ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಬಿಐನಿಂದ ಕಂಪ್ಲಿ ಶಾಸಕ ಸುರೇಶ್ ಬಾಬು ಬಂಧನ

By Mahesh
|
Google Oneindia Kannada News

Kampli MLA TH Suresh Babu arrested by CBI
ಬಳ್ಳಾರಿ, ಸೆ.19: ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಅವರನ್ನು ಸಿಬಿಐ ತಂಡ ಗುರುವಾರ(ಸೆ.19) ಸಂಜೆ ಬಂಧಿಸಿದ್ದಾರೆ. ಬೆಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಬಾಬು ಅವರು ಪ್ರಮುಖ ಆರೋಪಿಯಾಗಿದ್ದರು.

ಸಿಬಿಐ ಡಿಐಜಿ ಹಿತೇಂದ್ರ, ಎಸ್ ಪಿ ಸುಬ್ರಮಣ್ಯೇಶ್ವರ ರಾವ್ ಅವರ ನೇತೃತ್ವದ ತಂಡ ಸುರೇಶ್ ಬಾಬು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಬೆಂಗಳೂರಿಗೆ ಕರೆದುಕೊಂಡು ಬರುವ ಸಾಧ್ಯತೆ ಇದೆ.

ಬಿಎಸ್ಸಾರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು ಸೇರಿದಂತೆ ನಾಲ್ವರು ಶಾಸಕರ ಬಂಧನಕ್ಕೂ ಮುನ್ನ ಸಿಬಿಐ ತಂಡ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆವಿಷಯ ತಿಳಿಸಿ ಅನುಮತಿ ಕೋರಿದ್ದರು. ಹೊಸಪೇಟೆ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ (ಬಿಜೆಪಿ), ಕಂಪ್ಲಿ ಶಾಸಕ ಸುರೇಶ್ ಬಾಬು (BSR), ಕಾರವಾರದ ಶಾಸಕ ಸತೀಶ್ ಸೈಲ್ (ಪಕ್ಷೇತರ) ಮತ್ತು ಕೂಡ್ಲಗಿ ಶಾಸಕ ನಾಗೇಂದ್ರ (ಪಕ್ಷೇತರ) ಬಂಧನ ಭೀತಿಯಲ್ಲಿದ್ದರು. ಈ ಪೈಕಿ ಸುರೇಶ್ ಬಂಧನವಾಗಿದೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪಾಲುದಾರಿಕೆ ಸಂಸ್ಥೆಯಾದ ದೇವಿ ಎಂಟರ್ ಪ್ರೈಸಸ್ ಕಂಪನಿಗೆ ಅಕ್ರಮವಾಗಿ ಕಬ್ಬಿಣದ ಅದಿರು ಸಾಗಣೆ ಮಾಡಿರುವ ಅರೋಪದ ವಿಚಾರಣೆಗಾಗಿ ಸುರೇಶ್ ಬಾಬು ಅವರನ್ನು ಬಂಧಿಸಲಾಗಿದೆ. 5000 ಕೋಟಿ ರು ಗೂ ಅಧಿಕ ಅಕ್ರಮ ಮೌಲ್ಯದ ಹಗರಣ ಇದಾಗಿದೆ.

ಸುರೇಶ್ ಬಾಬು ಬಗ್ಗೆ : ಅಕ್ರಮ ಗಣಿಗಾರಿಕೆ ಬಗ್ಗೆ ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ ವರದಿಯಲ್ಲೂ ಸುರೇಶ್ ಬಾಬು, ಮೆಹಫುಜ್ ಅಲಿಖಾನ್, ಖಾರಪುಡಿ ಮಹೇಶ್ ಹಾಗೂ ಸ್ವಸ್ತಿಕ್ ನಾಗರಾಜ್ ಹೆಸರು ಉಲ್ಲೇಖಗೊಂಡಿದೆ.

* 2009ರಲ್ಲಿ ಸುಮಾರು 20 ಕೋಟಿ ರು ವೆಚ್ಚದಲ್ಲಿ ಸುರೇಶ್ ಬಾಬು ಮದುವೆಯಾಗಿತ್ತು. ಮದುವೆಗೆ ಅಷ್ಟು ಖರ್ಚು ಮಾಡಿದ ಶ್ರೀಮಂತ ಶಾಸಕ ಸುರೇಶ್ ತಿಜೋರಿಯಲ್ಲಿ ಇನ್ನು ಏನೆಲ್ಲ ಇರಬಹುದು ಎಂಬ ಅನುಮಾನ ಆಗಲೇ ತನಿಖಾಧಿಕಾರಿಗಳಿಗೆ ಬಂದಿತ್ತು.
* ಜನಾರ್ದನ ರೆಡ್ಡಿ ಅವರ ರಿಪಬ್ಲಿಕ್ ಆಫ್ ಬಳ್ಳಾರಿಯ ಮುಖ್ಯ ಸೇನಾನಿಗಳಲ್ಲಿ ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ಕೂಡಾ ಒಬ್ಬರು. ಅಸೆಂಬ್ಲಿಯಲ್ಲಿ ರೆಡ್ಡಿ ಪರ ಎದ್ದು ನಿಂತು ತೋಳು ಮಡಿಚಿ ಸಿದ್ದರಾಮಯ್ಯ ವಿರುದ್ಧ ಯುದ್ಧಕ್ಕೆ ನಿಂತ ಧೀರ.
* ವಸೂಲಿ ದಂಧೆಯಿಂದ ಹಿಡಿದು, ಬಂದ ಹಣವನ್ನು ಯಾವ ರೀತಿ, ಎಲ್ಲಿಗೆ, ಹೇಗೆ ಸಾಗಿಸಬೇಕು ಎಂಬ ಲೆಕ್ಕಾಚಾರವನ್ನು ಥಟ್ಟನೆ ಹೇಳಿಬಿಡುತ್ತಿದ್ದ ಅಲಿಖಾನ್ ಗೆ ಸುರೇಶ್ ಬಾಬು ಸದಾ ಸಾಥ್ ನೀಡುತ್ತಿದ್ದರು.
* ಮಾಜಿ ಸಚಿವ ಶ್ರೀರಾಮುಲು ಸಂಬಂಧಿ ಕಂಪ್ಲಿ ಶಾಸಕ ಸುರೇಶ್‌ಬಾಬು ಅವರ ಬಾಲ್ಯ ಸ್ನೇಹಿತನಾಗಿರುವ ಅಲಿ ರೆಡ್ಡಿ ಸಾಮಾಜ್ಯ ಸಿಬಿಐ ಊಹೆಗೂ ನಿಲುಕದಂತೆ, ಗೂಗಲ್ ಮ್ಯಾಪ್ ಕಣ್ಣಿಗೂ ಕಾಣದಂತೆ ಗಣಿ ರೆಡ್ಡಿಗಳ ಅಕ್ರಮ ಸಂಪಾದನೆ, ಬೇನಾಮಿ ಆಸ್ತಿಗಳನ್ನು ಕಾಪಾಡುವಲ್ಲಿ ಅಲಿ ಹಾಗೂ ಸುರೇಶ್ ಬಾಬು ಮಹತ್ವದ ಪಾತ್ರ ವಹಿಸಿದ್ದಾರೆ.
* ಬೆಲೇಕೇರಿ ಬಂದರಿನಿಂದ ಮುಖ್ಯವಾಗಿ ಚೀನಾ, ಸಿಂಗಪುರ ಸೇರಿದಂತೆ ವಿದೇಶಕ್ಕೆ ಕಬ್ಬಿಣದ ಅದಿರನ್ನು ಸಾಗಿಸುವಲ್ಲಿ ಇವರಿಬ್ಬರ ಪಾತ್ರ ಹಿರಿದಾಗಿದೆ.
* ಸುರೇಶ್ ಬಾಬು ಮೇಲೆ ಅಕ್ರಮ ಆಸ್ತಿ, ಬೇಲ್ ಗಾಗಿ ಡೀಲ್ ಪ್ರಕರಣ ಕೂಡಾ ಇದೆ. ಜನಾರ್ದನ ರೆಡ್ಡಿಗೆ ಜಾಮೀನು ಕೊಡಿಸಲು ಲಂಚ ಕೊಟ್ಟು ಡೀಲ್ ಕುದುರಿಸಿದ ಆರೋಪದಲ್ಲಿ ಒಮ್ಮೆ ಬಂಧನ ಕೂಡಾ ಆಗಿದ್ದರು.

ಎಸ್ ಆರ್ ಹಿರೇಮಠ್ ಪ್ರತಿಕ್ರಿಯೆ: ಸಮಾಜ ಪರಿವರ್ತನಾ ಸಮುದಾಯದ ಎಸ್ ಆರ್ ಹಿರೇಮಠ್ ಅವರು ಸುರೇಶ್ ಬಾಬು ಬಂಧನದ ಬಗ್ಗೆ ಪ್ರತಿಕ್ರಿಯಿಸಿ, ನ್ಯಾಯಾಂಗದ ಜತೆಗೆ ಕಾರ್ಯಾಂಗ ಕೂಡಾ ಬಲಗೊಳ್ಳಬೇಕು. ಸಿದ್ದರಾಮಯ್ಯ ಅವರು ಒಳ್ಳೆ ರಾಜಕಾರಣಿ ಅವರು ಸಮಾಜ ಸುಧಾರಣೆಗೆ ಒತ್ತು ನೀಡುತ್ತಿದ್ದಾರೆ

ರೆಡ್ಡಿ ಅಂಡ್ ಗ್ಯಾಂಗ್ ಮೇಲೆ 29ಕ್ಕೂ ಅಧಿಕ ಪ್ರಕರಣಗಳಿವೆ. ಬೆಲೇಕೇರಿ ಪ್ರಕರಣದಲ್ಲಿ ಐದು ಎಫ್ ಐಆರ್ ಹಾಕಲಾಗಿದೆ. ಇನ್ನೂ 22ಕ್ಕೂ ಅಧಿಕ ಎಫ್ ಐಆರ್ ದಾಖಲಾಗುವ ಸಾಧ್ಯತೆಯಿದೆ. ಲೋಕಾಯುಕ್ತ ಕೋರ್ಟ್ ನಲ್ಲಿ ವಿಚಾರಣೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

English summary
Belekere port Iron ore case : Kampli MLA HT Suresh Babu arrested by CBI in Bellary today. He will taken to Bangalore and produced before the court
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X