ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯ ಯೂನೂಸ್ ಬಾಷ ಲೋಕಾಯುಕ್ತ ಬಲೆಗೆ

By ಜಿಎಂ ರೋಹಿಣಿ ಬಳ್ಳಾರಿ
|
Google Oneindia Kannada News

ಬಳ್ಳಾರಿ, ಮೇ 31 : ಬಳ್ಳಾರಿಯಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರ ಯೂನೂಸ್ ಬಾಷಾ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಶೇ 149 ರಷ್ಟು ಆದಾಯಕ್ಕಿಂತಲೂ ಮೀರಿದ ಆಸ್ತಿ ಅವರ ಮನೆಯಲ್ಲಿ ಪತ್ತೆಯಾಗಿದೆ.

ಲೋಕಾಯುಕ್ತ ಎಸ್ಪಿ ಶ್ರೀಧರ್ ನೇತೃತ್ವದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ನಗರದ ಕಂಟೋನ್ಮೆಂಟ್ ಪ್ರದೇಶದ ಸೂರ್ಯ ಕಾಲೋನಿಯಲ್ಲಿರುವ ಯೂನೂಸ್ ಬಾಷಾ ಅವರ ಮನೆ ಮೇಲೆ ದಾಳಿ ನಡೆಸಿದರು. ಮನೆಯಲ್ಲಿದ್ದ 849 ಗ್ರಾಂ ಚಿನ್ನ, 685 ಗ್ರಾಂ ಬೆಳ್ಳಿ, 1.52 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡರು.

Lokayukta

ಯೂನೂಸ್ ಬಾಷ ಅವರ ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ, ಬಳ್ಳಾರಿ ಸಮೀಪದ ವೇಣಿವೀರಾಪುರದಲ್ಲಿರುವ 4, ಕೆಎಚ್‍ಬಿ ಕಾಲೋನಿ, ಸೂರ್ಯ ಕಾಲೋನಿ ಹಾಗೂ ಗುಲ್ಬರ್ಗ ನಗರದಲ್ಲಿರುವ ತಲಾ ಒಂದು ಸೇರಿದಂತೆ ಬಾಷಾ ಅವರ ಪತ್ನಿ ಹಾಗೂ ಮಕ್ಕಳ ಹೆಸರಿನಲ್ಲಿರುವ ನಿವೇಶನಗಳ ದಾಖಲೆಗಳು ಪತ್ತೆಯಾಗಿವೆ. [ಪಂಚ ಭ್ರಷ್ಟರ ಮನೆಯಲ್ಲಿ ಸಿಕ್ತು 15 ಕೋಟಿ]

ಆಸ್ತಿ ವಿವರ ಹೀಗಿದೆ
* ಪತ್ನಿ ಖಾಲೀದಾಬೇಗಂ ಹೆಸರಿನಲ್ಲಿ ಬಳ್ಳಾರಿ, ಗುಲ್ಬರ್ಗದಲ್ಲಿ 5 ನಿವೇಶನ, ಬಳ್ಳಾರಿಯಲ್ಲಿ ಬಂಗಲೆ. ಇವುಗಳ ಒಟ್ಟು ಮೌಲ್ಯ 30 ಲಕ್ಷದ 70 ಸಾವಿರ ರೂಪಾಯಿಗಳು.
* ಮೂರು ದ್ವಿಚಕ್ರ ವಾಹನಗಳ ಮೌಲ್ಯ 22 ಲಕ್ಷ ರೂಪಾಯಿಗಳು
* 849 ಗ್ರಾಂ ಚಿನ್ನ, 685 ಗ್ರಾಂ ಚಿನ್ನದ ಆಭರಣಗಳು, ಇವುಗಳ ಒಟ್ಟು ಮೌಲ್ಯ 22 ಲಕ್ಷ ರೂಪಾಯಿಗಳು
* ಒಟ್ಟು ಆಸ್ತಿ ಮೌಲ್ಯ 95 ಲಕ್ಷ ರೂ.ಗಳಿಗೂ ಅಧಿಕ

English summary
Lokayukta officials raided on Yunus Basha house in Bellary on Friday morning. Yunus Basha is an executive engineer of Karnataka Urban Water Supply and Drainage Board. Officials sied more than 95 lakh assets form Yunus Basha house and filed criminal cases under the Prevention of Corruption Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X