ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download
LIVE

ಬಳ್ಳಾರಿ ಲೋಕಸಭೆ ಚುನಾವಣೆ ಅಪ್ಡೇಟ್: ವಿಎಸ್ ಉಗ್ರಪ್ಪಗೆ ದಾಖಲೆ ಜಯ

|
Google Oneindia Kannada News

ಬಳ್ಳಾರಿ, ನವೆಂಬರ್ 06: ಕರ್ನಾಟಕದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಚುನಾವಣಾ ಫಲಿತಾಂಶ ಮಂಗಳವಾರ(ನವೆಂಬರ್ 06)ದಂದು ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜೆ ಶಾಂತಾ ಅವರು ತೀವ್ರ ಮುಖಭಂಗ ಅನುಭವಿಸಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಅಂತಿಮ ಫಲಿತಾಂಶ: ವಿಎಸ್ ಉಗ್ರಪ್ಪ: 6,28,365 ಮತಗಳು ; ಜೆ ಶಾಂತಾ : 3,85,204 ಮತಗಳು

ನವೆಂಬರ್ 3 ಶನಿವಾರದಂದು ನಡೆದ ಉಪಚುನಾವಣೆಯ ಫಲಿತಾಂಶ ಕುತೂಹಲಕಾರಿಯಾಗಿತ್ತು. ಮಂಡ್ಯದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ ಸಿ ಎಸ್ ಪುಟ್ಟರಾಜು, ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದ ಬಿ ಎಸ್ ಯಡಿಯೂರಪ್ಪ ಮತ್ತು ಬಳ್ಳಾರಿ ಬಿಜೆಪಿ ಸಂಸದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.

ಶಿವಮೊಗ್ಗ ಉಪ ಚುನಾವಣೆ ಫಲಿತಾಂಶ Live : ರಾಘವೇಂದ್ರ ಮುನ್ನಡೆಶಿವಮೊಗ್ಗ ಉಪ ಚುನಾವಣೆ ಫಲಿತಾಂಶ Live : ರಾಘವೇಂದ್ರ ಮುನ್ನಡೆ

LIVE Bellary Loksabha By Elecions Results

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತ ಅವರು ಕಣದಲ್ಲಿದ್ದರೆ ಕಾಂಗ್ರೆಸ್ ನಿಂದ ವಿ.ಎಸ್.ಉಗ್ರಪ್ಪ ಮೊದಲ ಬಾರಿಗೆ ಸ್ಪರ್ಧಿಸಿದ್ದರು.

5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ LIVE ಅಪ್ಡೇಟ್ಸ್5 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ LIVE ಅಪ್ಡೇಟ್ಸ್

ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಡಾ.ಟಿ.ಆರ್.ಶ್ರೀನಿವಾಸ್ ಕಣದಲ್ಲಿದ್ದರು. ಬಿ. ಶ್ರೀರಾಮುಲು ಹಾಗೂ ಡಿಕೆ ಶಿವಕುಮಾರ್ ನಡುವಿನ ಪ್ರತಿಷ್ಠಾ ಕಣವಾಗಿ ಮಾರ್ಪಾಟ್ಟಿದ್ದು, ಯಾರಿಗೆ ಮೇಲುಗೈ ಎಂಬುದು ಇಂದು ನಿರ್ಧಾರವಾಗಿದೆ.

ಜಮಖಂಡಿ ಉಪಚುನಾವಣೆ ಫಲಿತಾಂಶ LIVE: ಕಾಂಗ್ರೆಸ್‌ಗೆ ಆರಂಭಿಕ ಮುನ್ನಡೆ ಜಮಖಂಡಿ ಉಪಚುನಾವಣೆ ಫಲಿತಾಂಶ LIVE: ಕಾಂಗ್ರೆಸ್‌ಗೆ ಆರಂಭಿಕ ಮುನ್ನಡೆ

Karnataka : LIVE Bellary Loksabha By Elections Results

ಸ್ವಾತಂತ್ರ್ಯ ಬಂದಾಗಿನಿಂದ 2000 ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿದೆ. ಈ ಬಾರಿ ದೀಪಾವಳಿ ಲಡ್ಡು ಕೈ ನಾಯಕರ ಬಾಯಿಗೆ ಬಿದ್ದಿದೆ.

Newest FirstOldest First
12:08 PM, 6 Nov

16ನೇ ಸುತ್ತಿನ ನಂತರ ಅಭ್ಯರ್ಥಿಗಳು ಗಳಿಸಿದ ಮತಗಳು ವಿಎಸ್ ಉಗ್ರಪ್ಪ : 588863 ಮತಗಳು ಜೆ ಶಾಂತಾ: 360608 ಮತಗಳು ಡಾ.ಶ್ರೀನಿವಾಸ್ : 13030 ನೋಟಾ: 11674
11:33 AM, 6 Nov

12ನೇ ಸುತ್ತಿನ ಮತ ಎಣಿಕೆ ನಂತರ ಮತಗಳ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 4,78,180ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ 2,93,977 ಮತಗಳು ಮತಗಳ ಅಂತರ 1,84,203
10:54 AM, 6 Nov

11ನೇ ಸುತ್ತಿನ ಮತ ಎಣಿಕೆ ನಂತರ ಮತಗಳ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 4,44,341 ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ 2,70,041ಮತಗಳು ಮತಗಳ ಅಂತರ 174300
10:43 AM, 6 Nov

10ನೇ ಸುತ್ತಿನ ಮತ ಎಣಿಕೆ ನಂತರ ಮತಗಳ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 3,70,743ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ 2,19,413ಮತಗಳು ಮತಗಳ ಅಂತರ 1,51,330
10:31 AM, 6 Nov

9ನೇ ಸುತ್ತಿನ ಮತ ಎಣಿಕೆ ನಂತರ ಮತ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 3,34,907ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ ,194,376 ಮತಗಳು ಮತಗಳ ಅಂತರ 1,40,531
10:21 AM, 6 Nov

8ನೇ ಸುತ್ತಿನ ಮತ ಎಣಿಕೆ ನಂತರ ಮತ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 2,99,244 ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ 1,70,429 ಮತಗಳು
10:14 AM, 6 Nov

1,84,000 ಮತಗಳ ಅಂತರ ಕಾಯ್ದುಕೊಂಡ ವಿಎಸ್ ಉಗ್ರಪ್ಪ ಅವರು ಶ್ರೀರಾಮುಲು, ಸೋನಿಯಾ ಗಾಂಧಿ, ಕೂಳೂರು ಶ್ರೀನಿವಾಸ್ ಗೌಡ ಅವರ ದಾಖಲೆ ಮುರಿದ ಉಗ್ರಪ್ಪ.
Advertisement
10:11 AM, 6 Nov

7ನೇ ಸುತ್ತಿನ ಮತ ಎಣಿಕೆ ನಂತರ ಮತ ಗಳಿಕೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 2,66,370 ಮತಗಳು ಬಿಜೆಪಿಯ ಅಭ್ಯರ್ಥಿ ಜೆ ಶಾಂತಾ 1,47,514ಮತಗಳು
10:03 AM, 6 Nov

6ನೇ ಸುತ್ತಿನ ಮತ ಎಣಿಕೆ ಕಾರ್ಯ ನಂತರ ಒಂದೂವರೆ ಲಕ್ಷಕ್ಕೂ ಅಂತರದ ಮತಗಳಿಂದ ಉಗ್ರಪ್ಪ ಅವರಿಗೆ ಮುನ್ನಡೆ.
10:01 AM, 6 Nov

6ನೇ ಸುತ್ತಿನ ಮತ ಎಣಿಕೆ ನಂತರ ಮತ ಗಳಿಕೆ ಬಿಜೆಪಿಯ ಜೆ ಶಾಂತಾ 1,28 121 ಮತಗಳು ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 2,28,844 ಮತಗಳು
10:00 AM, 6 Nov

ಹೊಸ ದಾಖಲೆ ಮುರಿಯುವತ್ತ ಉಗ್ರಪ್ಪ, 85144 ಮತಗಳ ಅಂತರದಿಂದ ಗೆದ್ದಿದ್ದ ಶ್ರೀರಾಮುಲು, ಈ ಅಂತರ ದಾಟುವ ನಿರೀಕ್ಷೆಯಿದೆ.
9:59 AM, 6 Nov

ಬಳ್ಳಾರಿಯಲ್ಲಿ 5ನೇ ಸುತ್ತಿನ ನಂತರ ಮತ ಗಳಿಕೆ * ವಿಎಸ್ ಉಗ್ರಪ್ಪ – 190862 * ಜೆ. ಶಾಂತ- 106605
Advertisement
9:36 AM, 6 Nov

4ನೇ ಸುತ್ತಿನ ಮತ ಎಣಿಕೆ ನಂತರ ಗಳಿಸಿದ ಮತಗಳು * ವಿಎಸ್ ಉಗ್ರಪ್ಪ ಅವರಿಗೆ 1,50,948 ಮತಗಳು * ಜೆ ಶಾಂತಾಗೆ ಸಿಕ್ಕಿರುವ 86,948 ಮತಗಳು
9:34 AM, 6 Nov

4ನೇ ಸುತ್ತಿನ ಮತ ಎಣಿಕೆ ನಂತರ 64,000 ಮತಗಳ ಅಂತರವನ್ನು ಕಾಯ್ದುಕೊಂಡಿರುವ ಉಗ್ರಪ್ಪ
9:27 AM, 6 Nov

4ನೇ ಸುತ್ತಿನಲ್ಲೂ ಭಾರಿ ಮುನ್ನಡೆ ವಿಎಸ್ ಉಗ್ರಪ್ಪ ಅವರಿಗೆ ಲಭಿಸಿರುವ ಮತಗಳು 1,11,367 ಬಿಜೆಪಿಯ ಅಭ್ಯರ್ಥಿ ಜೆ ಶಾಂತಾಗೆ ಸಿಕ್ಕಿರುವ ಮತಗಳು 65,559
9:26 AM, 6 Nov

4ನೇ ಸುತ್ತಿನ ನಂತರ ಶಾಂತಾ ಅವರ ವಿರುದ್ಧ ಉಗ್ರಪ್ಪ ಅವರಿಗೆ 45,808 ಮತಗಳ ಅಂತರದ ಮುನ್ನಡೆ
9:22 AM, 6 Nov

ಮೊದಲ 4 ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ, ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪ ಅವರಿಗೆ ಮುನ್ನಡೆ
9:11 AM, 6 Nov

2ನೇ ಸುತ್ತಿನ ಮತ ಎಣಿಕೆ ನಂತರ ವಿಎಸ್ ಉಗ್ರಪ್ಪ ಅವರಿಗೆ ಲಭಿಸಿರುವ ಮತಗಳು 74668 ಬಿಜೆಪಿಯ ಅಭ್ಯರ್ಥಿ ಜೆ ಶಾಂತಾಗೆ ಸಿಕ್ಕಿರುವ ಮತಗಳು 43530
9:09 AM, 6 Nov

2ನೇ ಸುತ್ತಿನ ಮತ ಎಣಿಕೆ ನಂತರ: ಶಾಂತಾ ವಿರುದ್ಧ ವಿಎಸ್ ಉಗ್ರಪ್ಪ 31138 ಮತಗಳ ಅಂತರದ ಮುನ್ನಡೆ
8:56 AM, 6 Nov

ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರಿಗೆ 17,480 ಮತಗಳ ಅಂತರದ ಮುನ್ನಡೆ
8:54 AM, 6 Nov

ಆರ್​ವೈಎಂಇಸಿ ಕಾಲೇಜಿನಲ್ಲಿ ನಡೆದಿರ ಮತ ಎಣಿಕೆ ಕಾರ್ಯ. ಪ್ರತಿ ಕೊಠಡಿಯಲ್ಲಿ 15 ಟೇಬಲ್ ಸೇರಿ ಒಟ್ಟು 120 ಟೇಬಲ್ ವ್ಯವಸ್ಥೆ. ಸಿಸಿಟಿವಿ ಕ್ಯಾಮರಾದಡಿ ಒಟ್ಟು 14ಸುತ್ತಿನ ಮತ ಎಣಿಕೆ.
8:47 AM, 6 Nov

ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯ, ಮೊದಲ ಸುತ್ತಿನ ನಂತರ ಕಾಂಗ್ರೆಸ್ಸಿನ ವಿಎಸ್ ಉಗ್ರಪ್ಪ ಅವರಿಗೆ ಮುನ್ನಡೆ.
8:40 AM, 6 Nov

ಉಪ ಚುನಾವಣೆ ಮತ ಎಣಿಕೆ ಕೇಂದ್ರದ ಚಿತ್ರಣ
8:36 AM, 6 Nov

ಬಳ್ಳಾರಿಯ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ
8:27 AM, 6 Nov

ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಆರಂಭ
8:22 AM, 6 Nov

ಕಾಂಗ್ರೆಸ್‌ನ ಒಳಜಗಳಗಳು ಸಹ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮುಳುವಾಗುವ ಸಾಧ್ಯತೆ ಇದೆ. ಆದರೆ, ಪ್ರಮುಖ ನಾಯಕರುಗಳು ಬಳ್ಳಾರಿಗೆ ಪ್ರಚಾರದಿಂದ ದೂರ ಉಳಿದಿದ್ದು, ಸಹ ಬಿಜೆಪಿಗೆ ಹೊಡೆತ ಬೀಳುವ ಸಾಧ್ಯತೆ ಇದೆ.
8:20 AM, 6 Nov

ಬಳ್ಳಾರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹಾಗಾಗಿ ಬಿಜೆಪಿಗೆ ಇದು ಸುಲಭದ ಉಪಚುನಾವಣೆಯಂತೂ ಅಲ್ಲ.
8:18 AM, 6 Nov

ಸ್ವಾತಂತ್ರ್ಯ ಬಂದಾಗಿನಿಂದ 2000 ದ ವರೆಗೆ ಬಳ್ಳಾರಿ ಕ್ಷೇತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿತ್ತು. ಆದರೆ ಕಳೆದ ಮೂರು ಚುನಾವಣೆಯಲ್ಲಿ ಬಿಜೆಪಿ ಕೈ ಸೇರಿದೆ.
8:13 AM, 6 Nov

ಅಂಚೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರಿಗೆ ಆರಂಭಿಕ ಮುನ್ನಡೆ
7:56 AM, 6 Nov

ಬಳ್ಳಾರಿಯಲ್ಲಿ ಬಿಜೆಪಿ ಪ್ರಾಬಲ್ಯ ಎಂದೆನಿಸಿದರೂ ಕಾಂಗ್ರೆಸ್​ ಅಭ್ಯರ್ಥಿ ಉಗ್ರಪ್ಪ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಕಾಂಗ್ರೆಸ್​- 50.5% ಬಿಜೆಪಿ -46.5 % ಇದೆ
READ MORE

English summary
Karnataka By-elections results Live in Kannada: By-elections counting for Bellaary(Ballari) Lok Sabha constituency is on going today November 6, 2018. Here are LIVE updates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X