಪುವುದು ಹೇಗೆ?

   ಬಳ್ಳಾರಿ ಜಿಲ್ಲೆ ಹಡಗಲಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯವಿದೆ. ಹಡಗಲಿಯಿಂದ ಈ ಕ್ಷೇತ್ರಕ್ಕೆ 40 ಕಿ.ಮೀ ಹಾಗೂ ರಾಣೆ ಬೆನ್ನೂರಿನಿಂಡ 34 ಕಿ.ಮೀ ಆಗುತ್ತದೆ. ಗೊರವ ಸಮುದಾಯದ ಅಧಿದೇವತೆ ಪರಮ ಶಿವನನ್ನು ಇಲ್ಲಿ ಮೈಲಾರ ಲಿಂಗರೂಪಿಯಾಗಿ ಪೂಜಿಸಲಾಗುತ್ತದೆ. ಕಂಬಳಿ ಹೊದ್ದು, ಢಮರುಗ ಹಿಡಿದು ಹಣೆಯಲ್ಲಿ ಭಂಡಾರ ತೊಟ್ಟು ಮೈಲಾರಿ ವೇಷಧಾರಿಯಾಗಿ ಶಿವನನ್ನು ಪೂಜಿಸಲಾಗುತ್ತದೆ. ಮಲ್ಲಾಸುರ, ಮಣಿಕಾಸುರನನ್ನು ಮೈಲಾರ ರೂಪದಲ್ಲಿ ಅವತರಿಸಿದ ಶಿವ ಕೊಂದು ಹಾಕಿದ ಪೌರಾಣಿಕ ಕಥೆಗಳಲ್ಲಿ ಓದಬಹುದು.

   ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

   English summary
   Mylara Lingeshwara Annual Karnika Utsava and Utterance Predication on DK Shivakumar has come true sadi Temple Dharmadarshi Venkappaiah Odeyar. Karnikotsava is annual fair in Mylara Lingeshwara Temple in Hoovina Hadagali Taluk, Ballari.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X