ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲ್ಲೆ ಆರೋಪಿ ಶಾಸಕ ಗಣೇಶ್ ಬೆಂಬಲಕ್ಕೆ ನಿಂತ ರಮೇಶ್ ಜಾರಕಿಹೊಳಿ

|
Google Oneindia Kannada News

ಬಳ್ಳಾರಿ, ಫೆಬ್ರವರಿ 19: ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್ ಮೇಲೆ ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಹಲ್ಲೆ ನಡೆಸಿರುವ ಆರೋಪಿ ಶಾಸಕ ಗಣೇಶ್ ಅವರ ಪರವಾಗಿ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿದ್ದಾರೆ.

ಇಂದು ಶಾಸಕ ಗಣೇಶ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಹಲ್ಲೆ ಪ್ರಕರಣದಲ್ಲಿ ಗಣೇಶ್ ಅವರದ್ದು ತಪ್ಪಿಲ್ಲ, ಸ್ಥಳದಲ್ಲಿ ಇದ್ದ ಶಾಸಕ ಭೀಮಾನಾಯ್ಕ್ ಅವರು ಸತ್ಯವನ್ನು ಬಹಿರಂಗ ಪಡಿಸಬೇಕು ಎಂದರು.

ಹಲ್ಲೆ ಆರೋಪಿ ಶಾಸಕ ಗಣೇಶ್‌ ತಲೆಮರೆಸಿಕೊಂಡು ಒಂದು ತಿಂಗಳುಹಲ್ಲೆ ಆರೋಪಿ ಶಾಸಕ ಗಣೇಶ್‌ ತಲೆಮರೆಸಿಕೊಂಡು ಒಂದು ತಿಂಗಳು

ಈಗಲ್‌ಟನ್ ರೆಸಾರ್ಟ್ ಪ್ರಕರಣದಲ್ಲಿ ಗಣೇಶ್ ಅವರನ್ನು ಬಲಿಪಶು ಮಾಡಲಾಗಿದೆ, ಅವರ ವಿರುದ್ಧ ಜಾತಿನಿಂದನೆ ಮಾಡಲಾಗಿದೆ, ಈ ಘಟನೆಯಲ್ಲಿ ಎಫ್‌ಐಆರ್ ದಾಖಲಾಗಿರುವ ಪ್ರಕರಣದಲ್ಲಿ ಸಹ ದೊಡ್ಡ ರಾಜಕಾರಣಿ ಒಬ್ಬರ ಕೈವಾಡ ಇದೆ ಎಂದು ಅವರು ಹೇಳಿದರು.

MLA Ganesh is innocent, he will become minister: Ramesh Jarkiholi

ಗಣೇಶ್ ಅವರದ್ದು ಯಾವುದೇ ತಪ್ಪಿಲ್ಲ, ಅವರು ಇದೇ ಸರ್ಕಾರದಲ್ಲಿ ಮಂತ್ರಿ ಆಗುತ್ತಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಗಣೇಶ್ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ಅನ್ನು ರದ್ದು ಮಾಡಬೇಕೆಂದು ನಾನು ಸಿಎಂ ಮತ್ತು ಗೃಹ ಸಚಿವರ ಬಳಿ ಮನವಿ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆಆನಂದ್ ಸಿಂಗ್ ಮೇಲೆ ಹಲ್ಲೆ: ಅಜ್ಞಾತ ಸ್ಥಳದಿಂದ ಶಾಸಕ ಗಣೇಶ್ ಹೇಳಿಕೆ ಬಿಡುಗಡೆ

ಶಾಸಕ ಗಣೇಶ್ ಅವರು ಕಳೆದ ತಿಂಗಳು ಇದೇ ದಿನ ಈಗಲ್‌ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಅವರ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ನಂತರ ಅವರು ತಲೆಮರೆಸಿಕೊಂಡಿದ್ದಾರೆ. ಈವರೆಗೆ ಪೊಲೀಸರಿಗೆ ಅವರನ್ನು ಪತ್ತೆ ಮಾಡಲಾಗಿಲ್ಲ.

English summary
assault accused MLA Ganesh is innocent said MLA Ramesh Jarkiholi, he said he is framed in the case, a political leader is behind filing FIR.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X