• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಮುತ್ತಿನ ಗಂಟಿನ' ಬಗ್ಗೆ ಮೈಲಾರ ಕಾರ್ಣಿಕ ಭವಿಷ್ಯ

By Mahesh
|

ಹೂವಿನ ಹಡಗಲಿ(ಬಳ್ಳಾರಿ), ಫೆ.6: ರಾಜ್ಯ ಮತ್ತು ರಾಷ್ಟ್ರದ ಬೆಳೆ, ಜನಜೀವನ, ರಾಜಕೀಯ ಸ್ಥಿತಿಗತಿಗಳ ಮುನ್ನೋಟವನ್ನೇ ಬಿಂಬಿಸುವ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ 115ನೇ ಕಾರ್ಣಿಕೋತ್ಸವ ಗುರುವಾರ ನಡೆಯಿತು.

ಸುಕ್ಷೇತ್ರ ಡೆಂಕನಮರಡಿಯಲ್ಲಿ ಕಾರ್ಣಿಕದ ಗೊರವಯ್ಯ ಮಂಜಪ್ಪ, ಕಾರ್ಣಿಕ ನುಡಿಯಲೆಂದೇ 11 ದಿನಗಳ ಕಠಿಣ ಉಪವಾಸ ವ್ರತ ಆಚರಿಸಿದರು. ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕುದುರೆ ಏರಿ ಬಂದು ಒಂದು ಸುತ್ತು ಪ್ರದಕ್ಷಿಣೆ ಹಾಕಿ, ಕಾರ್ಣಿಕ ನುಡಿಯುವ ಗೊರವಯ್ಯ ಅವರಿಗೆ ಆಶೀರ್ವದಿಸಿದರು.

ಮುಸ್ಸಂಜೆ ವೇಳೆಗೆ ತುಪ್ಪ ಹಚ್ಚಿದ 20 ಅಡಿಯ ಬಿಲ್ಲು ಏರಿದರು. ಲಕ್ಷಾಂತರ ಭಕ್ತರು ಹಾಗೂ ದಶ ದಶದಿಕ್ಕುಗಳತ್ತ ದಷ್ಟಿ ಹಾಯಿಸಿದ ಗೊರವಯ್ಯ ಒಂದು ಬಾರಿ, ''ಸದ್ದಲೇ...'' ಎಂದರು. ಸುತ್ತ ನಿಶಬ್ದ ಮನೆ ಮಾಡಿತು. ''ಮುತ್ತಿನ ಗಂಟು ಮೂರಾದಿತಲೆ ಪರಾಕ್'' ಎಂದು ಕಾರ್ಣಿಕ ನುಡಿದ ಗೊರವಯ್ಯ ಕೆಳಗೆ ಬಿದ್ದರು. ನಂತರ ಏನಿದ್ದರೂ ಕಾರ್ಣಿಕ ನುಡಿದ ಭವಿಷ್ಯ ಅರ್ಥ ಹುಡುಕುವುದೇ ನೆರೆದಿದ್ದವರ ಕೆಲಸವಾಯಿತು.. ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವದ ಚಿತ್ರಗಳು ನಿಮ್ಮ ಮುಂದೆ...

ಮೈಲಾರಕ್ಕೆ ಲಕ್ಷಾಂತರ ಮಂದಿ ಭಕ್ತರ ಆಗಮನ

ಮೈಲಾರಕ್ಕೆ ಲಕ್ಷಾಂತರ ಮಂದಿ ಭಕ್ತರ ಆಗಮನ

ಜಿಲ್ಲಾ ಮಟ್ಟದ ಅಧಿಕಾರಿಗಳು, 10 ಲಕ್ಷಕ್ಕೂ ಹೆಚ್ಚಿನ ಭಕ್ತಾದಿಗಳು, ಬಳ್ಳಾರಿ, ಗದಗ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಸೇರಿ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ ಜನಪ್ರತಿನಿಧಿಗಳು ಈ ಹೇಳಿಕೆಯನ್ನು ಅತ್ಯಂತ ಶ್ರದ್ಧೆ, ಭಕ್ತಿಯಿಂದ ಆಲಿಸುತ್ತಾರೆ. ಈ ಹೇಳಿಕೆ ಹೇಳುವ ಪೂರ್ವದಲ್ಲಿ ವ್ರತಧಾರಿ ಗೊರವಯ್ಯ ಬಿಲ್ಲನ್ನೇರಿ `ಸದ್ದಲೇ...' ಎಂದಾಗ ಇಡೀ ಸಮೂಹದಲ್ಲಿ ಮೌನ ಆವರಿಸುತ್ತದೆ.ಧಾರ್ಮಿಕ ವಿಶ್ಲೇಷಕರು ಈ ಹೇಳಿಕೆಗಳನ್ನು ತಮ್ಮದೇ ಆದ ರೀತಿ - ನೀತಿಗಳಲ್ಲಿ ವಿಶ್ಲೇಷಿಸುತ್ತಾರೆ.

ಕಾರಣಿಕ ಭವಿಷ್ಯದ ಅರ್ಥವಾದರೂ ಏನು?

ಕಾರಣಿಕ ಭವಿಷ್ಯದ ಅರ್ಥವಾದರೂ ಏನು?

ನಾಡಿನ ಭವಿಷ್ಯವಾಣಿಯಾದ ಕಾರ್ಣಿಕ, ಈ ಬಾರಿ ಅಶುಭವಾಗಿದೆ. ರಾಜಕೀಯ, ಸಾಮಾಜಿಕ ಹಾಗೂ ಇತರ ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರುವ ವಿಶ್ಲೇಷಣೆಗಳು, ವಿಶೇಷ ಅರ್ಥಗಳು ಕೇಳುತ್ತಿದ್ದು, ಪರಸ್ಪರ ಚರ್ಚೆಗಳಿಗೆ ಕಾರಣವಾಗಿದೆ.

ವ್ಯಾಪಾರದಲ್ಲಿ ಲಾಭ ನಷ್ಟ ಏರುಪೇರು, ರೈತರು ಈ ಬಾರಿ ಸಾಧಾರಣ ಮಳೆ, ರಾಜಕೀಯವಾಗಿ ಪಕ್ಷ ಒಡೆಯುವ ಸಂಭವ ಹೀಗೆ ಚರ್ಚೆಗಳು ಅರ್ಥಗಳು ನಡೆದಿವೆ.

ಗಣ್ಯಾತಿಗಣ್ಯರ ಆಗಮನ, ಗೊರವಯ್ಯನಿಗೆ ನಮನ

ಗಣ್ಯಾತಿಗಣ್ಯರ ಆಗಮನ, ಗೊರವಯ್ಯನಿಗೆ ನಮನ

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ್, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಜಿ.ಎಸ್.ಗಡ್ಡದ್ದೇವರಮಠ, ಕಾಗಿನೆಲೆ ಪೀಠದ ನಿರಂಜಾನಾನಂದ ಪುರಿ ಸ್ವಾಮೀಜಿ, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮೀಜಿ, ಜಿ.ಪಂ. ಸದಸ್ಯರಾದ ಜಿ.ವಸಂತ, ಶೋಭಾ ಬೆಂಡಿಗೆರೆ,ಈಶಾನ್ಯ ವಲಯದ (ಕಲಬುರಗಿ) ಐಜಿಪಿ ಸುನಿಲ್ ಅಗರವಾಲ್, ಜಿಲ್ಲಾಧಿಕಾರಿ ಸಮೀರ್ ಶುಕ್ಲ, ಎಸ್ಪಿ ಚೇತನ್‌ಸಿಂಗ್ ರಾಠೋಡ್, ಎಎಸ್ಪಿ ವಿಜಯ ಡಂಬಳ, ತಹಸೀಲ್ದಾರ್ ಕೆ.ವಿಜಯಕುಮಾರ, ಡಿವೈಎಸ್‌ಪಿ ಆರ್.ಎಸ್.ಪಾಟೀಲ್, ತಾಲೂಕು ಪಂಚಾಯಿತಿ ಅಧ್ಯಕ್ಷ ಐಗೋಳ ಚಿದಾನಂದ, ಪುರಸಭೆ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಸ್‌ಪಿಬಿ ಮಹೇಶ, ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ ಇತರರಿದ್ದರು.

ಮೈಲಾರ ಲಿಂಗ ಕ್ಷೇತ್ರ ತಲುಪುವುದು ಹೇಗೆ?

ಮೈಲಾರ ಲಿಂಗ ಕ್ಷೇತ್ರ ತಲುಪುವುದು ಹೇಗೆ?

ಬಳ್ಳಾರಿ ಜಿಲ್ಲೆ ಹಡಗಲಿಗೆ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಬಸ್ ಸೌಕರ್ಯವಿದೆ. ಹಡಗಲಿಯಿಂದ ಈ ಕ್ಷೇತ್ರಕ್ಕೆ 40 ಕಿ.ಮೀ ಹಾಗೂ ರಾಣೆ ಬೆನ್ನೂರಿನಿಂಡ 34 ಕಿ.ಮೀ ಆಗುತ್ತದೆ.

ಗೊರವ ಸಮುದಾಯದ ಅಧಿದೇವತೆ ಪರಮ ಶಿವನನ್ನು ಇಲ್ಲಿ ಮೈಲಾರ ಲಿಂಗರೂಪಿಯಾಗಿ ಪೂಜಿಸಲಾಗುತ್ತದೆ. ಕಂಬಳಿ ಹೊದ್ದು, ಢಮರುಗ ಹಿಡಿದು ಹಣೆಯಲ್ಲಿ ಭಂಡಾರ ತೊಟ್ಟು ಮೈಲಾರಿ ವೇಷಧಾರಿಯಾಗಿ ಶಿವನನ್ನು ಪೂಜಿಸಲಾಗುತ್ತದೆ. ಮಲ್ಲಾಸುರ, ಮಣಿಕಾಸುರನನ್ನು ಮೈಲಾರ ರೂಪದಲ್ಲಿ ಅವತರಿಸಿದ ಶಿವ ಕೊಂದು ಹಾಕಿದ್ದು ಪೌರಣಿಕ ಕಥೆಗಳಲ್ಲಿ ಓದಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 'gorava', a follower of Mylara Lingeshwara wearing a traditional overcoat of wool and headgear traditionally fasts for the 11 days of the jatra before prophesying on the penultimate day. Mylara is situated in the south-western corner of Hadagali taluk of the district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more