• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ ಮತದಾರರಿಗೆ ಆಮಿಷ ಒಡ್ಡಬೇಡಿ, ರೈಲ್ವೆ ಬೇಡಿಕೆ ಈಡೇರಿಸಿ

By ಜಿಎಂ ರೋಹಿಣಿ
|

ಬಳ್ಳಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಮತ್ತು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ದೇವೆಂದ್ರಪ್ಪ ಹಾಗೂ ಇತರೆ ಅಭ್ಯರ್ಥಿಗಳೇ, ತಮಗೆ ವಂದನೆಗಳು.

ಚುನಾವಣೆಗಳಲ್ಲಿ ಪಕ್ಷ, ವ್ಯಕ್ತಿಯ ಅರ್ಹತೆಯ ಮೇಲೆ ಮತಚಲಾಯಿಸುವ ಮತದಾರರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಲಿದೆ. ಇದರ ಜೊತೆಗೆ ಮತದಾರರಿಗೆ ಹಣ ಹಾಗೂ ಇತರೆ ಅಮಿಷ ಒಡ್ಡುವುದು, ಸಾಮಾನ್ಯವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಸಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆ ನೇರ ಸ್ಪರ್ಧೆ ಇದ್ದು, ಇಬ್ಬರು ಅಭ್ಯರ್ಥಿಗಳು ಯಾವುದೇ ಅಮಿಷ ಒಡ್ಡದೆ ಪಕ್ಷ ಹಾಗೂ ವ್ಯಕ್ತಿಯ ಅರ್ಹತೆಯ ಮೇಲೆಯೆ ಚುನಾವಣೆಗೆ ನಡೆಸಿ ದೇಶಕ್ಕೆ ಮಾದರಿಯಾಗಬೇಕೆಂದು ನಾನು ಒತ್ತಾಯಿಸುತ್ತೇನೆ. ನಮ್ಮ ಜಿಲ್ಲೆಯ ಮತದಾರರು ಯಾವುದೇ ಅಮಿಷಕ್ಕೆ ಒಳಗಾಗದೆ ಯೋಗ್ಯ ಅಭ್ಯರ್ಥಿಗೆ ಮತಚಲಾಯಿಸಬೇಕಾಗಿ ವಿನಂತಿಸುತ್ತೇನೆ.

ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಅನುದಾನ ಹಾಗೂ ಯೋಜನೆಗಳನ್ನು ತಮ್ಮ ರಾಜ್ಯದ ಜನತೆಗೆ ಮುಟ್ಟಿಸುವ ಮಹತ್‌ಕಾರ್ಯ ಉಳ್ಳವರಾಗಿರತಕ್ಕದ್ದು. ವಿಶೇಷವಾಗಿ ತಾನು ಪ್ರತಿನಿಧಿಸುವ ಕ್ಷೇತ್ರ ಹಾಗೂ ರಾಜ್ಯಕ್ಕೆ ಹೆಚ್ಚಿನ ರೈಲುಗಳು ಹಾಗೂ ರೈಲ್ವೆ ಯೋಜನೆಗಳನ್ನು ತಂದು ಕೊಡಬೇಕಾದ ಜವಾಬ್ದಾರಿ ತಮ್ಮ ಮೇಲಿರುತ್ತದೆ.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಬದ್ಧ: ಬಳ್ಳಾರಿ ಅಭ್ಯರ್ಥಿ ದೇವೇಂದ್ರಪ್ಪ

ಬಹುಕೋಟಿ ಆದಾಯ ನೀಡುವ ಬಳ್ಳಾರಿ ರೈಲ್ವೆ ಪ್ರದೇಶಗಳನ್ನು ನೂತನ ಹುಬ್ಬಳ್ಳಿ ನೈರುತ್ಯ ರೈಲ್ವೆವಲಯ ವ್ಯಾಪ್ತಿಗೆ ಸೇರಿಸುವಂತೆ 2000ದ ದಶಕದಲ್ಲಿ 188 ದಿನಗಳ ಹೋರಾಟ ನಡೆಸಿ ಯಶಸ್ವಿಯಾಗಿರುವ ರಾಜ್ಯ ರೈಲ್ವೆ ಕ್ರಿಯಾಸಮಿತಿಯ ನಿರಂತರ ಪರಿಶ್ರಮದ ಫಲವಾಗಿ ಹಾಗೂ ರಾಜ್ಯದ ಲೋಕಸಭಾ ಸದಸ್ಯರುಗಳು ಮತ್ತು ರೈಲ್ವೆ ಇಲಾಖೆಯ ಸಹಕಾರದಿಂದಾಗಿ ಬಳ್ಳಾರಿ ಮಾರ್ಗದಲ್ಲಿ (ಈ ಹಿಂದೆ ಬರಿ 20 ರೈಲು ಸಂಚರಿಸುತ್ತಿದ್ದು) ಈಗ ರೈಲುಗಳ ಸಂಖ್ಯೆ 40 ದಾಟಿದೆ ಎಂದು ಹೆಮ್ಮೆಯಿಂದ ಹೇಳಬಯಸುವೆವು.

ಕರ್ನಾಟಕ ಲೋಕಸಭಾ ಕ್ಷೇತ್ರಗಳ 'ಎ ಟು ಜೆಡ್' ಮಾಹಿತಿ

ಈ 40 ರೈಲುಗಳೊಂದಿಗೆ ಇನ್ನೂ ಹೆಚ್ಚಿನ ರೈಲುಗಳ ಅವಶ್ಯಕತೆ ಈ ಭಾಗಕ್ಕೆ ಇದೆ. ತಾವು ಸಂಸದರಾಗಿ ಚುನಾಯಿತರಾದಲ್ಲಿ ಕನಿಷ್ಠ ವರ್ಷಕ್ಕೆ 2 ರೈಲಿನಂತೆ 5 ವರ್ಷಗಳಲ್ಲಿ 10 ರೈಲುಗಳನ್ನು ಈ ಭಾಗಕ್ಕೆ ಕೊಡ ಮಾಡಲು ವಿನಂತಿಸುವೆವು.

2019ರ ಜನವರಿ ತಿಂಗಳಿನಲ್ಲಿ ಈ ಭಾಗದ ರೈಲ್ವೆ ಬೇಡಿಕೆಗಳ ಈಡೇರಿಕೆಗಾಗಿ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ನವದೆಹಲಿಗೆ ತೆರಳಿ ರೈಲ್ವೆ ಮಂತ್ರಿಗಳು, ರೈಲ್ವೆ ಬೋರ್ಡ್ ಅಧ್ಯಕ್ಷರನ್ನು ಲೋಕಸಭಾ ಸದಸ್ಯರುಗಳಾದ ಕರಡಿ ಸಂಗಣ್ಣ, ಶಿವಕುಮಾರ ಉದಾಸಿ, ಪಿ ಸಿ ಗದ್ದಿಗೌಡರ್, ಪ್ರಹ್ಲಾದ ಜೋಷಿ, ಮಾಜಿ ಸಂಸದರಾದ ಶ್ರೀರಾಮುಲು ಇವರುಗಳ ನೇತೃತ್ವದಲ್ಲಿ ಭೇಟಿ ಮಾಡಿ ಚರ್ಚಿಸಿದರೂ ಯಾವುದೇ ಫಲ ದೊರೆತಿರುವುದಿಲ್ಲ ಎಂಬ ಅಂಶ ತಮ್ಮ ಗಮನಕ್ಕೆ ತರಬಯಸುವೆನು.

ರಾಮುಲು ವಿರುದ್ಧ ಡಿಕೆಶಿ ರಣಕಹಳೆ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ

ತಾವು ನಮ್ಮ ಸಂಸದರಾಗಿ ಆಯ್ಕೆ ಆದಾಗ ಈ ಭಾಗದ ರೈಲ್ವೆ ಬೇಡಿಕೆಗಳನ್ನು ಈಡೇರಿಕೆಗಾಗಿ ಪ್ರಯತ್ನಿಸಿ ಸಫಲರಾಗಲು ಕೋರಿಕೆ.

ಈ ಭಾಗದ ರೈಲುಗಳ ಬೇಡಿಕೆಗಳು :

* ರೈಲು ಸಂಖ್ಯೆ 82651 / 82652 - ಯಶವಂತಪುರ - ಕಾಟ್ರಾ ವಾರದ ರೈಲು - ಶನಿವಾರ ಮತ್ತು ಗುರವಾರ ಸಂಚರಿಸುತ್ತಿತ್ತು. ದೇಶದ 5 ರಾಜ್ಯಗಳಲ್ಲಿ ಈ ರೈಲು ಸಂಚರಿಸುತ್ತಿದ್ದು, ಚಿತ್ರದುರ್ಗ - ಬಳ್ಳಾರಿ - ಮಾರ್ಗವಾಗಿ ನವದೆಹಲಿಯಿಂದ ಕಾಟ್ರಾ (ವೈಷ್ಣೋದೇವಿ) ತಲುಪುತ್ತಿದ್ದು. ಈ ರೈಲನ್ನು ಕಳೆದ 6 ತಿಂಗಳಿಂದ ನಿಲುಗಡೆಗೊಳಿಸಲಾಗಿದೆ. ತಕ್ಷಣ ಈ ರೈಲು ಪುನರಾಂಭ ಆಗಬೇಕು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ

* ರೈಲು ಸಂಖ್ಯೆ : 56529 / 56530 ಹರಿಹರ - ಕೊಟ್ಟೂ ರೈಲನ್ನು ಹೊಸಪೇಟೆವರೆಗೆ ವಿಸ್ತರಿಸಬೇಕು.

* ರೈಲು ಸಂಖ್ಯೆ : 57451 / 57452 ಗುಂತಕಲ್ ಚಿಕ್ಕಜಾಜೂರು ಪ್ಯಾಸೆಂಜರ್ ರೈಲನ್ನು ಹಾಸನ ಮಾರ್ಗವಾಗಿ ಮೈಸೂರಿಗೆ ವಿಸ್ತರಿಸಬೇಕು.

* ಹುಬ್ಬಳ್ಳಿ - ಚೈನೈ ಮಧ್ಯೆ ಸಂಚರಿಸುತ್ತಿದ್ದ ವಿಶೇಷ ವಾರದ ರೈಲು ಪುನರ್ ಪ್ರಾರಂಭವಾಗಬೇಕು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

* ಬಹುದಿನಗಳ ಬೇಡಿಕೆಯಾಗಿರುವ ಹೊಸಪೇಟೆ - ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಇಂಟರ್‌ಸಿಟ್ ರೈಲುನ್ನು ಪ್ರಥಮ ಆದ್ಯತೆಯ ಮೇರೆಗೆ ಪ್ರಾರಂಭಿಸಬೇಕು.

* ಬಳ್ಳಾರಿ ಮುಖೇನ - ಚಿತ್ರದುರ್ಗ - ಅರಿಸಿಕೇರೆ - ಹಾಸನ್ ಮಾರ್ಗವಾಗಿ ಮೈಸೂರಿಗೆ ಹಾಗೂ ಮಂಗಳೂರಿಗೆ ನೂತನ ರೈಲು ಪ್ರಾರಂಭವಾಗಬೇಕು.

* ಶಿವಮೊಗ್ಗ - ಗುಂತಕಲ್ ಮಧ್ಯೆ ಚಿತ್ರದುರ್ಗ, ಬಳ್ಳಾರಿ ಮಾರ್ಗವಾಗಿ ನೂತನ ರೈಲು ಪ್ರಾರಂಭವಾಗಬೇಕು.

ಬಿಜೆಪಿ ಅಭ್ಯರ್ಥಿಗಳು ಪ್ರಕಟ : ಬಳ್ಳಾರಿಯಲ್ಲಿ ಗೆದ್ದ ಶ್ರೀರಾಮುಲು!

* ಬಳ್ಳಾರಿ - ಹೊಸಪೇಟೆ ಮಾರ್ಗವಾಗಿ ಗುಂತಕಲ್ ನಿಂದ ಬಿಜಾಪುರ - ಸೊಲ್ಲಾಪುರಕ್ಕೆ ನೂತನ ರೈಲು ಪ್ರಾರಂಭವಾಗಬೇಕು.

* ಬಳ್ಳಾರಿ - ಹೊಸಪೇಟೆ ಮಾರ್ಗವಾಗಿ ಸಂಚರಿಸುವ ವಾರದ ರೈಲುಗಳಾದ ಮೈಸೂರು - ವಾರಣಾಸಿ, ಯಶವಂತಪುರ - ಟಾಟಾನಗರ, ಮೈಸೂರು - ಶಿರಡಿ ಮುಂತಾದ ರೈಲುಗಳು ದಿನನಿತ್ಯದ ರೈಲುಗಳಾಗಿ ಸಂಚರಿಸಬೇಕು.

* ವರ್ತುಲ ರೈಲು ಆರಂಭಿಸಲು ಒತ್ತಾಯಿಸಿರಿ.

* ಬಳ್ಳಾರಿ - ಹೊಸಪೇಟೆ - ಗದಗ - ಬಿಜಾಪುರ - ಸೊಲ್ಲಾಪುರ - ಗುಲ್ಬರ್ಗಾ - ಯಾದಗಿರಿ - ರಾಯಚೂರು - ಆಧೋನಿ - ಗುಂತಕಲ್ - ಬಳ್ಳಾರಿಗೆ ವರ್ತುಲ ರೈಲು ಪ್ರಾರಂಭಿಸಬೇಕು.

* ಇದೇ ರೀತಿ ಬಳ್ಳಾರಿ- ಹೊಸಪೇಟೆ - ಕೊಟ್ಟೂರು - ಹರಿಹರ - ದಾವಣಗೆರೆ - ಚಿಕ್ಕಜಾಜೂರು - ಚಿತ್ರದುರ್ಗ - ರಾಯದುರ್ಗ - ಬಳ್ಳಾರಿಗೆ ವರ್ತುಲ ರೈಲು.

ಬಳ್ಳಾರಿ ಬಿಜೆಪಿ ಅಭ್ಯರ್ಥಿಯಾಗಿ ಹರಪನಹಳ್ಳಿ ದೇವೇಂದ್ರಪ್ಪ ಕಣಕ್ಕೆ?

ರೈಲ್ವೆ ಯೋಜನೆಗಳು :

* ರಾಯದುರ್ಗ - ಕಲ್ಯಾಣದುರ್ಗ - ತುಮಕೂರು ನೂತನ ಬ್ರಾಡ್‌ಗೇಜ್ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿದ್ದು ಬಹುಬೇಗ ಕಾಮಗಾರಿ ಪೂರ್ಣಗೊಳ್ಳಬೇಕು.

* ಮುನಿರಾಬಾದ್ - ಮೆಹಬೂಬ್‌ನಗರ ನೂತನ ರೈಲುಮಾರ್ಗದ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕು.

* ಹಿಂದಿನ ರೈಲ್ವೆ ಮಂತ್ರಿಗಳಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸದಾನಂದ ಗೌಡರವರು ಬಳ್ಳಾರಿ - ಸಿಂಧನೂರು - ಲಿಂಗಸೂಗೂರು ನೂತನ ರೈಲು ಮಾರ್ಗದ ಸರ್ವೇ ಆದೇಶ ಮಾಡಿದ್ದರು. ರೈಲ್ವೆ ಇಲಾಖೆ ಈ ಮಾರ್ಗ ಲಾಭದಯಕವಲ್ಲವೆಂಬ ವರದಿ ನೀಡಿದ್ದು, ಈ ಮಾರ್ಗದ ಕೆಲಸಕ್ಕೆ ಚಾಲನೆ ದೊರೆಯಬೇಕು.

* ದರೂಜಿಯಿಂದ ಕಂಪ್ಲಿ ಮಾರ್ಗವಾಗಿ ಗಂಗಾವತಿಗೆ ಅಂದಾಜು 40 ಕಿ.ಮೀ. ನೂತನ ರೈಲ್ವೆ ಮಾರ್ಗಕ್ಕಾಗಿ ಕಾರ್ಯಪ್ರವೃತ್ತರಾಗಬೇಕು.

ರೈಲು ನಿಲ್ದಾಣಗಳ ಅಭಿವೃದ್ಧಿ :

* ಬಳ್ಳಾರಿ - ಹೊಸಪೇಟೆ ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್ ಮತ್ತು ಲಿಫ್ಟ್ ಸೌಲಭ್ಯ ಒದಗಿಸಬೇಕು. - ಈ ಎರಡು ನಿಲ್ದಾಣಗಳಲ್ಲಿ ಇನ್ನೂ 2 ಪ್ಲಾಟ್ ಫಾರಂಗಳ ರಚನೆ ಯಾಗಬೇಕು.

* ದರೋಜಿ ರೈಲು ನಿಲ್ದಾಣದಲ್ಲಿ ನೂತನ ರೈಲ್ವೆ ಪಿಟ್‌ಲೈನ್ ಆರಂಭಿಸಬೇಕು.

ಈ ಮೇಲಿನ ಬೇಡಿಕೆಗಳನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಇಬ್ಬರು ಮುಂಬರುವ ದಿನಗಳಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಕೋರುತ್ತೇನೆ. ತಮ್ಮ ಎಲ್ಲ ರೈಲ್ವೆ ಪ್ರಗತಿಯ ಕಾರ್ಯದಲ್ಲಿ ರೈಲ್ವೆ ಕ್ರಿಯಾಸಮಿತಿಯ ಸಹಕಾರ ಸದಾ ತಮ್ಮೊಂದಿಗಿರುತ್ತದೆ.

ಶುಭ ಹಾರೈಕೆಗಳೊಂದಿಗೆ,

ತಮ್ಮ ವಿಶ್ವಾಸಿ,

ಕೆ.ಎಂ.ಮಹೇಶ್ವರಸ್ವಾಮಿ, ಅಧ್ಯಕ್ಷರು, ರಾಜ್ಯ ರೈಲ್ವೆ ಕ್ರಿಯಾ ಸಮಿತಿ-ಕರ್ನಾಟಕ

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Elections : Letter by Karnataka railways committee of Ballari to Congress candidate VS Ugrappa and BJP candidate Devendrappa to fulfil railway demands.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more