ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೆ. 17ರಿಂದ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರೆ ಆರಂಭ

|
Google Oneindia Kannada News

ಬಳ್ಳಾರಿ, ಫೆಬ್ರವರಿ. 08 : ಕೂಡ್ಲಿಗಿ ತಾಲೂಕು ಕೊಟ್ಟೂರು ಪಟ್ಟಣದ ಪ್ರಸಿದ್ಧ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರಾ ರಥೋತ್ಸವ ಫೆಬ್ರವರಿ 21ರಂದು ಮಂಗಳವಾರ ಸಾಯಂಕಾಲ ವಿಜೃಂಭಣೆಯಿಂದ ಜರುಗಲಿದೆ.

ರಥೋತ್ಸವದ ಹಿನ್ನಲೆಯಲ್ಲಿ ಫೆಬ್ರವರಿ 17ರಿಂದ 20ರ ವರೆಗೆ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದ ಫೆಬ್ರವರಿ 21ರಂದು ಸಾಯಂಕಾಲ ಗುರುಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.[ಫೆಬ್ರವರಿ 13ರಂದು ಮೈಲಾರದ ಗೊರವಪ್ಪನ ಕಾರಣಿಕ ಭವಿಷ್ಯ]

kottur sri Guru Basaveshwara swamy fair begins from february 17 to 21

ಫೆಬ್ರವರಿ17 ರಂದು ರಾತ್ರಿ ಬೆಳ್ಳಿಯ ರಥದಲ್ಲಿ ನಾಗರೋತ್ಸವ, 18ರಂದು ಬೆಳ್ಳಿಯ ರಥದಲ್ಲಿ ನವಿಲು ವಾಹನೋತ್ಸವ, 19ರಂದು ರಾತ್ರಿ ಬೆಳ್ಳಿಯ ರಥದಲ್ಲಿ ಗಜವಾಹನೋತ್ಸವ, 20ರಂದು ರಾತ್ರಿ ಬೆಳ್ಳಿಯ ರಥದಲ್ಲಿ ವೃಷಭ ವಾಹನೋತ್ಸವ.

ಹಾಗೂ 21ರಂದು ಸಾಯಂಕಾಲ ಶ್ರೀ ಸ್ವಾಮಿಯ ಮಹಾರಥೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

English summary
Lord Sri Basaveshwara Swamy fair begins from february 17 to 21 at kottur Bellary District Kudligi taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X