ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: Rank ಸಾಧನೆ ಮಾಡಿದ ಟೈಲರ್‌ ಮಗಳು

|
Google Oneindia Kannada News

ಬಳ್ಳಾರಿ, ಏಪ್ರಿಲ್ 30: ಜಿಲ್ಲೆಯ ಕುರುಗೋಡು ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಇಂದು ಖುಷಿಯೋ ಖುಷಿ. ಈ ಗ್ರಾಮದ ಹುಡುಗಿ ರಾಜ್ಯಮಟ್ಟದ ರ್ಯಾಂಕ್‌ ಪಡೆದಿದ್ದಾಳೆ.

ಗೊರವರ ಕಾವ್ಯಾಂಜಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದಿದ್ದಾಳೆ. ಅಪ್ಪಗ ಗ್ರಾಮೀಣ ಪ್ರತಿಭೆಯಾದ ಈಕೆ ಬಡತನದ ಕುಟುಂಬ ಹಿನ್ನೆಲೆ ಹೊಂದಿಯೂ ತನ್ನ ಸತತ ಪರಿಶ್ರಮದಿಂದಾಗಿ ತನ್ನ ಗ್ರಾಮ ಇಂದು ರಾಜ್ಯಮಟ್ಟದಲ್ಲಿ ಹೆಸರು ಪಡೆಯುವಂತೆ ಮಾಡಿದ್ದಾಳೆ.

ಯಾವ ಜಾತಿ ವಿದ್ಯಾರ್ಥಿಗಳು ಎಷ್ಟು ಫಲಿತಾಂಶ ಪಡೆದಿದ್ದಾರೆ?ಯಾವ ಜಾತಿ ವಿದ್ಯಾರ್ಥಿಗಳು ಎಷ್ಟು ಫಲಿತಾಂಶ ಪಡೆದಿದ್ದಾರೆ?

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಬಾದನಹಟ್ಟಿಯಲ್ಲೇ ಪೂರೈಸಿದ ಗೊರವರ ಕಾವ್ಯಾಂಜಲಿ ಆಕೆಯ ಮೆಚ್ಚಿನ ಶಿಕ್ಷಕ ಕುರುಗೋಡುನ ಸರ್ಕಾರಿ ಶಾಲೆಯ ಧರ್ಮಪ್ಪ ಮಾಸ್ತರ್ ಅವರ ಒತ್ತಾಸೆಯಂತೆ ಕೊಟ್ಟೂರಿನ 'ಇಂದೂ' ಕಾಲೇಜು ಸೇರಿದಳು. ಕುಟುಂಬದವರಿಂದ ದೂರ ಇದ್ದು ಕೊಟ್ಟೂರಿನ ಬಿಸಿಎಂ ಹಾಸ್ಟಲ್ ಸೇರಿ ಓದಿ ಈಗ ಮೇರು ಸಾಧನೆ ಮಾಡಿದ್ದಾಳೆ.

Motivational story of a village girl who seek rank in PU exam

'ನಮ್ಮಪ್ಪ ಟೈಲರ್, ಹಗಲೂ - ರಾತ್ರಿ ಕಷ್ಟಪಟ್ಟು ದುಡಿಯುತ್ತಾರೆ. ನಾವು ಮೂವರೂ ಹೆಣ್ಣುಮಕ್ಕಳು ಇದ್ದೇವೆ. ಅಕ್ಕ ಪಿಯುಸಿ ವಿದ್ಯಾರ್ಥಿನಿ, ತಂಗಿ ಎಸ್‍ಎಸ್‍ಎಲ್‌ಸಿ ಪರೀಕ್ಷೆ ಬರೆದಿದ್ದಾಳೆ' ಹೀಗೆ ತನ್ನ ಕುಟುಂಬ ಹಿನ್ನೆಲೆಯನ್ನು ಹೇಳುತ್ತಾ ಹೆಣ್ಣು ಮಕ್ಕಳು ಹೊರೆಯಲ್ಲ ಅವರು ದೇವರ ಪ್ರಸಾದ ಎನ್ನುವುದನ್ನು ಮನದಟ್ಟು ಮಾಡಿದ್ದಾಳೆ ಈ ಪೋರಿ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಹೈಲೈಟ್ಸ್ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದ ಹೈಲೈಟ್ಸ್

ಸುಖದ ಈ ಗಳಿಗೆಯಲ್ಲಿ ತನ್ನ ಹೆತ್ತವರನ್ನು ಮನತುಂಬಿ ನೆನೆಯುವ ಕಾವ್ಯಾಂಜಲಿ, 'ನನ್ನ ಮೇಲೆ ವಿಶ್ವಾಸವಿಟ್ಟು ನೂರಿಪ್ಪತ್ತು ಕಿಲೋಮೀಟರ್ ದೂರದ ಕೊಟ್ಟೂರುಗೆ ಕಳುಹಿಸಿಕೊಟ್ಟರು. ಅವರ ತ್ಯಾಗಕ್ಕೆ ಪ್ರತಿಫಲವಾಗಿ ಕಷ್ಟಪಟ್ಟು ಓದಿದೆ ಈಗ ಮೂರನೇ ರ್ಯಾಂಕ್ ಪಡೆದ್ದೇನೆ' ಎನ್ನುತ್ತಾಳೆ ಕಾವ್ಯಾಂಜಲಿ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಇನ್ನೂ ಹೆಚ್ಚಿನದನ್ನು ಸಾಧಿಸುವ ಮನಸ್ಸು ಮತ್ತು ಬುದ್ಧಿ ಎರಡನ್ನೂ ಹೊಂದಿರುವ ಕಾವ್ಯಾಂಜಲಿ ಮುಂದೆ ಕೆಎಎಸ್ ಮಾಡಬೇಕುನ್ನುವ ಗುರಿ ಹೊಂದಿದ್ದಾಳೆ. ಆಕೆಯ ಅಪ್ಪ-ಅಮ್ಮನದ್ದೂ ಅದೇ ಆಸೆ.

Motivational story of a village girl who seek rank in PU exam

ಮುಂದಿನ ಗುರಿಯ ಬಗ್ಗೆ ಸ್ಪಷ್ಟ ನೀಲಿ ನಕಾಶೆ ಈಗಲೇ ಕಾವ್ಯಾ ರಚಿಸಿಕೊಂಡು ಬಿಟ್ಟಿದ್ದಾಳೆ. ಅಪ್ಪ-ಅಮ್ಮನಿಗೆ ಮುಂದಿನ ನನ್ನ ಉನ್ನತ ವಿಧ್ಯಾಭ್ಯಾಸ ಹೊರೆಯಾಗಬಹುದು ಎಂಬ ಅರಿವು ಕಾವ್ಯಾಂಜಲಿಗಿದೆ. ಹಾಗಾಗಿ ಯಾರಾದರೂ ದಾನಿಗಳ ನೆರವು ಸಿಕ್ಕರೆ ಅಪ್ಪ-ಅಮ್ಮನ ಕಷ್ಟ ಕಡಿಮೆ ಆಗುತ್ತದೆ ಎಂಬ ಆಸೆ ಕಾವ್ಯಾಂಜಲಿಯದ್ದು.

ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಬಲು ದೊಡ್ಡದಿದೆ! ನೂರಕ್ಕೆ ನೂರು ಅಂಕ ಪಡೆದವರ ಸಂಖ್ಯೆ ಬಲು ದೊಡ್ಡದಿದೆ!

ಯಾವ ನೆರವೂ ಸಿಗಲಿಲ್ಲವೆಂದರೂ ಕಾವ್ಯಾಂಜಲಿಗೆ ಅಳುಕಿಲ್ಲ, ಆಕೆಯ ಗುರಿ ಸ್ಪಷ್ಟ, 'ಎಜುಕೇಶನ್ ಲೋನ್ ಮಾಡಿಯಾದರೂ ಉತ್ತಮ ವಿಧ್ಯಾಭ್ಯಾಸ ಪಡೆಯುತ್ತೇನೆ, ಅಪ್ಪ-ಅಮ್ಮನ ತ್ಯಾಗಕ್ಕೆ ಉತ್ತಮ ಪ್ರತಿಫಲ ತಂದುಕೊಡುತ್ತೇನೆ' ಎಂಬ ಅಛಲ ವಿಶ್ವಾಸ ಕಾವ್ಯಾಂಜಲಿಗಿದೆ.

ಅಕ್ಕನ ಸಾಧನೆ ಬಗ್ಗೆ ಖುಷಿಯಾಗಿರುವ ಭೂಮಿಕ ಗೋರವರ, ಇವತ್ತು ಅಕ್ಕನ ರಿಸಲ್ಟ್‌ ಎಂದು ಗೊತ್ತಿತ್ತು. ರ್ಯಾಂಕ್ ಬಂದಿದೆ ಅಂತ ಕೇಳಿ ಖುಷಿಯಿಂದ ಕುಣಿದುಬಿಟ್ಟೆ. ನಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದೇನೆ ನನ್ನ ರಿಸಲ್ಟ್‌ ಟೆನ್ಶನ್ ಇದೆ. ಏನಾಗುತ್ತೋ ದೇವರೇ ಬಲ್ಲ. ಆದರೆ ಈಗಂತೂ ಮನೆಯಲ್ಲಿ ಎಲ್ಲರೂ ಖುಷಿ ಪಡುತ್ತಿದ್ದೇವೆ' ಎಂದಳು.

English summary
Bellari district Badankatte village girl Kavyanjali achieved 3rd rank in karnataka 2pu exam. She was studied arts in Indu college. She aims to do IAS in future. she came from poor family but achieved great height.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X