• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ವಿರುದ್ಧ ಹಣ ಸುಲಿಗೆ ಆರೋಪ

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಅಕ್ಟೋಬರ್ 15: ಸಚಿವರ ಹೆಸರು ಹೇಳಿ ಹಣ ಸುಲಿಗೆ ಮಾಡುತ್ತಿರುವ ಗಂಭೀರ ಆರೋಪ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ವಿರುದ್ಧ ಕೇಳಿಬಂದಿದೆ.

ಸಚಿವರಿಗೆ ಹಣ ನೀಡಬೇಕು ಎಂದು ಹೇಳಿ ಹಣ ಸುಲಿಗೆ ಮಾಡಿದ್ದಾರೆ, ಫಾರ್ಮ್ ನಂ-3 ನೀಡಲು ಮಹಾನಗರ ಪಾಲಿಕೆ ಆಯುಕ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಆರೋಪ ಮಾಡಿ, ಸಂಬಂಧಪಟ್ಟ ದಾಖಲೆ ಬಿಡುಗಡೆ ಬಿಡುಗಡೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ರಾಜಶೇಖರ್ ಮುಲಾಲಿ, ಸರ್ಕಾರಿ ವಾಹನದಲ್ಲಿ ಬಂದು ಹಣ ಪಡೆದಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಎಸಿಬಿ ಅಧಿಕಾರಿಗಳಿಂದ ಆಯುಕ್ತೆಯ ಕಚೇರಿ ಮೇಲೆ ರೇಡ್ ಸಹ ಆಗಿತ್ತು ಎಂದರು.

ಹಣಕ್ಕೆ ಬೇಡಿಕೆ ಇಟ್ಟಿದ ತುಷಾರಮಣಿ ಆಡೀಯೋ ಸಂಭಾಷಣೆ ಬಹಿರಂಗವಾಗಿದ್ದು, ಕಳೆದ ಹಲವಾರು ದಿನಗಳಿಂದ ಆಯುಕ್ತರ ಮೇಲೆ ಲಂಚದಂತಹ ಗಂಭೀರ ಆರೋಪ ಕೇಳಿಬಂದಿದ್ದವು. ತುಷಾರಮಣಿ ಆಪ್ತ ಸಹಾಯಕ ೫೦ ಸಾವಿರ ರುಪಾಯಿ ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ನಡೆಸಿದ್ದರು.

ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅವರ ಹಣ ವಸೂಲಿಯ ಆಡಿಯೋ ಸಂಭಾಷಣೆ ಇಲ್ಲಿದೆ.

ಆಡಿಯೋ- 01

ಬಳ್ಳಾರಿ ಆಯುಕ್ತೆ: ಟೋಟಲ್ ಐದು ಅಂತ ಹೇಳಿದಾರೆ, ಅಷ್ಟು ಹಣವನ್ನು ನೀವು ನನ್ನ ಕೈಗೆ ಕೊಟ್ಟು ಬಿಡಿ, ನಾನು ನಿಮ್ಮ ಕಣ್ಮುಂದೇನೆ ಕೊಡ್ತಿನಿ. ಅದರಲ್ಲಿ ನನಗೆ ಯಾಕೆ ಕಮ್ಮಿ ಅಂತಂದ್ರೆ, ನನಗೆ ಐದು ಕೊಟ್ಟರೇ ಯಾರಾರಿಗೆ ಏನೆನೋ ಕೊಡಬೇಕು ಅದನ್ನು ನಾನೆಲ್ಲ ಕೊಡ್ತೀನಿ.

ಉಳಿದಿದ್ದನ್ನ ನಾನು, ನಿಮ್ಮ ಕಣ್ಮುಂದೆನೇ ಮಿನಿಸ್ಟರ್ ಗೆ ಕೊಡ್ತೀನಿ.

ಆಡಿಯೋ- 02

ಭದ್ರಿ: ಹಲೋ ನಮಸ್ತೆ ಮೆಡಮ್.. ನಾನು ಭದ್ರಿ ಮಾತನಾಡೋದು ೧೦ ಲಕ್ಷ ರೆಡಿಯಿದೆ. ಸರ್ ಹೇಳಿದ್ರು.

ಆಯುಕ್ತೆ: ಮನೆ ಹತ್ತಿರ ಬಂದ್ರಾ?

ಭದ್ರಿ: 10 ಲಕ್ಷ ರೂ.ರೆಡಿ ಮಾಡಿದಾರೆ ಮೆಡಮ್, ಎಲ್ಲಿ ತಂದು ಕೊಡ್ಲಿ, ಬೆಳಗ್ಗೆ ಮನೆ ಹತ್ತಿರ ಬಂದು ಬಿಡ್ತಿನಿ.

ಆಯುಕ್ತೆ: ಬೆಳಗ್ಗೆ ಏನಾಗುತ್ತೆ ಗೊತ್ತಾ, 6 ಗಂಟೆಗೆ ನಾನು ಮಿನಿಷ್ಟರ್ ಹತ್ತಿರ ಹೋಗಿ ಬಿಡ್ತಿನಿ. ಮತ್ತೆ ವಾಪಸ್ ಬರೋಕಾಗಲ್ಲ. ಬೆಳಗ್ಗೆ ವಾಪಸ್ ಹೋಗಿ ಹೋಗಿಬಿಡ್ತಿನಿ.

ಭದ್ರಿ: ಮೆಡಮ್, ಬೇಕಿದ್ರೆ, ನಾನು ಬೆಳಗ್ಗೆ 5 ಗಂಟೆಗೆ ವಾಕಿಂಗ್ ಹೋಗ್ತಿನಿ, 5-30 ಗೆ ನಿಮ್ಮ ಮನೆ ಹತ್ತಿರ ಬಂದು ಬಿಡ್ತಿನಿ.

ಆಯುಕ್ತೆ: ಹಾ....ನಾನು ಬೆಳಗ್ಗೆ 6 ಗಂಟೆಗೆಲ್ಲ ಹೋಗಿ ಬಿಡ್ತಿನಿ, ಒಂದು ಕೆಲಸ ಮಾಡ್ತೀನಿ ಬಿಡಿ, ನಾನೇ ಗಾಡಿ ತಗೊಂಡು ಬರ್ತೀನಿ. ಗೌರ್ನಮೆಂಟ್ ಗಾಡಿಯಾದ್ರೆ, ಯಾರು ಏನು ಅನ್ನಲ್ಲ, ನೀವು ಮೇನ್ ರೋಡ್ ಗೆ ಬಂದು ಬಿಡ್ತೀರಾ? ಗಾಂಧಿನಗರ ಬೂಸ್ಟ್ ಹತ್ತಿರ.

ಭದ್ರಿ: ಬರ್ತೀನಿ ಮೆಡಮ್.

ಆಯುಕ್ತೆ: ಗಾಂಧಿನಗರ ಬೂಸ್ಟ್ ಟ್ಯಾಂಕ್ ಹತ್ತಿರ ಬಂದು ಬಿಡಿ...

ಭದ್ರಿ: ಓಕೆ ಮೆಡಮ್...

English summary
The Ballari Mahanagara Palike Commissioner Tusharamani has been accused of Money embezzlement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X