ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೃಷ್ಣದೇವರಾಯ ವಿವಿಯಿಂದ ಅಣ್ಣಾ ಹಜಾರೆಗೆ ಡಾಕ್ಟರೇಟ್

|
Google Oneindia Kannada News

ಬಳ್ಳಾರಿ, ಜೂ. 20 : ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ಜೂ.21ರ ಶನಿವಾರ ನಡೆಯಲಿದೆ. ನಟ ಶಿವರಾಜ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ವಿಜ್ಞಾನಿ ಯು.ಆರ್.ರಾವ್ ಸೇರಿದಂತೆ ಎಂಟು ಸಾಧಕರಿಗೆ ಈ ಬಾರಿ ಗೌರವ ಡಾಕ್ಟರೇಟ್‌ ನೀಡಲಾಗುತ್ತದೆ.

ಜೂ.21ರ ಶನಿವಾರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಲಿದೆ. ಶಿವರಾಜ್ ಕುಮಾರ್, ಪ್ರೊ.ಯು.ವಿ.ರಾವ್, ಅಣ್ಣಾ ಹಜಾರೆ, ಶ್ರೀ ಶ್ರೀ ಶ್ರೀ ಸಂಗನಬಸವ ಮಹಾಸ್ವಾಮಿ, ಡಾ ಎಸ್. ಸಿ. ಶರ್ಮ, ಜೇಕಬ್ ಕ್ರಾಸ್ಟಾ, ಶ್ರೀಮತಿ ಸುಭದ್ರಮ್ಮ ಮನ್ಸೂರ್ ಮತ್ತು ಸಿ. ಆರ್. ನಸೀರ್ ಅಹಮದ್ ಅವರಿಗೆ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಎಂಟು ಸಾಧಕರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಅಣ್ಣಾ ಹಜಾರೆ ಸಂಕ್ಷಿಪ್ತ ಪರಿಚಯ : ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯವರಿಗೆ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದೆ. 1963ರ ಯುದ್ಧದ ಸಂದರ್ಭದಲ್ಲಿ ಸಾರ್ವಜನಿಕ ಕ್ಷೇತ್ರದೊಂದಿಗಿನ ನಂಟಿಗೆ ಭಾರತದ ಗಡಿಯಿಂದ ಮುನ್ನುಡಿ ಬರೆದವರು ಅಣ್ಣಾ ಹಜಾರೆ.

Anna Hazare

ಸ್ವಾಮಿ ವಿವೇಕಾನಂದರ ಪುಸ್ತಕರಿಂದ ಸ್ಫೂರ್ತಿ ಪಡೆದ ಹಜಾರೆ ಅವರು, ಮನುಕುಲದ ಏಳಿಗೆಗೆ ತಮ್ಮನ್ನು ತಾವು ಅರ್ಪಿಸಿಕೊಂಡರು. ಮಹಾರಾಷ್ಟ್ರದ ಅಹಮದ್‌ ನಗರ ಜಿಲ್ಲೆಯ ರಾಲೆಗನ್‌ ಸಿದ್ದಿ ಎಂಬ ಗ್ರಾಮದಲ್ಲಿ ಜಲ ನಿರ್ವಹಣೆ, ಸ್ಥಳೀಯ ಸಂಸ್ಥೆಗಳ ಸಬಲೀಕರಣ, ಮದ್ಯಪಾನ ವಿರೋಧಿ ಚಳುವಳಿಗಳು, ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಸ್ವಸಹಾಯ ಗುಂಪುಗಳ ಪೋಷಣೆ ಮತ್ತು ಇನ್ನಿತರ ಸಮಾಜ ಸುಧಾರಣೆಯ ಕ್ರಮಗಳನ್ನು ಕೈಗೊಂಡರು.

ರಾಲೆಗನ್‌ ಸಿದ್ದಿ ಎಂಬ ಪುಟ್ಟ ಗ್ರಾಮವನ್ನು ಸಾಬರಮತಿ ಆಶ್ರಮವನ್ನಾಗಿ ರೂಪಾಂತರಗೊಳಿಸಿ ಅಣ್ಣಾ ಹಜಾರೆ ಅವರು, ಇಂದು ಸಮಾಜ ಸೇವಕರು, ಸಂಶೋಧಕರು ಹಾಗೂ ರಾಜಕಾರಣಿಗಳು ಸಂದರ್ಶಿಸುವ ಮಾದರಿ ಪ್ರವಾಸಿ ಸ್ಥಳವನ್ನಾಗಿ ಅದನ್ನು ಪರಿವರ್ತಿಸಿದ್ದಾರೆ. ದೇಶದ ಅಭಿವೃದ್ಧಿಯಾಗಬೇಕಾದರೆ ಹಳ್ಳಿಯಿಂದ ದಿಲ್ಲಿಯ ತನಕ ಭ್ರಷ್ಟಾಚಾರ ತೊಲಗಬೇಕು ಎಂದು ದೇಶವ್ಯಾಪಿ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಿದ ಅಣ್ಣಾ ಹಜಾರೆ ಅವರ ನಿರಂತೆ ಹೋರಾಟಲದ ಫಲವಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಯಿತು.

2011ರಲ್ಲಿ ಜನಲೋಕಪಾಲ್ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಮಾಡಿದ ಉಪವಾಸ ಸತ್ಯಗ್ರಾಹ ಪ್ರಪಂಚದ ಗಮನ ಸೆಳೆಯಿತು. ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಸಂಘ ಸಂಸ್ಥೆಗಳು ಅಣ್ಣಾ ಹಜಾರೆಯಾವರ ಸಾಧನೆಯನ್ನು ಗೌರವಿಸಿವೆ. ಭಾರತ ಸರ್ಕಾರವು ಹಜಾರೆ ಅವರಿಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಶ್ರೀಯುತರ ಸೇವೆಯನ್ನು ಪರಿಗಣಿಸಿದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸುತ್ತಿದೆ.

English summary
Eminent space scientist Dr. U.R Rao, Social activist Anna Hazare, Kannada actor Shivarajkumar, Jacot Crasda (education and social science), S.P.Sharma(education and Science), C.R Nazeer Ahmed (social worker), Subadramma Mansor (stage artiste) and Sanga Basavanna Swamy (social work) have been chosen by the Vijayanara Sri Krishnadevaraya University Bellary for being conferred the honorary doctorate. Here is a brief profile of all persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X