ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ: ಹೋಳಿ ಸಂಭ್ರಮದಲ್ಲಿ ಲೇಂಗಿ ನೃತ್ಯ ಮಾಡಿದ ಶಾಸಕ ಭೀಮಾ ನಾಯ್ಕ್

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಮಾರ್ಚ್ 30: ಹೋಳಿ ಹಬ್ಬ ಸಂಭ್ರಮದ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾ ನಾಯ್ಕ್ ಲೇಂಗಿ ನೃತ್ಯದಲ್ಲಿ ಭಾಗಿಯಾದರು.

ಸೋಮವಾರ ಶಾಸಕ ಭೀಮಾ ನಾಯ್ಕ್ ಲೇಂಗಿ ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ್ದು, ನೃತ್ಯ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಿವಾಸದ ಎದುರು ಆನೆಕಲ್ ತಾಂಡಾದ ಭಜನಾ ತಂಡದ ಸದಸ್ಯರು ಲೇಂಗಿ (ಕೋಲಾಟ) ನೃತ್ಯ ಪ್ರದರ್ಶಿಸಿದರು.

ಹಂಪಿಯ ವಾಸ್ತುಶಿಲ್ಪ ಶೈಲಿಯಲ್ಲಿ ಅರಳಲಿದೆ ವಿಜಯನಗರ ಜಿಲ್ಲಾಡಳಿತ ಭವನಹಂಪಿಯ ವಾಸ್ತುಶಿಲ್ಪ ಶೈಲಿಯಲ್ಲಿ ಅರಳಲಿದೆ ವಿಜಯನಗರ ಜಿಲ್ಲಾಡಳಿತ ಭವನ

ಈ ವೇಳೆ ಶಾಸಕ ಭೀಮಾ ನಾಯ್ಕ್ ಕೂಡ ತಂಡದೊಂದಿಗೆ ಹೆಜ್ಜೆ ಹಾಕಿ ಹುರಿದುಂಬಿಸಿದರು,‌ ಲಂಬಾಣಿ ಹಾಡುಗಳನ್ನು ಹಾಡಿದ ಆನೆಕಲ್ ತಾಂಡಾದ ಭಜನಾ ತಂಡದ ಸದಸ್ಯರು, "ಹೋಳಿ ಹಬ್ಬ ಭಾವೈಕ್ಯತೆಯ ಹಬ್ಬವಾಗಿದ್ದು, ಎಲ್ಲರೂ ಸೌಹಾರ್ದತೆಯಿಂದ ಬಾಳಬೇಕು'' ಎಂಬ ಸಂದೇಶ ಸಾರುವ ಗೀತೆಗಳನ್ನು ಹಾಡಿದರು.

Ballari: MLA Bhima Naik Lengi Dance During Holi Celebration Video Goes Viral

ಲಂಬಾಣಿ ಸಮಾಜದ ಕುಲಗುರು ಸೇವಾಲಾಲ್ ಮಹಾರಾಜರನ್ನು ಸ್ಮರಿಸುವ ಗೀತೆಗಳನ್ನು ಕೂಡ ಹಾಡಲಾಯಿತು. ತಬಲಾ ಹಾಗೂ ಝಾಂಜ್ ವಾದ್ಯಕ್ಕೆ ಸದಸ್ಯರು ಕುಣಿದು ಕುಪ್ಪಳಿಸಿದರು. ಬಿರು ಬಿಸಿಲನ್ನು ಲೆಕ್ಕಿಸದೇ ಉತ್ಸಾಹದೊಂದಿಗೆ ಹೆಜ್ಜೆ ಹಾಕಿದರು. ಶಾಸಕ ಭೀಮಾನಾಯ್ಕ್ ಕೂಡ ಲಂಬಾಣಿ ಸಾಂಪ್ರದಾಯಿಕ ಬಟ್ಟೆ ಧರಿಸಿ ಭಜನಾ ತಂಡದೊಂದಿಗೆ ಗೀತೆಗಳನ್ನು ಹಾಡುತ್ತಾ ನೃತ್ಯ ಮಾಡಿದರು. ಈ ವೇಳೆ ಸೇರಿದ್ದ ಜನರು ಕರತಾಡನ ಮೊಳಗಿಸಿದರು.

Ballari: MLA Bhima Naik Lengi Dance During Holi Celebration Video Goes Viral


ಈ ಬಾರಿ ವಿಶ್ವವಿಖ್ಯಾತ ಹಂಪಿಯಲ್ಲಿಲ್ಲ ಹೋಳಿ ಸಂಭ್ರಮಾಚರಣೆ

ಹೋಳಿ‌ ಹಬ್ಬದ ಹಂಗವಾಗಿ ಪ್ರತಿ‌ ವರ್ಷ ವಿದೇಶಿ ಪ್ರವಾಸಿಗರು ಹೋಳಿ ಆಡಲೆಂದೇ ಇಲ್ಲಿಯ ಹಂಪಿಗೆ ಆಗಮಿಸುತ್ತಿದ್ದರು. ಇಡಿ ಜಗತ್ತೇ ತಲ್ಲಣಗೊಳಿಸಿರುವ ಕೊರೊನಾ ಆತಂಕದ ಹಿನ್ನೆಲೆ ಇದೇ ಮೊದಲ ಬಾರಿಗೆ ಹಂಪಿಯಲ್ಲಿ ಹೋಳಿ ಹಬ್ಬಕ್ಕೆ ಬ್ರೇಕ್ ಬಿದ್ದಿದೆ.

ಕಳೆದ ಕೆಲ ವಾರಗಳಿಂದ ಮತ್ತೆ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗಿದ್ದರಿಂದ ಈ ವರ್ಷ ನಾನಾ ಹಬ್ಬಗಳನ್ನೊಳಗೊಂಡಂತೆ ಹೋಳಿ ಹಬ್ಬಕ್ಕೂ ಜಿಲ್ಲಾಡಳಿತದಿಂದ ತಡೆ‌ ಬಿದ್ದಿದೆ.

ಹಂಪಿಯಲ್ಲಿ ಸ್ಥಳೀಯರೊಂದಿಗೆ ವಿದೇಶಿಗರ ಬಣ್ಣದಾಟಕ್ಕೆ ಬ್ರೇಕ್ ಬಿದ್ದಿದ್ದರಿಂದ ವಿದೇಶಿ ಪ್ರವಾಸಿಗರು ನಿರಾಸೆ ತೋರಿದ್ದಾರೆ. ಪ್ರತಿ ವರ್ಷವು ಹಂಪಿ ವಿರೂಪಾಕ್ಷ ದೇವಾಲಯದ ಮುಖ್ಯ ಗೋಪುರದ ಎದುರು ಬಣ್ಣದೋಕುಳಿ ನಡೆಯುತ್ತಿತ್ತು. ಸ್ಥಳೀಯ ಯುವಕರು, ವಿದೇಶಿ ಪ್ರವಾಸಿಗರೂ ಸಹ ಹೋಳಿಯಲ್ಲಿ ಮಿಂದೇಳುತ್ತಿದ್ದರು.

ಕಳೆದ ಬಾರಿ ಹೋಳಿ ಹಬ್ಬದ ನಂತರ ಕೊರೊನಾ ವೈರಸ್ ಹರಡಿದ್ದರಿಂದ ಈ ಬಾರಿ ಕೊರೊನಾ ೨ನೇ ಅಲೆ ಹೆಚ್ಚಾದ ಹಿನ್ನೆಲೆ ವಿಜಯನಗರ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಇದೇ ಮೊದಲ ಬಾರಿಗೆ ಹಂಪಿಯಲ್ಲಿ ಹೋಳಿ ಸಂಭ್ರಮ ಇಲ್ಲವಾಗಿದೆ.

English summary
Hagaribommanahalli MLA Bhima Naik participated in the Lengi dance during Holi festival celebration;
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X