ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಸಿಲಿಗೆ ಬಳಲಿ ಬೆಂಡಾದ ಉತ್ತರ ಕರ್ನಾಟಕಕ್ಕೆ ಮಡಿಕೆ ಆಸರೆ

By ಭೀಮರಾಜ.ಯು ವಿಜಯನಗರ
|
Google Oneindia Kannada News

ವಿಜಯನಗರ, ಮಾರ್ಚ್ 20: ಬೇಸಿಗೆ ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕದ ಜನತೆ ತಾಪಮಾನಕ್ಕೆ ಬೆಂದು ಬೆಂಡಾಗಿ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಗದಗ, ಕೊಪ್ಪಳ ಮತ್ತು ಬಳ್ಳಾರಿ ಈ ಜಿಲ್ಲೆಗಳು ಬೇಸಿಗೆ ಬಂದರೆ ಸಾಕು ಕನಿಷ್ಟ ತಾಪಮಾನ 42 ರಿಂದ 44 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಬಿಸಿಲಿನ ಬೇಗೆಯನ್ನು ತಾಳಲಾರದೆ ಈ ಭಾಗದ ಜನತೆ ಅತಿ ಹೆಚ್ಚಾಗಿ ಮಣ್ಣಿನ ಮಡಿಕೆಗೆ ಮೊರೆ ಹೋಗುತ್ತಿದ್ದಾರೆ. ಏಪ್ರಿಲ್ ಮತ್ತು ಮೇ ಬರುತ್ತಿದ್ದಂತೆಯೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಾ ಹೋಗುತ್ತದೆ. ಬೆಳಿಗ್ಗೆ 9 ಗಂಟೆಯಿಂದ ಬಿಸಿಲಿನ ತಾಪ ಹೆಚ್ಚುತ್ತಾ ಸಂಜೆ 5 ಗಂಟೆಯ ನಂತರ ಉಷ್ಣತೆ ಇಳಿಯುತ್ತದೆ.

ಕರ್ನಾಟಕ ಹವಾಮಾನ ವರದಿ: ಎಲ್ಲಿ ಮಳೆ, ಎಲ್ಲಿ ಬಿಸಿಲು, ಸಂಪೂರ್ಣ ವರದಿಕರ್ನಾಟಕ ಹವಾಮಾನ ವರದಿ: ಎಲ್ಲಿ ಮಳೆ, ಎಲ್ಲಿ ಬಿಸಿಲು, ಸಂಪೂರ್ಣ ವರದಿ

ಕನಿಷ್ಟ 42ರಿಂದ 44 ಡಿಗ್ರಿ ಸೆಲ್ಸಿಯಸ್

ಕನಿಷ್ಟ 42ರಿಂದ 44 ಡಿಗ್ರಿ ಸೆಲ್ಸಿಯಸ್

ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯ ನಡುವೆ ಕನಿಷ್ಟ 42ರಿಂದ 44 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ಉಷ್ಣತೆಯನ್ನು ತಾಳಲಾರದೇ ಮಧ್ಯಾಹ್ನನ ಹೊತ್ತಿಗೆ ಜನರು ಮನೆಯಿಂದ ಹೊರಗಡೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಏನೇ ಕೆಲಸ ಕಾರ್ಯಗಳಿದ್ದರೂ, ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ಶಾಪಿಂಗ್ ಮಹಲ್ ಗಳಿಗೆ ಜನರು ಹೊರಗಡೆ ಬರುತ್ತಾರೆ.

ಮಣ್ಣಿನ ಮಡಿಕೆ ನೀರು

ಮಣ್ಣಿನ ಮಡಿಕೆ ನೀರು

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ತಣ್ಣನೀಯ ನೀರಿಗೆ ಮೊರೆ ಹೊಗುತ್ತಾರೆ, ಪ್ರಿಜ್ ನ ನೀರು ಅತಿಯಾಗಿ ಬಿಸಿ ಆಗುತ್ತವೆ, ಹಾಗಾಗಿ ಮಣ್ಣಿನ ಕುಡಿಕೆಗೆ ಬೇಡಿಕೆ ಹೆಚ್ಚಾಗಿದೆ. ಇದರಲ್ಲಿನ ನೀರು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಅನುಕೂಲಕರವಾಗಲಿದೆ. ತಂಪಾದ ಪಾನೀಯಗಳು ನಗರದ ಮುಖ್ಯ ಬೀದಿಗಳಲ್ಲಿ ಲಸ್ಸಿ, ಮಜ್ಜಿಗೆ ಇವುಗಳನ್ನು ಮಣ್ಣಿನ ಮಡಿಕೆಗಳಲ್ಲಿಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಾರೆ.

ಹಣ್ಣಿನ ಜ್ಯೂಸ್‌ಗಳು

ಹಣ್ಣಿನ ಜ್ಯೂಸ್‌ಗಳು

ಬಳ್ಳಾರಿ ನಗರದಲ್ಲಿ ಹಲವು ಕಡೆ ಹಣ್ಣಿನ ಜ್ಯೂಸ್ ಸೆಂಟರ್‌ಗಳನ್ನು ತೆರೆಯಲಾಗಿರುತ್ತವೆ. ಸೇಬು, ಮಾವು, ನೇರಳೆ ಹಣ್ಣು, ಕರುಬುಜ, ಸೀಬೆ ಹಣ್ಣು, ಕಲ್ಲಂಗಡಿ ಹಣ್ಣು, ಬಾಳೆ ಹಣ್ಣಿನ ಜ್ಯೂಸ್ ಹೀಗೆ ವಿವಿಧ ರೀತಿಯ ಹಣ್ಣುಗಳ ಜ್ಯೂಸ್‌ಗಳನ್ನು ಮಾಡಲಾಗುತ್ತದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಬಾರಿ ಬಿಸಿಲನ ತಾಪಮಾನ ಕನಿಷ್ಟ 42ರಿಂದ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಚ್ಚಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುನ್ನೆಚ್ಚರಿಕೆಯನ್ನು ನೀಡಿದೆ.

ಬಿಸಿಲಿನ ತಾಪಮಾನದಿಂದ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮಗಳು

ಬಿಸಿಲಿನ ತಾಪಮಾನದಿಂದ ರಕ್ಷಣೆಗೆ ಮುನ್ನಚ್ಚರಿಕೆ ಕ್ರಮಗಳು

ಬೇಸಿಗೆ ಸಂದರ್ಭದಲ್ಲಿ ದಿನಕ್ಕೆ ಕನಿಷ್ಟ 2ಲೀ ನೀರನ್ನು ಸೇವನೆ ಮಾಡಬೇಕು, ಹಣ್ಣಿನ ಪದಾರ್ಥಗಳನ್ನ ತಿನ್ನಬೇಕು, ಮಾಂಸದ ಆಹಾರ ಸೇವನೆಯನ್ನು ಕಡಿಮೆ ಮಾಡವಬೇಕು, ತಣ್ಣನೆಯ ಪಾನೀಯಗಳನ್ನು ಸೇವಿಸಬೇಕು. ಮೊಸರು, ಮಜ್ಜಗೆ, ಡ್ರೈ ಫ್ರೂಟ್ಸ್ ಮತ್ತು ತರಕಾರಿಗಳನ್ನು ಹೆಚ್ಚಿಗೆ ಬಳಕೆ ಮಾಡಬೇಕು. ಕಬ್ಬಿನ ಹಾಲು ಎಳೆನೀರು ಕುಡಿಯಬೇಕು ಎಂದು ತಾಲೂಕು ವೈದ್ಯಾಧಿಕಾರಿ ಆರ್.ಭಾಸ್ಕರ ಹೇಳುತ್ತಾರೆ.

English summary
In The northern Karnataka districts like Kalaburagi, Bidar, Yadagiri, Raichur, Gadag, Koppal and Ballari have temperatures ranging from 42 to 44 degrees Celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X