ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಸಂಪೂರ್ಣ ಲಾಕ್‌ಡೌನ್, ಖರೀದಿಗೆ ಜನರ ಸಾಲು

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಮೇ 19; ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕೋವಿಡ್ ಹರಡುವಿಕೆ ತಡೆಯಲು ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಮೇ 19ರ ಬೆಳಗ್ಗೆ 10 ರಿಂದ ಮೇ 24ರ ಬೆಳಗ್ಗೆ 6 ಗಂಟೆ ತನಕ ಸಂಪೂರ್ಣ ಜನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿಬಿದ್ದರು. ನಗರದಲ್ಲಿ ರಸ್ತೆಗಳೆಲ್ಲ ಬೈಕ್ ಮತ್ತು ಕಾರುಗಳಿಂದ ಜಿಗಿ ಗುಡುತ್ತಿತ್ತು.

ಕೋವಿಡ್ ಸಂಖ್ಯೆ ಏರಿಕೆ; ಬಳ್ಳಾರಿಯಲ್ಲಿ ಮೇ 24ರ ತನಕ ಕಠಿಣ ಲಾಕ್‍ಡೌನ್ಕೋವಿಡ್ ಸಂಖ್ಯೆ ಏರಿಕೆ; ಬಳ್ಳಾರಿಯಲ್ಲಿ ಮೇ 24ರ ತನಕ ಕಠಿಣ ಲಾಕ್‍ಡೌನ್

ಅವಳಿ ನಗರಗಳಾದ ವಿಜಯನಗರ ಮತ್ತು ಬಳ್ಳಾರಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನಲೆ ಬಳ್ಳಾರಿ ಜಿಲ್ಲಾಡಳಿತ ಜನರ ಸಂಚಾರಕ್ಕೆ ನಿಷೇಧ ಹೇರಿದೆ. ತುರ್ತು ಸಂದರ್ಭದಲ್ಲಿ ಸಂಚಾರ ನಡೆಸಲು ಅವಕಾಶ ನೀಡಿದೆ.

ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ! ವಿಜಯನಗರ; ಸಾಮಾಜಿಕ ಅಂತರ ಮರೆತು ಮುಗಿಬಿದ್ದ ಜನ!

 Long Queues Outside Shops After Announcement Of Complete Lockdown

ಕೋವಿಡ್ ಹಾವಳಿ; ಅವಳಿ ನಗರಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನಲೆಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 20290 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.

ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!ಕೊವಿಡ್-19 ಪಾಸಿಟಿವಿಟಿ: ಟಾಪ್-5 ಪಟ್ಟಿಯಲ್ಲಿ ಬಳ್ಳಾರಿ, ಉತ್ತರ ಕನ್ನಡ ಜಿಲ್ಲೆ!

ಮೇ 18ರ ವರದಿಯಂತೆ 1,799 ಹೊಸ ಪ್ರಕರಣಗಳು ವರದಿಯಾಗಿವೆ. ಇದುವರೆಗೂ ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 1118. ಜಿಲ್ಲೆಯಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 78527.

ಕೋವಿಡ್ ಹರಡುವಿಕೆ ತಡೆಯಬೇಕು ಎಂದು ಜಿಲ್ಲಾಡಳಿತ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದೆ. ಜನರು ಇಂದು ಮುಂಜಾನೆ ತರಕಾರಿ, ದಿನಸಿ ವಸ್ತುಗಳ ಖರೀದಿಗಾಗಿ ಮುಗಿ ಬಿದ್ದಿದ್ದರು. ಸಂಪೂರ್ಣ ಲಾಕ್‌ಡೌನ್ ಹೇಗೆ ಪಾಲನೆಯಾಗಲಿದೆ? ಎಂದು ಕಾದು ನೋಡಬೇಕು.

English summary
After the announcement complete lockdown in Ballari and Vijayanagara long queue outside shops people buy in essential items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X