• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಮೈಲಾರ ಕಾರ್ಣಿಕ ಅನುಮಾನ: ಕಳೆದ ವರ್ಷ ಭವಿಷ್ಯ ನುಡಿದಿದ್ದೇನು, ಆಗಿದ್ದೇನು?

|
Google Oneindia Kannada News

ಐತಿಹಾಸಿಕ ಬಳ್ಳಾರಿ ಜಿಲ್ಲೆ ಹೂವಿನಹಡಗಲಿನ ಮೈಲಾರಲಿಂಗೇಶ್ವರ ದೇವಾಲಯದ ಜಾತ್ರೆ ಮತ್ತು ಸಾಂಪ್ರದಾಯಿಕ ಕಾರ್ಣಿಕೋತ್ಸವ ಈ ಬಾರಿ ನಡೆಯುವುದು ಅನುಮಾನವಾಗಿದೆ.

ಇದೇ ತಿಂಗಳ ರಥಸಪ್ತಮಿಯ ದಿನವಾದ ಫೆಬ್ರವರಿ 19ರಿಂದ ಮಾರ್ಚ್ ಎರಡರವರೆಗೆ ಈ ಜಾತ್ರೆ ನಡೆಯಬೇಕಿತ್ತು. ಆದರೆ, ಫೆಬ್ರವರಿ ಮೊದಲ ವಾರದಲ್ಲಿ ಜಿಲ್ಲಾಡಳಿತ ಜಾತ್ರೆ ನಿಷೇಧಿಸಿ ಆದೇಶ ಹೊರಡಿಸಿತ್ತು.

2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!2021 ರಿಂದ 2029ರ ವರೆಗಿನ ಪ್ರಧಾನಿ ಮೋದಿ ಕುಂಡಲಿ ಭವಿಷ್ಯ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ!

ಈಗ, ಜಾತ್ರೆಗೆ ಸರಕಾರ ಅನುಮತಿ ನೀಡಿರುವುದರಿಂದ ಈ ಜಾತ್ರೆಯ ಬಗ್ಗೆ ಬಳ್ಳಾರಿ ಜಿಲ್ಲಾಡಳಿತವಾಗಲಿ ಅಥವಾ ದೇವಾಲಯದ ಕಡೆಯಿಂದ ಸ್ಪಷ್ಟನೆ ಬರಬೇಕಷ್ಟೇ. ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತರು ಈ ಕಾರ್ಣಿಕ ಕೇಳಲು ಆಗಮಿಸುತ್ತಾರೆ.

 ವಿಭಜನೆ-ರಚನೆ ಬಳಿಕ ಹೇಗಿರಲಿವೆ ಬಳ್ಳಾರಿ-ವಿಜಯನಗರ ಜಿಲ್ಲೆಗಳು? ವಿಭಜನೆ-ರಚನೆ ಬಳಿಕ ಹೇಗಿರಲಿವೆ ಬಳ್ಳಾರಿ-ವಿಜಯನಗರ ಜಿಲ್ಲೆಗಳು?

ಮೈಲಾರ ಜಾತ್ರೆಯಲ್ಲಿ ನುಡಿಯಲಾಗುವ ಕಾರ್ಣಿಕೋತ್ಸವ ದೇಶದ ಮುಂದಿನ ವಿದ್ಯಮಾನಕ್ಕೆ ದಿಕ್ಸೂಚಿ ಎಂಬ ವಾಡಿಕೆ ಇರುವುದರಿಂದ ಈ ಕಾರ್ಣಿಕ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ಬಾರಿ ಕಾರ್ಣಿಕದಲ್ಲಿ ನುಡಿದಿದ್ದೇನು, ಆಗಿದ್ದೇನು? ಮುಂದೆ ಓದಿ..

ಮೈಲಾರದ ಸ್ವಾಮೀಜಿಯವರಾದ ಕಪಿಲಮುನಿ ಶ್ರೀಗಳು

ಮೈಲಾರದ ಸ್ವಾಮೀಜಿಯವರಾದ ಕಪಿಲಮುನಿ ಶ್ರೀಗಳು

"ಕೋವಿಡ್ ಇರುವ ಹಿನ್ನಲೆಯಲ್ಲಿ ಜಾತ್ರೆಯನ್ನು ರದ್ದು ಮಾಡುವ ನಿರ್ಧಾರಕ್ಕೆ ಸರಕಾರ ಬಂದಿದೆ. ನಾವೆಲ್ಲರೂ ಇದನ್ನು ಪಾಲಿಸಬೇಕಿದೆ"ಎಂದು ಮೈಲಾರದ ಸ್ವಾಮೀಜಿಯವರಾದ ಕಪಿಲಮುನಿ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದರು. ಆದರೆ, ರಾಜ್ಯದಲ್ಲಿ ಜಾತ್ರೆಯ ಮೇಲಿದ್ದ ನಿಷೇಧವನ್ನು ಸರಕಾರ ಹಿಂದಕ್ಕೆ ಪಡೆದುಕೊಂಡಿದೆ.

'ಸಂಪಾಯಿತಲೇ ಪರಾಕ್' ಎನ್ನುವ ಭವಿಷ್ಯ

'ಸಂಪಾಯಿತಲೇ ಪರಾಕ್' ಎನ್ನುವ ಭವಿಷ್ಯ

ಕಳೆದ ಬಾರಿ ಲಕ್ಷಾಂತರ ಭಕ್ತರ ನಿಶ್ಯಬ್ಧತೆಯ ಮಧ್ಯೆ ಮೈಲಾರದ ಗೊರವಪ್ಪ 'ಸಂಪಾಯಿತಲೇ ಪರಾಕ್' ಎನ್ನುವ ಭವಿಷ್ಯವನ್ನು ನುಡಿದಿದ್ದರು. ಕಳೆದ ವರ್ಷ ಫೆಬ್ರವರಿ ಹನ್ನೊಂದರಂದು ಕಾರ್ಣಿಕ ನುಡಿಯಲಾಗಿತ್ತು. ಈ ಭಾಗದಲ್ಲಿ ಕಾರ್ಣಿಕದ ಮೇಲೆ ಅಪಾರ ನಂಬಿಕೆಯಿದೆ. ಈಶ್ವರನೇ ಗೊರವಪ್ಪನ ರೂಪದಲ್ಲಿ ದೈವವಾಣಿ ನುಡಿಯುತ್ತಾನೆಂದೇ ಈ ಭಾಗದಲ್ಲಿ ನಂಬಲಾಗುತ್ತದೆ.

ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದೆ

ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದೆ

ಈ ಕಾರ್ಣಿಕದ ನಿಜವಾದ ಅರ್ಥ ಏನೇ ಇರಲಿ, ಭಕ್ತರು ತಮಗೆ ಬೇಕಾದ ಹಾಗೇ ಅರ್ಥೈಸಿಕೊಳ್ಳುತ್ತಾರೆ. ಆ ಕಾರ್ಣಿಕ ನುಡಿಯನ್ನು ವಿಶ್ಲೇಷಣೆ ಮಾಡಿದ್ದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, "ರಾಜ್ಯದಲ್ಲಿ ಸಮೃದ್ಧವಾದ ಮಳೆ, ಬೆಳೆಯಾಗಲಿದ್ದು, ಜನ ನೆಮ್ಮದಿ, ಸಹಬಾಳ್ವೆಯಿಂದ ಬದುಕುತ್ತಾರೆ ಎಂದು ಅರ್ಥೈಸಬಹುದಾಗಿದೆ. ರಾಜಕೀಯವಾಗಿಯೂ ಎಲ್ಲ ಗೊಂದಲಗಳು ಮುಗಿದಿದ್ದು, ಸರ್ಕಾರ ಸುಸ್ಥಿರವಾಗಿ ಇರುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ಸದ್ಯ ಅಧಿಕಾರ ನಡೆಸುವ ಪಕ್ಷಗಳಿಗೆ ವಿಘ್ನ ಇಲ್ಲ" ಎಂದು ವಿಶ್ಲೇಸಿದ್ದರು.

ಕೊರೊನಾ ಅಟಕಾಯಿಸಿಕೊಂಡಾಗಿತ್ತು

ಕೊರೊನಾ ಅಟಕಾಯಿಸಿಕೊಂಡಾಗಿತ್ತು

ಆದರೆ, ಆ ವೇಳೆಯಲ್ಲಿ ಅಂದರೆ ಕಳೆದ ವರ್ಷ ಫೆಬ್ರವರಿಯಲ್ಲಿ ಕೊರೊನಾ ಅಟಕಾಯಿಸಿಕೊಂಡಾಗಿತ್ತು. ಜನರ ಬದುಕನ್ನು ಮೂರಾಬಟ್ಟೆ ಮಾಡಿದ್ದ ಕೋವಿಡ್ ನಿಂದಾಗಿ, ನೆಮ್ಮದಿ, ಶಾಂತಿ ಹಾಳಾಗಿ ಹೋಗಿತ್ತು. ಸಾರ್ವಜನಿಕ ಜೀವನ ಅಸ್ತವ್ಯಸ್ತವಾಗಿತ್ತು. ಲಕ್ಷಾಂತರ ಜನರು ಈ ವೈರಸ್ ಗೆ ಬಲಿಯಾಗಿದ್ದರು.

English summary
Mylara Karnika Doubtful In 2021 Due To Covid Restriction: What Prediction Came Out Last Time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X