ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವರಿಗೆ ಖಾತೆ ಹಂಚಿಕೆ: ಅಪಸ್ವರ ಎತ್ತಿದ ಆನಂದ್ ಸಿಂಗ್

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಆಗಸ್ಟ್ 07: ರಾಜ್ಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿದಿದ್ದರೂ, ಕೆಲವು ಸಚಿವರಿಗೆ ಕೇಳಿದ ಖಾತೆ ಕೊಟ್ಟಲ್ಲ ಎಂಬ ಅಸಮಾಧಾನ ಇದೆ.

ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ 29 ಸಚಿವರಿಗೆ ಶನಿವಾರ ಬೆಳಿಗ್ಗೆ ಖಾತೆ ಹಂಚಿಕೆ ಮಾಡಿದ್ದು, ಇದಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ.

ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿರುವುದು ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು, ಆದರೆ ಈ ಖಾತೆ ಹಂಚಿಕೆ ಕೆಲ ಸಚಿವರನ್ನು ಅಸಮಾಧಾನಗೊಳಿಸಿದೆ. ರಾಜೀನಾಮೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ.

 Ballari: Minister Anand Singh Spoke About Resignation After Disappointed With Portfolio Allocation

ಇತ್ತೀಚಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಜಯನಗರ ಶಾಸಕ ಆನಂದ್ ಸಿಂಗ್‌ಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಆದರೆ ಇದರಿಂದ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್, ಈ ಖಾತೆ ವಹಿಸುವ ಬದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಮುಂದುವರೆಯುವುದೇ ಉತ್ತಮ ಎಂದಿದ್ದಾರೆ.

ಶನಿವಾರದಂದು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿರುವ ಸಚಿವ ಆನಂದ್ ಸಿಂಗ್, "ಬಿಜೆಪಿ ಸರ್ಕಾರ ಬರಲು ಮೊದಲು ನಾನು ರಾಜೀನಾಮೆ ನೀಡಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮೇ 1ರ ಮೊದಲೇ ನಾನು ರಾಜೀನಾಮೆ ನೀಡಿದ್ದೆ, ಹೀಗಂತ ನನ್ನಿಂದಲೇ ಸರ್ಕಾರ ಬಂದಿದೆ ಅನ್ನುವುದಲ್ಲ.''

"ಆದರೆ ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ. ಹೀಗಿರುವಾಗ ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದೇ ಒಳಿತು ಎನ್ನುವದು ನನ್ನ ನಿಲುವು,' ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

Ballari: Minister Anand Singh Spoke About Resignation After Disappointed With Portfolio Allocation

"ಅಲ್ಲದೇ ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ, ಆದರೆ ನಿರಾಶೆ ಮಾಡಿರುವುದಕ್ಕೆ ಸಾಕಷ್ಟು ಬೇಸರವಾಗಿದೆ. ಈ ಬಾರಿಯೂ ನಾನು ಕೇಳಿರುವುದೇ ಒಂದು, ಮುಖ್ಯಮಂತ್ರಿ ಕೊಟ್ಟಿರುವುದೇ ಒಂದು. ಮತ್ತೊಮ್ಮೆ ಸಿಎಂ ಬಸವರಾಜ ಮೊಮ್ಮಾಯಿಗೆ ಮನವಿ ಮಾಡುವೆ ಕೊಡದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುವೆ,'' ಎಂದು ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಸಂಪೂರ್ಣ ಸ್ಥಿತಿಗತಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆಯನ್ನು ನೀಡಿದ್ದಾರೆ, ನಾನು ಆ ಕೆಲಸದಲ್ಲಿ ಮಗ್ನನಾಗಿದ್ದೇನೆ,'' ಎಂದರು.

ಆನಂದ್ ಸಿಂಗ್ ಶುಕ್ರವಾರ ಹೇಳಿದ್ದೇನು?
"ನನಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ,'' ಎಂದು ನೂತನ ಸಚಿವ ಆನಂದ್ ಸಿಂಗ್ ಶುಕ್ರವಾರ ಹೇಳಿದ್ದರು.

ಹೊಸಪೇಟೆಯ ತಮ್ಮ ಕಚೇರಿಯಲ್ಲಿ ನೂತನ ಸಚಿವನಾಗಿ ಪ್ರಮಾಣವಚನ‌ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ, "ನೂತನ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರಿಗೆ ನಾನು ಇಂತಹದ್ದೇ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಟಿದ್ದೀನೆ, ಅದನ್ನು ಮಾಧ್ಯಮದವರೊಂದಿಗೆ ಹೇಳುವ ಅಶ್ಯಕತೆ ಇಲ್ಲ,'' ಎಂದಿದ್ದರು.

"ನನಗೆ ಮೂರು ಬಾರಿ‌ ಸಚಿವನಾಗಿ ಕೆಲಸ ಮಾಡಿದ ಅನುಭವ ಇದೆ. ಹಾಗಾಗಿ‌ ಜಿಲ್ಲೆಯ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇಂತದ್ದೇ ಬೇಕು ಅಂತ ಬೇಡಿಕೆ ಮಾಡಿರುವೆ. ಕಾದು ನೋಡೋಣ ಯಾವ ಖಾತೆ ಕೊಡುತ್ತಾರೆ ಅಂತ, ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಿದ್ದಾಗ ಪ್ರವಾಸೋದ್ಯಮ ಖಾತೆ ಬದಲಿಸಿ, ಹಜ್ ಮತ್ತು ವಕ್ಛ್ ಖಾತೆ ನೀಡಿದ್ದರು,'' ಎಂದು ತಿಳಿಸಿದರು.

"ಆಗಸ್ಟ್ 15ರಂದು ವಿಜಯನಗರ ಜಿಲ್ಲೆಯನ್ನು ಅದ್ಧೂರಿಯಾಗಿ ಉದ್ಘಾಟನೆ ಮಾಡುವ ಯೋಜನೆ ಹಾಕಿಕೊಂಡಿದ್ದೆ. ಆದರೆ ಕೋವಿಡ್ ಹಾಗೂ ರಾಜಕೀಯ ವಿದ್ಯಮಾನಗಳ ಬೆಳವಣಿಗೆಯಿಂದಾಗಿ ಮುಂದಕ್ಕೆ ಹೋಗಿದೆ,'' ಎಂದು ತಿಳಿಸಿದ್ದರು.

Recommended Video

ರಾಜ್ಯದ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ | Oneindia Kannada

"ಜಿಲ್ಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿಜಯನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅದ್ಧೂರಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಹಾಕಿಕೊಳ್ಳಲಾಗಿದೆ. ಎರಡರಿಂದ ಮೂರು ದಿನ ಕಾರ್ಯಕ್ರಮ ಆಯೋಜಿಸಿ, ಹೆಸರಾಂತ ಕಲಾವಿದರನ್ನು ಕರೆಸುವ ಯೋಚನೆ ಇದೆ,'' ಎಂದರು.

English summary
Vijayanagara MLA Anand Singh has been given an environmental and tourism Portfolio, But he was upset.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X