ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿ ಪ್ರಯುಕ್ತ ಪಂಪಾ ಕ್ಷೇತ್ರಕ್ಕೆ ಹರಿದು ಬಂದ ಜನಸಾಗರ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ 15: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶ್ವವಿಖ್ಯಾತ ಹಂಪಿಯ ಪಂಪಾ ಕ್ಷೇತ್ರಕ್ಕೆ ತಂಡೋಪತಂಡವಾಗಿ ಭಕ್ತರು ಆಗಮಿಸಿದ್ದಾರೆ.

ಶ್ರೀ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯ ಸೇರಿದಂತೆ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ್ದ ನೂರಾರು ಭಕ್ತರು, ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾದರು.

ಹಂಪಿ ಉತ್ಸವ 2020ರ ಅದ್ಧೂರಿ ಆರಂಭ; ರಾಜಕೀಯ ಮೇಲಾಟಕ್ಕೂ ಬಳಕೆಯಾಯ್ತು ವೇದಿಕೆಹಂಪಿ ಉತ್ಸವ 2020ರ ಅದ್ಧೂರಿ ಆರಂಭ; ರಾಜಕೀಯ ಮೇಲಾಟಕ್ಕೂ ಬಳಕೆಯಾಯ್ತು ವೇದಿಕೆ

ಆದರೆ ಕಳೆದ ವರ್ಷ ತುಂಗಭದ್ರಾ ನದಿಯಲ್ಲಿ ನೀರು ಇರಲಿಲ್ಲ. ಅಳಿದು ಉಳಿದ ನೀರಿನಲ್ಲಿ ಸ್ನಾನ‌ ಮಾಡಿದ್ರು . ಆದ್ರೆ ಈ ವರ್ಷ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಇದೇ ಕಾರಣಕ್ಕೆ ಈ ವರ್ಷ ಅತೀ ಹೆಚ್ಚು ಜನ ನದಿಯಲ್ಲಿ ಸ್ನಾನ ಮಾಡಿದ್ದಾರೆ.

Many People Comes To The Historical Pampa For Sankranti

ಮಕರ ಸಂಕ್ರಾಂತಿ ನಿಮಿತ್ತ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ರುದ್ರಾಭಿಷೇಕ ಸೇರಿ ನಾನಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸುತ್ತಲಿನ ಪ್ರದೇಶಕ್ಕೆ ಹೋಲಿಸಿಕೊಂಡರೆ, ಹಂಪಿಗೆ ಅತೀ ಹೆಚ್ವು ಜನ ಬರುತ್ತಾರೆ.

ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'ಆಗಸದಿಂದ ಹಂಪಿ ಸೌಂದರ್ಯ ಸವಿಯಲು 'ಹಂಪಿ ಬೈಸ್ಕೈ'

Many People Comes To The Historical Pampa For Sankranti

ಕಾರಣ ದೇವರ ದರ್ಶನದ ಜೊತೆಯಲ್ಲಿ ಒಂದು ಫ್ಯಾಮಿಲಿ ಟ್ರಿಪ್ ಕೂಡಾ ಆಗತ್ತೆ. ತುಂಗಭದ್ರಾ ನದಿಯ ಸ್ನಾನ ಮಾಡಿಕೊಂಡು ದೇವರ ದರ್ಶನ ಪಡೆದ ಬಳಿಕ ಸುತ್ತಲಿನ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಜೊತೆಯಲ್ಲಿ ಹಂಪಿಯಲ್ಲಿ ಹೊಸದಾಗಿ ನಿರ್ಮಾಣವಾದ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಹ ನೋಡಬಹುದು. ಹೀಗಾಗಿ ಸಂಕ್ರಾಂತಿ ಇರಲಿ, ಫ್ಯಾಮಿಲಿ ಟ್ರಿಪ್ ಇರಲಿ ಅದಕ್ಕೆ ಹಂಪಿ ಸೂಕ್ತವಾಗಿದೆ ಎನ್ನಬಹುದು.

English summary
Devotees have come to the Hhistorocal Hampi for sankranti festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X