ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಮ್ಮ-ಮಗಳು ಪಾಸು

|
Google Oneindia Kannada News

ಹೊಸಪೇಟೆ, ಮೇ 23: ಶಿಕ್ಷಣ ಪಡೆಯಲು ವಯಸ್ಸು ಮುಖ್ಯವಾಗಲ್ಲ, ಮನಸ್ಸೊಂದಿದ್ದರೆ ಯಾವ ವಯಸ್ಸಿನಲ್ಲಾದರೂ ವಿದ್ಯಾಭ್ಯಾಸ ಪಡೆಯಬಹುದು ಎಂದು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ. ತಾಯಿ ಮಗಳ ಜೊತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ತಾಯಿ-ಮಗಳು ಇಬ್ಬರೂ ಪಾಸಾಗಿದ್ದಾರೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ಸವಿತಾ (36) ಮಗಳು ಚೇತನಾ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು ಇಬ್ಬರೂ ಪಾಸಾಗಿದ್ದಾರೆ.

ಎಸ್ಎಸ್ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಎಂ ಶುಭಾಶಯ ಎಸ್ಎಸ್ಎಲ್‌ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಿಎಂ ಶುಭಾಶಯ

ಸವಿತಾ 2002-03ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರು. ಆದರೆ ಮದುವೆ ನಿಶ್ಚಯವಾದ ಕಾರಣ ಓದನ್ನು ಅರ್ಧದಲ್ಲೇ ನಿಲ್ಲಿಸಿದ್ದರು, ಈಗ ಮಗಳ ಜೊತೆ ತಾನೂ ಪರೀಕ್ಷೆ ಬರೆದಿರುವ ಸವಿತಾ ಪಾಸಾಗಿದ್ದು, ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದಾರೆ. ಸವಿತಾರ ಸಾಧನೆಗೆ ಪತಿ ರಾಮಜ್ಜ ಮತ್ತು ಮಗಳು ಚೇತನಾ ಬೆಂಬಲ ನೀಡಿದ್ದಾರೆ.

Mother and Daughter Passed the SSLC exam together

ಸವಿತಾ ಪತಿ ಬಿ.ರಾಮಜ್ಜ ಚಿಲುಗೋಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ನಿ ಸವಿತಾ ಓದುವ ಆಶಯಕ್ಕೆ ಬೆಂಬಲವಾಗಿ ನಿಂತ ರಾಮಜ್ಜನಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಧ್ಯಯನಕ್ಕೆ ನೆರವಾದ ಯು ಟ್ಯೂಬ್; ಮರಿಯಮ್ಮಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ ಸವಿತಾ, ಯು ಟ್ಯೂಬ್‌ ಮುಖಾಂತರ ಹೊಸ ಪಠ್ಯವನ್ನು ಅಭ್ಯಾಸ ಮಾಡಿದ್ದರು. ಯುಟ್ಯೂಬ್‌ನಲ್ಲಿ ಎಸ್‌ಎಸ್‌ಎಲ್‌ಸಿ ಓದಿಗೆ ಪೂರಕವಾಗಿ ಲಭ್ಯವಿರುವ ವಿಡಿಯೋಗಳನ್ನು ನೋಡಿ ಅರ್ಥ ಮಾಡಿಕೊಂಡು ಪರೀಕ್ಷೆಗೆ ತಯಾರಿ ನಡೆಸಿದ್ದರು.

 ಎಸ್ಎಸ್ಎಲ್‌ಸಿ ಫಲಿತಾಂಶ 2022: ಮರು ಎಣಿಕೆ, ಮೌಲ್ಯಮಾಪನ ಅರ್ಜಿ ಸಲ್ಲಿಕೆ ವಿವರ ಎಸ್ಎಸ್ಎಲ್‌ಸಿ ಫಲಿತಾಂಶ 2022: ಮರು ಎಣಿಕೆ, ಮೌಲ್ಯಮಾಪನ ಅರ್ಜಿ ಸಲ್ಲಿಕೆ ವಿವರ

ಹೊಸಪೇಟೆಯ ಚೈತನ್ಯ ಟೆಕ್ನೊ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಸವಿತಾ ಪರೀಕ್ಷೆ ಬರೆದಿದ್ದರು. ಫಲಿತಾಂಶದಲ್ಲಿ ಶೇ. 45ರಷ್ಟು ಅಂಕ ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ್ದಾರೆ. ಸ್ಮಯೋರ್ ವ್ಯಾಸಪುರಿ ಪ್ರೌಢಶಾಲೆಯ ಕೇಂದ್ರದಲ್ಲಿ ಚೇತನಾ ಪರೀಕ್ಷೆ ಬರೆದಿದ್ದು ಶೇ.85 ಅಂಕ ಪಡೆದು ತೇರ್ಗಡೆಯಾಗಿದ್ದಾಳೆ.

ಉತ್ತೀರ್ಣರಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಸವಿತಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಆಸೆ ಕೈಗೂಡಿದೆ, ಮೊದಲ ಪ್ರಯತ್ನದಲ್ಲೇ ಮಗಳೊಂದಿಗೆ ತೇರ್ಗಡೆಯಾಗಿರುವುದು ಖುಷಿ ಕೊಟ್ಟಿದೆ ಎನ್ನುತ್ತಾರೆ.

"ನನಗೆ ಪರೀಕ್ಷೆ ಬರೆಯುವ ಯೋಜನೆ ಇರಲಿಲ್ಲ, ಆದರೆ ನನ್ನಪತಿ ಮತ್ತು ಮಗಳು ಕಳೆದ ಎರಡು ವರ್ಷಗಳಿಂದ ಒತ್ತಾಯಿಸುತ್ತಲೇ ಇದ್ದರು. ಆರಂಭದಲ್ಲಿ ನನಗೆ ಪರೀಕ್ಷೆ ಇಷ್ಟವಿರಲಿಲ್ಲ ಆದರೆ ಅವರು ಸತತ ಒತ್ತಾಯಕ್ಕೆ ಮಣಿದು ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆಯಲು ನಿರ್ಧರಿಸಿದೆ" ಎಂದು ಹೇಳಿದ್ದಾರೆ.

Mother and Daughter Passed the SSLC exam together

ಪತ್ನಿ ಸಾಧನೆಗೆ ಪತಿ ಸಂತಸ; ಇನ್ನು ಪತ್ನಿ ಸವಿತಾ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಪತಿ ರಾಮಜ್ಜ "ಕುಟುಂಬದಲ್ಲಿ ಎಲ್ಲರೂ ಸವಿತಾ ಅಧ್ಯಯನಕ್ಕೆ ಸಹಾಯ ಮಾಡಿದ್ದಾರೆ. ಮಗಳು ಚೇತನಾ ಕೂಡ ಅಮ್ಮನಿಗೆ ಪಾಠಗಳನ್ನು ಕಲಿಸಿದಳು, ನಾನು ಕೂಡ ಇಂಗ್ಲಿಷ್ ಕಲಿಯಲು ಸಹಾಯ ಮಾಡಿದೆ, ಆರಂಭದಲ್ಲಿ ಅವಳಿಗೆ ಕಷ್ಟವೆನಿಸಿದರೂ ನಂತರ ಹೊಂದಿಕೊಂಡು ಅಧ್ಯಯನ ಮಾಡಿದಳು" ಎಂದು ಹೇಳಿದ್ದಾರೆ.

ಅಮ್ಮನಿಗೆ ಪಿಯುಸಿ ಓದಲು ಹೇಳಿದ್ದೇನೆ; ಅಮ್ಮನ ಸಾಧನೆಯಿಂದ ಖುಷಿಯಾಗಿರುವ ಚೇತನಾ ಮಾತನಾಡಿ, "ಎಲ್ಲಾ ಹೆಣ್ಣುಮಕ್ಕಳಿಗೂ ಈ ರೀತಿ ಅವಕಾಶ ಸಿಗುವುದಿಲ್ಲ, ನಾನು ಅದೃಷ್ಟ ಮಾಡಿದ್ದೇನೆ. ಎಸ್‌ಎಸ್‌ಎಲ್‌ಸಿ ಪೂರೈಸಿದ ಅಮ್ಮನಿಗೆ ಪಿಯುಸಿ ಓದುವಂತೆ ಕೇಳಿದ್ದೇನೆ, ಅಮ್ಮ ಅದಕ್ಕೆ ಒಪ್ಪಿದ್ದಾರೆ, ನಾನು ವಿಜ್ಞಾನ ವಿಭಾಗಕ್ಕೆ ಸೇರಲಿದ್ದು, ಅಮ್ಮ ಮಾನವಿಕ ಶಾಸ್ತ್ರವನ್ನು ಓದಲಿದ್ದಾರೆ" ಎಂದಿದ್ದಾರೆ.

English summary
Mother and Daughter cracked the exam by learning together at home in a Vijayanagara district, of Karnataka. ಶಿಕ್ಷಣ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X