ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರಿಂದ ಮಾಸ್ಕ್ ತಯಾರಿ; ಮಾರುಕಟ್ಟೆ ಒದಗಿಸಿದ ಬಳ್ಳಾರಿ ಜಿಲ್ಲಾಡಳಿತ

|
Google Oneindia Kannada News

ಬಳ್ಳಾರಿ, ಮೇ 07 : ಕೊರೊನಾ ಭೀತಿ ಹೆಚ್ಚಾದಂತೆ ಮಾಸ್ಕ್ ಬಳಕೆ ಅಧಿಕವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮಾಸ್ಕ್‌ಗಳಿಗೆ ಬೇಡಿಕೆಯೂ ಹೆಚ್ಚಿದೆ. ಬಳ್ಳಾರಿಯಲ್ಲಿ ಮಹಿಳಾ ಸ್ವ ಸಹಾಯ ಸಂಘ ಮರು ಬಳಕೆ ಮಾಡುವ ಮಾಸ್ಕ್ ತಯಾರಿಯಲ್ಲಿ ತೊಡಗಿದ್ದು, ಜಿಲ್ಲಾಡಳಿತವೂ ನೆರವು ನೀಡಿದೆ.

ಜಿಲ್ಲಾ ಖನಿಜ ನಿಧಿ ಮತ್ತು ಸಂಡೂರು ಸ್ವಯಂಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ನೀಡಲಾಗಿರುವ ಹೊಲಿಗೆ ತರಬೇತಿ ಈ ಕೋವಿಡ್ - 19 ಹೊತ್ತಿನಲ್ಲಿ ಸದುಪಯೋಗಕ್ಕೆ ಬರುತ್ತಿದೆ. ಹೊಲಿಗೆ ತರಬೇತಿ ಪಡೆದ ಮಹಿಳೆಯರು ಮಾಸ್ಕ್ ತಯಾರಿಯಲ್ಲಿ ತೊಡಗಿದ್ದಾರೆ.

ಇಸ್ರೇಲ್‌ನಲ್ಲಿ ಹೊಸ ಮಾದರಿಯ ಟ್ರಾನ್ಸ್‌ಪರೆಂಟ್ ಮಾಸ್ಕ್ ತಯಾರು ಇಸ್ರೇಲ್‌ನಲ್ಲಿ ಹೊಸ ಮಾದರಿಯ ಟ್ರಾನ್ಸ್‌ಪರೆಂಟ್ ಮಾಸ್ಕ್ ತಯಾರು

ಹೊಲಿಗೆ ತರಬೇತಿ ಪಡೆದ ಮಹಿಳೆಯರು ತಯಾರು ಮಾಡಿದ ಮರು ಬಳಕೆ ಮಾಡುವ ಮಾಸ್ಕ್‌ಗಳ ಖರೀದಿಗೆ ಕೈಗಾರಿಕೆಗಳು ಮುಂದೆ ಬಂದಿರುವುದು ವಿಶೇಷ. ಮಹಿಳಾ ಗುಂಪು ಮತ್ತು ಕೈಗಾರಿಕೆಗಳ ಮಧ್ಯೆ ಬಳ್ಳಾರಿ ಜಿಲ್ಲಾಡಳಿತ ಸಂಪರ್ಕ ಕಲ್ಪಿಸಿದೆ.

ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ ಮಾಸ್ಕ್ ಧರಿಸುವುದು ಕಡ್ಡಾಯ; ದಂಡದ ಮೊತ್ತ ಇಳಿಸಿದ ಬಿಬಿಎಂಪಿ

ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿ ಇನ್ನೂ 1080 ಮಹಿಳೆಯರಿಗೆ ತರಬೇತಿ ನೀಡಬೇಕಿದೆ. ಆದರೆ, ಕೋವಿಡ್ -19 ಹಿನ್ನೆಲೆಯಲ್ಲಿ ತರಬೇತಿ ನೀಡಲಾಗುತ್ತಿಲ್ಲ. ಮಹಿಳೆಯರು ಮಾಸ್ಕ್ ತಯಾರಿಕೆ ಮೂಲಕ ಉದ್ಯೋಗ ಕಂಡುಕೊಂಡಿದ್ದಾರೆ.

ಮಾಸ್ಕ್ ಇಲ್ಲದೇ ಓಡಾಟ; 98 ಸಾವಿರ ದಂಡ ಕಟ್ಟಿದ ಬೆಂಗಳೂರಿಗರು!ಮಾಸ್ಕ್ ಇಲ್ಲದೇ ಓಡಾಟ; 98 ಸಾವಿರ ದಂಡ ಕಟ್ಟಿದ ಬೆಂಗಳೂರಿಗರು!

ಜಿಲ್ಲಾಡಳಿತದ ಸಹಾಯ

ಜಿಲ್ಲಾಡಳಿತದ ಸಹಾಯ

ಸಂಡೂರು ಸ್ವಯಂ ಶಕ್ತಿ ಯೋಜನೆ ಹೆಸರಿನಲ್ಲಿ ಜಿಲ್ಲಾ ಖನಿಜ ನಿಧಿ ಅಡಿ ಸಂಡೂರಿನ ಭುಜಂಗನಗರ ಮತ್ತು ವಿಠ್ಠಲಾಪುರದ 176 ಮಹಿಳೆಯರಿಗೆ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಒದಗಿಸಲಾಗಿತ್ತು. ಕೊರೊನಾ ಸಂದರ್ಭದಲ್ಲಿ ಮರುಬಳಕೆ ಮಾಡಬಹುದಾದ ಮಾಸ್ಕ್‌ ತಯಾರಿಕೆ ಮಾಡಲು ಅವರಿಗೆ ತಿಳಿಸಲಾಗಿದೆ. ಮಾಸ್ಕ್ ತಯಾರಿಕೆಗೆ ಬೇಕಾದ ಕಚ್ಛಾ ವಸ್ತುಗಳನ್ನು ಜಿಲ್ಲಾಡಳಿತದಿಂದ ಒದಗಿಸಲಾಗಿದೆ.

ಮಾಸ್ಕ್‌ಗೆ ಮಾರುಕಟ್ಟೆ ಸಿಕ್ಕಿದೆ

ಮಾಸ್ಕ್‌ಗೆ ಮಾರುಕಟ್ಟೆ ಸಿಕ್ಕಿದೆ

ಕಚ್ಛಾ ವಸ್ತು ಮತ್ತು ಮಾಸ್ಕ್ ಹೊಲಿಯುವುದಕ್ಕೆ ಬೇಕಾದ ಕೂಲಿ ಸೇರಿ ಪ್ರತಿ ಮಾಸ್ಕ್‌ಗೆ ಇಂತಿಷ್ಟು ದರ ನಿಗದಿ ಮಾಡಲಾಗಿದೆ. ಎರಡು ದಿನಗಳಿಂದ ಮಹಿಳೆಯರು ಈ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರವು ಮಹಿಳಾ ಗುಂಪುಗಳು ಮತ್ತು ಕಾರ್ಖಾನೆಗಳನ್ನು ಸಂಪರ್ಕಿಸಿ ಮಾಸ್ಕ್ ಪೂರೈಕೆ ಮಾಡಲು ವ್ಯವಸ್ಥೆ ಮಾಡಿದೆ.

ವಿವಿಧ ಕಂಪನಿಯಿಂದ ಬೇಡಿಕೆ

ವಿವಿಧ ಕಂಪನಿಯಿಂದ ಬೇಡಿಕೆ

ಈಗಾಗಲೇ ಎಸಿಸಿ ಸಿಮೆಂಟ್ ಕಂಪನಿ 3 ಸಾವಿರ, ಜಹಿರಾಜ್ ಇಸ್ಪಾತ್ 500 ಮತ್ತು ಹೋತೂರು ಸ್ಟೀಲ್ 200 ಮಾಸ್ಕ್‌ಗಳಿಗಾಗಿ ಬೇಡಿಕೆ ಸಲ್ಲಿಸಿವೆ. ಇನ್ನೂ ಹೆಚ್ಚಿನ ಕಾರ್ಖಾನೆಗಳು ಹಾಗೂ ಮಹಿಳಾ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಲಾಗಿದ್ದು, ಬೇಡಿಕೆ ಬರುವ ನಿರೀಕ್ಷೆ ಇದೆ. ಮಹಿಳೆಯರಿಗೆ ಅರ್ಥಿಕ ಶಕ್ತಿ ತುಂಬುವುದು ಈ ಯೋಜನೆ ಹಿಂದಿನ ಉದ್ದೇಶವಾಗಿದೆ.

ತರಬೇತಿ ಬಾಕಿ ಇದೆ

ತರಬೇತಿ ಬಾಕಿ ಇದೆ

ಸಂಡೂರು ಸ್ವಯಂ ಶಕ್ತಿ ಯೋಜನೆ ಅಡಿ ಇನ್ನೂ 1080 ಮಹಿಳೆಯರಿಗೆ ತರಬೇತಿ ನೀಡಬೇಕಿದೆ. ಮುಂದಿನ ದಿನಗಳಲ್ಲಿ ಅವರಿಗೂ ತರಬೇತಿ ನೀಡಿ ಹೊಲಿಗೆ ಯಂತ್ರಗಳನ್ನು ಡಿಎಂಎಫ್ ಅಡಿ ಒದಗಿಸಲಾಗುತ್ತದೆ. ಮಹಿಳೆಯರಿಗೆ ಅರ್ಥಿಕ ಶಕ್ತಿ ನೀಡಲು ಜಿಲ್ಲಾಡಳಿತ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

English summary
Mahila Swasahaya Sangha preparing mask in Ballari district of Karnataka with the help of district administration. ACC cements and other company ordered for mask.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X