• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೈ' ಟಿಕೇಟ್ ಕೈತಪ್ಪಿದ್ದಕ್ಕೆ ಶಾಸಕ ನಾಗರಾಜ ಅಭಿಮಾನಿ ಆತ್ಮಹತ್ಯೆಗೆ ಯತ್ನ

By ಬಳ್ಳಾರಿ ಪ್ರತಿನಿಧಿ
|

ಸಿರುಗುಪ್ಪ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಬಿ.ಎಂ.ನಾಗರಾಜ ಅವರಿಗೆ ಟಿಕೇಟ್ ನೀಡದಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿರುಗುಪ್ಪದಲ್ಲಿ ಸೋಮವಾರ ತೀವ್ರ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಯುವ ಮುಖಂಡ ಪವನಕುಮಾರ ದೇಸಾಯಿ ಆತ್ಮಹತ್ಯೆಗೆ ಮುಂದಾಗಿದ್ದಾರೆ.

ತಮ್ಮ ನೆಚ್ಚಿನ ನಾಯಕ ಬಿ.ಎಂ. ನಾಗರಾಜ ಅವರಿಗೆ ಟಿಕೇಟ್ ಕೈತಪ್ಪಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಅವರನ್ನು ನೆರೆದಿದ್ದ ನಾಯಕರು ಸಮಾಧಾನಪಡಿಸಿದ್ದಾರೆ.

ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ನಾಗರಾಜ ಅವರಿಗೆ ಟಿಕೇಟ್ ಕೈತಪ್ಪಲು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರೇ ಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಅನ್ನು ಸರ್ವನಾಶ ಮಾಡುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

ಸಂತೋಷ ಲಾಡ್ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ಪೊರಕೆಯಿಂದ ಭಾವಚಿತ್ರಕ್ಕೆ ಹಿಗ್ಗಾಮುಗ್ಗಾ ಹೊಡೆಯುತ್ತ ಮಹಿಳಾ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ,

ಗಾಂಧೀ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈರ್ ಗಳಿಗೆ ಬೆಂಕಿ ಹಚ್ಚಿ, ಸಂತೋಷ ಲಾಡ್ ಪ್ರತಿಕೃತಿ ದಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ಮಾತನಾಡಿ, ಗಣಿಧಣಿಗಳ ಪ್ರಭಾವ ಇದ್ದರೂ ತಮ್ಮ ಜನಪ್ರಿಯತೆ, ಸರಳತೆ ಹಾಗೂ ಸಮಾಜ ಮುಖಿ ಸೇವೆಯಿಂದ ಪ್ರಬಲ ಬಿಜೆಪಿ ಅಭ್ಯರ್ಥಿ ವಿರುದ್ಧ 23 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು ಎಂದರು.

ಹಿರಿಯ ಮುಖಂಡ ಮುತ್ಯಾಲಯ್ಯಶೆಟ್ಟಿ ಮಾತನಾಡಿ, ಕುಡಿಯುವ ನೀರಿನ ಕೆರೆ ನಿರ್ಮಾಣ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸ್ಥಳೀಯರಿಗೆ ಟಿಕೇಟ್ ನೀಡದೆ ಕ್ಷೇತ್ರದ ಹೊರಗಿನ ವ್ಯಕ್ತಿಗೆ ಟಿಕೇಟ್ ನೀಡಿದ್ದು, ಪಕ್ಷದ ಗೆಲುವಿಗೆ ಅಡ್ಡಿಯಾಗಲಿದೆ. ಬಿ.ಎಂ. ನಾಗರಾಜ ಅವರಿಗೆ ಟಿಕೇಟ್ ಘೋಷಿಸದೆ ಇದ್ದಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದ ತಾಪಂ, ಜಿಪಂ, ಗ್ರಾಪಂ, ಪಪಂ, ನಗರಸಭೆ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆ ಹಿನ್ನಲೆಯಲ್ಲಿ ಒಂದು ತಾಸುಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

ಬಿ.ಎಂ.ನಾಗರಾಜರಿಗೆ ಟಿಕೇಟ್ ತಪ್ಪಿದ್ದೇಕೆ?

ಹಾಲಿ ಶಾಸಕ ಬಿ.ಎಂ. ನಾಗರಾಜ್ ಅವರಿಗೆ ಸ್ವತಃ ಮುಖ್ಯಮಂತ್ರಿಗಳೇ ಟಿಕೇಟ್ ನೀಡುವ ಭರವಸೆ ನೀಡಿದ್ದರೂ ಅವರ ಬದಲು ಹೊಸಮುಖ, ರಾಜಕೀಯ ಶಾಲೆಯ ಹೊಸ ಸ್ಟೂಡೆಂಟ್ ಮುರಳಿಕೃಷ್ಣಗೆ ಟಿಕೇಟ್ ಸಿಕ್ಕಿರುವುದದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹುಟ್ಟುಹಾಕಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ನಾಗರಾಜ್ ಅವರ ಕುರಿತು ಕ್ಷೇತ್ರದಲ್ಲಿ ಮಿಶ್ರ ಅಭಿಪ್ರಾಯವಿದೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಇವರೇ ಸ್ಪರ್ಧಿಸಿದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಗೆಲ್ಲಲಿದೆ ಎನ್ನುವ ಸಾಮಾನ್ಯ ಅಭಿಪ್ರಾಯ ಮೂಡಿತ್ತು. ಒಂದು ಮಾಹಿತಿ ಪ್ರಕಾರ ಬಿ.ಎಂ. ನಾಗರಾಜ್ ಟಿಕೇಟ್ ಗಾಗಿ ಬೆಂಗಳೂರು - ದೆಹಲಿಗೆ ಸುತ್ತಲಿಲ್ಲ. ಒಂದಿಬ್ಬರು ಮುಖಂಡರ ಮಾತುಗಳನ್ನೇ ನಂಬಿ ಮನೆಯಲ್ಲೇ ಉಳಿದು, ನನಗಲ್ಲದೇ ಇನ್ಯಾರಿಗೆ ಟಿಕೇಟ್? ಎಂದು ಮಾತನಾಡಿದ್ದರಂತೆ.

ಮುಖ್ಯಮಂತ್ರಿ ಒಮ್ಮೆ ಬೆಂಗಳೂರಿಗೆ ಬಂದು ಹೋಗಯ್ಯಾ, ಟಿಕೇಟ್ ನಿನಗೇ ಗ್ಯಾರಂಟಿ ಎಂದು ಮೊಬೈಲ್‍ ನಲ್ಲಿ ಸ್ವತಃ ಕರೆದಿದ್ದರೂ, ಅವರು ಬೆಂಗಳೂರಿಗೆ ಹೋಗಲು ಮೀನಮೇಷ ಎಣಿಸಿ ಕೊನೆಗೆ ಬೇಕು ಬೇಕಿಲ್ಲದಂತೆ ಬೆಂಗಳೂರಿಗೆ ಹೋಗಿ ಬಂದಿದ್ದರು.

ಅಲ್ಲಲ್ಲಿ, ನನಗೆ ಟಿಕೇಟ್ ಬೇಕಿಲ್ಲ, ಪಾರ್ಟಿ ತಾನಾಗಿಯೇ ಕೊಟ್ಟಲ್ಲಿ, ನಾನು ಸ್ಪರ್ಧಿಸುತ್ತೇನೆಎಂದು ಮಾತನಾಡಿದ್ದರು ಎಂದು ಹೇಳಲಾಗುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress did not give ticket to Siruguppa MLA BM Nagaraja. So his follower Pawan Kumar Desai attempts suicide on Monday But leaders stopped him. Protesters complained Santosh S.Lad destroying Congress. but praised Nagaraja is a social worker, good humanity person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more