ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂವರು ಸಾಧಕರಿಗೆ ಹಂಪಿ ವಿವಿಯ ನಾಡೋಜ ಗೌರವ

|
Google Oneindia Kannada News

ಬಳ್ಳಾರಿ, ಮಾ.3 : ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ನಾಡೋಜ ಗೌರವ ಪದವಿಗೆ ಡಾ.ಪಿ.ಎಸ್.ಶಂಕರ್, ಪ್ರೊ.ಎಂ.ಎಚ್.ಕೃಷ್ಣಯ್ಯ ಹಾಗೂ ಎಸ್.ಆರ್.ರಾಮಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಮಾರ್ಚ್ 6ರಂದು ನಾಡೋಜ ಪದವಿ ಪ್ರದಾನ ಮಾಡಲಾಗುತ್ತದೆ.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಹಂಪಿ ಕನ್ನಡ ವಿಶ್ವವಿದ್ಯಾ­ಲ­ಯದ ಕುಲಪತಿ ಪ್ರೊ ಹಿ.ಚಿ. ಬೋರ­ಲಿಂಗಯ್ಯ ಅವರು ಈ ಕುರಿತು ಮಾಹಿತಿ ನೀಡಿದರು. ಕಲಬುರ್ಗಿಯ ವೈದ್ಯ ಸಾಹಿತಿ ಡಾ.ಪಿ.ಎಸ್‌. ಶಂಕರ್‌, ಸಾಹಿತಿ ಹಾಗೂ ಕಲಾ ವಿಮರ್ಶಕ ಪ್ರೊ.ಎಂ.ಎಚ್‌. ಕೃಷ್ಣಯ್ಯ, ಸಾಹಿತಿ ಮತ್ತು ಪತ್ರಕರ್ತ ಎಸ್‌.ಆರ್‌. ರಾಮ­ಸ್ವಾಮಿ ಅವರಿಗೆ ನಾಡೋಜ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.

Nadoja

ಮಾರ್ಚ್‌ 6ರಂದು ಸಂಜೆ ವಿಶ್ವವಿದ್ಯಾಲಯದ 'ನವರಂಗ' ಬಯಲು ರಂಗ­ಮಂದಿ­­ರದಲ್ಲಿ ನಡೆಯಲಿರುವ 23ನೇ ಘಟಿಕೋತ್ಸವ (ನುಡಿ­ಹಬ್ಬ) ಸಮಾರಂಭದಲ್ಲಿ ರಾಜ್ಯ­ಪಾಲ ವಜು­ಭಾಯಿ ವಾಲಾ ಅವರು ನಾಡೋಜ ಗೌರವವನ್ನು ಪ್ರದಾನ ಮಾಡಲಿ­ದ್ದಾರೆ. [ನಾಡೋಜ ದರೋಜಿ ಈರಮ್ಮ ಅಸ್ತಂಗತ]

23ನೇ ಘಟಿಕೋತ್ಸವ ಸಮಾರಂಭದಲ್ಲಿ 56 ಪಿಎಚ್‌ಡಿ, 62 ಎಂ.ಫಿಲ್, 907 ಸ್ನಾತಕೋತ್ತರ, 381 ಪದವಿ ಸೇರಿದಂತೆ ಒಟ್ಟು 1,742 ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರೊ ಹಿ.ಚಿ. ಬೋರ­ಲಿಂಗಯ್ಯ ಅವರು ತಿಳಿಸಿದರು.

ಅಂಕಣಕಾರ ಮತ್ತು ನವದೆಹಲಿಯ ಜವಾಹರ­ಲಾಲ್‌ ನೆಹರೂ ವಿಶ್ವವಿದ್ಯಾ­ಲಯದ ಪ್ರಾಧ್ಯಾಪಕ ಪ್ರೊ.ಎಚ್‌.ಎಸ್‌.­ಶಿವಪ್ರಕಾಶ್‌ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

English summary
The Kannada University at Hampi, Ballari would be conferring 'Nadoja' a honorary degree to three eminent persons on March 6 said, Ho. Chi. Boralingaiah Vice-Chancellor of University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X