ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಮೂರು ವರ್ಷದ ಮಗುವನ್ನು ಹೊತ್ತೊಯ್ದ ಚಿರತೆ

|
Google Oneindia Kannada News

ಬಳ್ಳಾರಿ, ಡಿಸೆಂಬರ್ 12: ಚಿರತೆಯೊಂದು ನೋಡನೋಡುತ್ತಿದ್ದಂತೆಯೇ ಬಂದು ಮಗುವನ್ನು ಹೊತ್ತೊಯ್ದು ಹತ್ಯೆ ಮಾಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಸೋಮಲಾಪುರದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.

 ಮೈಸೂರು ಜಿಲ್ಲೆಯಲ್ಲಿ ಕಾಡಿಗೆ ಬಿಟ್ಟರೂ ನಾಡಿಗೆ ಬರುತ್ತಿರುವ ಚಿರತೆಗಳು ಮೈಸೂರು ಜಿಲ್ಲೆಯಲ್ಲಿ ಕಾಡಿಗೆ ಬಿಟ್ಟರೂ ನಾಡಿಗೆ ಬರುತ್ತಿರುವ ಚಿರತೆಗಳು

ಮೂರು ವರ್ಷದ ವೆಂಕಟರಾಜು ಚಿರತೆ ದಾಳಿಗೆ ಬಲಿಯಾದ ಮಗು, ಮಂಗಳವಾರ ಸಂಜೆ ಆಟವಾಡುತ್ತಿರುವಾಗ ಮನೆಯ ಮುಂದೆ ಬಂದಿದ್ದ ಚಿರತೆ ಕಣ್ಮುಂದೆಯೇ ಮಗುವನ್ನು ಎತ್ತಿಕೊಂಡು ಹೋಗಿದೆ. ಆದರೂ ನಮಗೆ ಏನು ಮಾಡಲು ಸಾಧ್ಯವಾಗಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

 ಕರ್ನಾಟಕದಲ್ಲಿ ಮೊದಲ ಗಣತಿ, 2,500 ಚಿರತೆ ಪತ್ತೆ ಕರ್ನಾಟಕದಲ್ಲಿ ಮೊದಲ ಗಣತಿ, 2,500 ಚಿರತೆ ಪತ್ತೆ

ಬಳಿಕ ಗ್ರಾಮಸ್ಥರೆಲ್ಲ ಸೇರಿ ಬಾಲಕನನ್ನು ಹುಡುಕಿದ್ದಾರೆ. ಗ್ರಾಮದ ಹೊರವಲಯದಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಚಿರತೆ ಗ್ರಾಮದ ನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಕೊಡುತ್ತಿದೆ, ಒಂದೊಮ್ಮೆ ಚಿರತೆಯನ್ನು ಹಿಡಿಯದಿದ್ದರೆ ಇನ್ನೆಷ್ಟು ಪ್ರಾಣ ಬಲಿಯಾದೀತು ಎಂದು ಕಳವಳ ವ್ಯಕ್ತಪಡಿಸಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Leopard took away boy in front of his parents in bellary

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ, ಸ್ಥಳದಲ್ಲಿಯೇ ಇದ್ದು ಚಿರತೆ ಸೆರೆಗೆ ಮುಂದಾಗಿದ್ದಾರೆ. ಬೋನುಗಳನ್ನಿಟ್ಟು ಚಿರತೆ ಸೆರೆಗೆ ಮುಂದಾಗಿದ್ದಾರೆ.

English summary
Leopard took away boy in front of his parents in bellary, forest department officials are searching Leoapard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X