ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡಿಯುವ ನೀರಿನ ಘಟಕಗಳಿಗೆ ಬೀಗ ಹಾಕಿದ ಆರೋಗ್ಯ ಅಧಿಕಾರಿಗಳು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜನವರಿ 25: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ಆರೋಗ್ಯ ಅಧಿಕಾರಿಗಳ ತಂಡ ದಿಢೀರ್ ದಾಳಿ ಮಾಡಿ ಅಕ್ರಮ ಕುಡಿಯುವ ನೀರಿನ ಘಟಕಗಳಿಗೆ ಬೀಗಮುದ್ರೆ ಹಾಕಿದ್ದಾರೆ.

ಸಿರಗುಪ್ಪ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳೆಂಬ ಹೆಸರಿನೊಂದಿಗೆ ಎಲ್ಲೆಂದರಲ್ಲಿ ಸಂಘ-ಸಂಸ್ಥೆಗಳ ಹೆಸರನ್ನು ಹಾಕಿ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದರು.

ನರಳುತ್ತಿದ್ದರೂ ವೀಲ್ ಚೇರ್ ಕೊಡಲಿಲ್ಲ ವಿಮ್ಸ್ ಸಿಬ್ಬಂದಿ, ಹೆಗಲ ಮೇಲೇ ಮಗಳ ಹೊತ್ತೊಯ್ದ ತಂದೆನರಳುತ್ತಿದ್ದರೂ ವೀಲ್ ಚೇರ್ ಕೊಡಲಿಲ್ಲ ವಿಮ್ಸ್ ಸಿಬ್ಬಂದಿ, ಹೆಗಲ ಮೇಲೇ ಮಗಳ ಹೊತ್ತೊಯ್ದ ತಂದೆ

ಸೂಕ್ತ ಪರವಾನಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಮಾನದಂಡಗಳ ಪ್ರಕಾರ ಶುದ್ಧೀಕರಿಸದ ನೀರನ್ನು ಟಾಟಾ ಏಸ್ ಮತ್ತು ಆಟೋಗಳಲ್ಲಿ ಟ್ಯಾಂಕರ್ ತುಂಬಿಕೊಂಡು, ಧ್ವನಿ ವರ್ಧಕಗಳ ಮೂಲಕ ಮನೆಮನೆಗೆ ಶುದ್ಧ ಕುಡಿಯುವ ನೀರು ಎಂದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿತ್ತು.

Lockout Drinking Water Units By Health Officials In Ballary

ಇದರಿಂದ ನಷ್ಟ ಹೊಂದಿ ರೋಸಿ ಹೋಗಿದ್ದ ಐಎಸ್ಐ ಘಟಕಗಳ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿ ಅಕ್ರಮ ನೀರಿನ ಘಟಕಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದರು.

ಬಳ್ಳಾರಿಯಲ್ಲಿ ಒಂದೇ ತಿಂಗಳಿಗೆ 5 ಲಕ್ಷ ರುಪಾಯಿ ಕರೆಂಟ್ ಬಿಲ್ಬಳ್ಳಾರಿಯಲ್ಲಿ ಒಂದೇ ತಿಂಗಳಿಗೆ 5 ಲಕ್ಷ ರುಪಾಯಿ ಕರೆಂಟ್ ಬಿಲ್

ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆ, ವಿದ್ಯುತ್ ಇಲಾಖೆಯ ನೌಕರರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಏಕಕಾಲಕ್ಕೆ ತಂಡ ರಚಿಸಿಕೊಂಡು ಘಟಕಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

Lockout Drinking Water Units By Health Officials In Ballary

ದಾಳಿ ಸಮಯದಲ್ಲಿ ಪರಿಶೀಲನೆ ಮಾಡಿ ಅಕ್ರಮ ಕಂಡು ಬಂದ ಆರು ಘಟಕಗಳ ಮೇಲೆ ಕ್ರಮ ಜರುಗಿಸಿದ್ದು, ಅದರ ಜೊತೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ ಘಟಕಗಳಿಗೆ ಬೀಗ ಹಾಕಿದ್ದಾರೆ.

English summary
Health officials have attacked the illegal drinking water plants in Siruguppa, Ballary District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X