ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಜೆಎಸ್‍ಡಬ್ಲ್ಯೂ ಸ್ಟೀಲ್‍ಗೆ ಪ್ರತಿಷ್ಠಿತ ಡೆಮಿಂಗ್ ಬಹುಮಾನ

|
Google Oneindia Kannada News

ಬೆಂಗಳೂರು, ನವೆಂಬರ್ 22: ಭಾರತದಲ್ಲಿ ಮುಂಚೂಣಿಯಲ್ಲಿರುವ ಸ್ಟೀಲ್ ಕಂಪನಿಯಾಗಿರುವ ಜೆಎಸ್‍ಡಬ್ಲ್ಯೂ ಗ್ರೂಪ್‍ನ 13 ಬಿಲಿಯನ್ ಡಾಲರ್ ನ ಅಂಗಸಂಸ್ಥೆಯಾಗಿರುವ ಜೆಎಸ್‍ಡಬ್ಲ್ಯೂ ಸ್ಟೀಲ್ ತನ್ನ ವಿಜಯನಗರ ಘಟಕದಲ್ಲಿ ಗುಣಮಟ್ಟ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ಟೋಟಲ್ ಕ್ವಾಲಿಟಿ ಮ್ಯಾನೇಜ್‍ಮೆಂಟ್ (ಟಿಕ್ಯೂಎಂ) ಅನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ.

ಈ ಟಿಕ್ಯೂಎಂ ಅನ್ನು ಜಾರಿಗೆ ತಂದಾಗಿನಿಂದ ಜೆಎಸ್‍ಡಬ್ಲ್ಯೂ ಕಳೆದ ಐದು ವರ್ಷಗಳಿಂದ ತನ್ನ ಕಾರ್ಯಾಚಣೆಯಲ್ಲಿ ಸಮರ್ಥತೆ ಮತ್ತು ತನ್ನ ಗ್ರಾಹಕರ ಸೇವಾ ವೃತ್ತಿರತೆಯ ಸೇವೆಯನ್ನು ಮತ್ತಷ್ಟು ಸದೃಢಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ ಈ ಕಾರ್ಯವನ್ನು ಪರಿಗಣಿಸಿ ಜಾಗತಿಕ ಮಟ್ಟದ ಪ್ರತಿಷ್ಠಿತ ಡೆಮಿಂಗ್ ಪ್ರಶಸ್ತಿಯನ್ನು ನೀಡಲಾಗಿದೆ.

ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!ಕಲ್ಲು ಮುಳ್ಳು ಧೂಳಿನಲ್ಲಿ ಅರಳಿನಿಂತ ಜಿಂದಾಲ್ ಸ್ಟೀಲ್!

ಜೆಎಸ್‍ಡಬ್ಲ್ಯೂ ಸ್ಟೀಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೊವಲ್ ಅವರು ಮಾತನಾಡಿ, "ನಾವು ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಗಳನ್ನು ನೀಡುವ ತಂಡಗಳನ್ನು ಹೊಂದಿದ್ದೇವೆ. ನಮ್ಮ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಈ ತಂಡಗಳು ಕಾರ್ಯನಿರ್ವಹಿಸುತ್ತಿವೆ.

'ಜೆಎಸ್‍ಡಬ್ಲ್ಯೂ'ನಿಂದ 3ನೇ ಸ್ಟೀಲ್ ಘಟಕ, 7,500 ಕೋಟಿ ರೂ. ಹೂಡಿಕೆ'ಜೆಎಸ್‍ಡಬ್ಲ್ಯೂ'ನಿಂದ 3ನೇ ಸ್ಟೀಲ್ ಘಟಕ, 7,500 ಕೋಟಿ ರೂ. ಹೂಡಿಕೆ

ಭಾರತದಲ್ಲಿ ಸ್ಟೀಲ್‍ಗೆ ಸಾಕಷ್ಟು ಬೇಡಿಕೆ ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಪೂರೈಸಲು ನಾವು ಸಿದ್ಧರಾಗಬೇಕಿದೆ. ಈ ಮೂಲಕ ಗ್ರಾಹಕರ ಬೇಡಿಕೆಯನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ'' ಎಂದು ತಿಳಿಸಿದರು.

ದಿ ಡೆಮಿಂಗ್ ಪ್ರೈಜ್ ಸಿಕ್ಕಿದೆ

ದಿ ಡೆಮಿಂಗ್ ಪ್ರೈಜ್ ಸಿಕ್ಕಿದೆ

ಈ ಟಿಕ್ಯೂಎಂ ಬಗ್ಗೆ ಮಾತನಾಡಿದ ಜೆಎಸ್‍ಡಬ್ಲ್ಯೂ ಸ್ಟೀಲ್‍ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಜೆಎಸ್‍ಡಬ್ಲ್ಯೂ ಗ್ರೂಪ್‍ನ ಸಿಎಫ್‍ಒ ಶೇಷಗಿರಿ ರಾವ್ ಅವರು, "ವಿಜಯನಗರ ಘಟಕದಲ್ಲಿರುವ ನಮ್ಮ ಉದ್ಯೋಗಿಗಳಲ್ಲಿ ಸಮಸ್ಯೆಗಳನ್ನು ನಿವಾರಿಸುವ ಸಮರ್ಥತೆ ತಂದು ಅವರನ್ನು ಸದೃಢರನ್ನಾಗಿ ಮಾಡುವ ಉದ್ದೇಶದಿಂದ ಟಿಕ್ಯೂಎಂ ಅನ್ನು ಅನುಷ್ಠಾನಗೊಳಿಸಿದ್ದೇವೆ.

ನಮ್ಮ ಗ್ರಾಹಕರಿಗೆ ಪ್ರತಿದಿನವನ್ನು ಉಜ್ವಲಗೊಳಿಸುವನ್ನಾಗಿಸುವ ಮೈಲುಗಲ್ಲನ್ನು ಸ್ಥಾಪಿಸಿರುವುದನ್ನು ಗಮನಿಸಿ ನಮ್ಮ ಸಂಸ್ಥೆಗೆ ದಿ ಡೆಮಿಂಗ್ ಪ್ರೈಜ್ ಸಿಕ್ಕಿದೆ. ಈ ಬಹುಮಾನ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇನ್ನು ಮುಂದೆಯೂ ಹೊಸ ಹೊಸ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಮುನ್ನಡಿ ಇಡುತ್ತೇವೆ'' ಎಂದು ಹೇಳಿದರು.

ಟೋಟಲ್ ಕ್ವಾಲಿಟಿ ಮ್ಯಾನೇಜ್‍ಮೆಂಟ್ (ಟಿಕ್ಯೂಎಂ)

ಟೋಟಲ್ ಕ್ವಾಲಿಟಿ ಮ್ಯಾನೇಜ್‍ಮೆಂಟ್ (ಟಿಕ್ಯೂಎಂ)

ಜೆಎಸ್‍ಡಬ್ಲ್ಯೂ ಸ್ಟೀಲ್‍ನ ಉಪ ವ್ಯವಸ್ಥಾಪಕ ನಿರ್ದೇಶಕ ಡಾ.ವಿನೋದ್ ನೊವಲ್ ಅವರು ಮಾತನಾಡಿ, ಈ ಟಿಕ್ಯೂಎಂ ಮಾರ್ಗಸೂಚಿಯನ್ವಯ ನಮ್ಮ ಎಲ್ಲಾ ಸಿಬ್ಬಂದಿ ರಚನಾತ್ಮಕವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅತ್ಯುತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ನಮ್ಮ ಎಲ್ಲಾ ಉತ್ಪಾದನಾ ಘಟಕಗಳಲ್ಲಿ ಪ್ರತಿಯೊಂದ ಹೆಜ್ಜೆಗೂ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಈ ಮೂಲಕ ನಮ್ಮೆಲ್ಲಾ ಗ್ರಾಹಕರಿಗೆ ಗುಣಮಟ್ಟದ ಸೇವೆಗಳು ಮತ್ತು ಉತ್ಪನ್ನಗಳನ್ನು ತಲುಪಿಸುತ್ತಿದ್ದೇವೆ'' ಎಂದು ತಿಳಿಸಿದರು.

ಜಾಗತಿಕ ಮಟ್ಟದ ಬಹುಮಾನ ಗೆದ್ದಿದೆ

ಜಾಗತಿಕ ಮಟ್ಟದ ಬಹುಮಾನ ಗೆದ್ದಿದೆ

ಅತ್ಯುತ್ತಮ ಗುಣಮಟ್ಟ ಸೇರಿದಂತೆ ಉತ್ತಮ ಗ್ರಾಹಕ ಸೇವೆಯನ್ನು ಪರಿಗಣಿಸಿ 2018 ರ ಅಕ್ಟೋಬರ್ ನಲ್ಲಿ ಜೆಎಸ್‍ಡಬ್ಲ್ಯೂನ ವಿಜಯನಗರ ಘಟಕಕ್ಕೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿಯಾದ ಡೆಮಿಂಗ್ ಪ್ರೈಜ್ ಲಭಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನೆಲ್ಲಾ ಘಟಕಗಳಲ್ಲಿ ಟಿಕ್ಯೂಎಂ ಅನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದೆ.

ಭಾರತದ ಅತಿದೊಡ್ಡ ಉಕ್ಕು ಉತ್ಪಾದನಾ ಘಟಕ

ಭಾರತದ ಅತಿದೊಡ್ಡ ಉಕ್ಕು ಉತ್ಪಾದನಾ ಘಟಕ

ತಮಿಳುನಾಡಿನ ಸೇಲಂನಲ್ಲಿರುವ ಘಟಕದಲ್ಲಿ ಟಿಕ್ಯೂಎಂ ಅನ್ನು ಅನುಷ್ಠಾನಕ್ಕೆ ತರುವ ಕಾರ್ಯ ನಡೆಯುತ್ತಿದ್ದು, ಮಹಾರಾಷ್ಟ್ರದ ಡೊಲ್ವಿ ಘಟಕದಲ್ಲಿ 2020 ರ ವೇಳೆಗೆ ಅನುಷ್ಠಾನಕ್ಕೆ ತರುವ ಕಾರ್ಯ ಮುಗಿಯಲಿದೆ.

ಜೆಎಸ್‍ಡಬ್ಲ್ಯೂ ಸ್ಟೀಲ್ ವಿಜಯನಗರದಲ್ಲಿರುವ ತನ್ನ ಘಟಕದಲ್ಲಿನ ಉಕ್ಕು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಇದರಂತೆ 2020 ರ ಮಾರ್ಚ್ ವೇಳೆಗೆ ವಾರ್ಷಿಕ 13 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಮಾಡುವ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಇಲ್ಲಿ ಮೂರನೇ ಘಟಕ ಆರಂಭವಾಗಲಿದೆ. ಪ್ರಸ್ತುತ ವಿಜಯನಗರ ಘಟಕದಲ್ಲಿ ವಾರ್ಷಿಕ 12 ದಶಲಕ್ಷ ಟನ್‍ನಷ್ಟು ಸ್ಟೀಲ್ ಉತ್ಪಾದನೆ ಮಾಡಲಾಗುತ್ತಿದೆ. ಇದು ಭಾರತದ ಏಕೈಕ ದೊಡ್ಡ ಸ್ಟೀಲ್ ಉತ್ಪಾದನಾ ಘಟಕವಾಗಿದೆ.

English summary
The JSW Vijayanagar Works is the largest single location integrated steel plant in the world to be awarded the prestigious Deming Prize for excellence in Total Quality Management (TQM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X