ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎಸ್‍ಡಬ್ಲ್ಯೂ ಗ್ರೂಪಿನ ಅರ್ಥ್ ಕೇರ್ ಪ್ರಶಸ್ತಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಮೇ 17: ಹವಾಮಾನ ಸ್ನೇಹಿ ಪದ್ಧತಿಗಳಿಗೆ ಆದ್ಯತೆ ನೀಡುತ್ತಿರುವ ಮತ್ತು ಈ ಪದ್ಧತಿಯನ್ನು ಅನುಸರಿಸುತ್ತಿರುವವರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೆಎಸ್‍ಡಬ್ಲ್ಯೂ ಗ್ರೂಪ್ ತನ್ನ 9ನೇ ಸರಣಿಯ ಜೆಎಸ್‍ಡಬ್ಲ್ಯೂ ಅರ್ಥ್ ಕೇರ್ ಅವಾರ್ಡ್‍ಗಳನ್ನು ನೀಡುತ್ತಿದೆ. ಇಂತಹ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಕರ್ನಾಟಕದಲ್ಲಿರುವ ಸಂಘಗಳು ಮತ್ತು ಸಂಸ್ಥೆಗಳು 2019 ರ ಜೂನ್ 15 ರೊಳಗೆ ತಮ್ಮ ಯೋಜನೆಗಳನ್ನು ಈ ಅರ್ಥ್ ಕೇರ್ ಅವಾರ್ಡ್‍ಗಳಿಗೆ ಕಳುಹಿಸಬಹುದಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಈ ಅರ್ಥ್ ಕೇರ್ ಅವಾರ್ಡ್‍ಗಳ ಮೂಲಕ ಜೆಎಸ್‍ಡಬ್ಲ್ಯೂ ಗ್ರೂಪ್, ಸಮುದಾಯಗಳು, ಉದ್ದಿಮೆಗಳು, ದೊಡ್ಡ ಕೈಗಾರಿಕೆಗಳು, ಮಹಿಳಾ ನೇತೃತ್ವದ ಉದ್ದಿಮೆಗಳು ಮತ್ತು ನಗರ ಸಂಸ್ಥೆಗಳು ಹವಾಮಾನ ಬದಲಾವಣೆಗೆ ಪೂರಕವಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ನಾವೀನ್ಯತೆಯ ಪರಿಹಾರಗಳನ್ನು ಗುರುತಿಸಲಿದೆ. ಹಸಿರು ಮನೆ ಅನಿಲಗಳಿಂದ (ಗ್ರೀನ್‍ಹೌಸ್ ಗ್ಯಾಸಸ್-ಜಿಎಚ್‍ಜಿ) ಉಂಟಾಗುವ ಮಾಲಿನ್ಯ ಮಟ್ಟವನ್ನು ಕಡಿಮೆ ಮಾಡುವುದು, ಪ್ರಾಕೃತಿಕ ಸಂಪನ್ಮೂಲ ಸಂರಕ್ಷಣೆ, ಇಂಧನ ದಕ್ಷತೆ ಸುಧಾರಣೆ, ಪರಿಸರ ಸ್ನೇಹಿ ಪರ್ಯಾಯಗಳ ಅಭಿವೃದ್ಧಿ ಮತ್ತು ಉತ್ತೇಜನಗಳನ್ನು ಪರಿಶೀಲಿಸಲಿದೆ ಮತ್ತು ಉತ್ತೇಜಿಸಲಿದೆ.

ಜೆಎಸ್‍ಡಬ್ಲ್ಯೂ ಫೌಂಡೇಶನ್‍ನ ಅಧ್ಯಕ್ಷರಾದ ಸಂಗೀತ ಜಿಂದಾಲ್ ಅವರು ಮಾತನಾಡಿ,"ಹವಾಮಾನ ಬದಲಾವಣೆ ನಮ್ಮ ಜೀವನದ ಮೇಲೆ ಗಂಭೀರ ಸ್ವರೂಪದ ಪರಿಣಾಮಗಳನ್ನು ಬೀರುತ್ತಿದೆ. ಭಾರತದಲ್ಲಿ ಕೃಷಿ ಮೇಲೆ ಇದರಿಂದ ಆಗುತ್ತಿರುವ ಪರಿಣಾಮ ಈಗಾಗಲೇ ಕಣ್ಣಿಗೆ ಕಾಣುತ್ತಿದೆ.

ಹವಾಮಾನ ಬದಲಾವಣೆಯಿಂದ ಇತರೆ ಸವಾಲು

ಹವಾಮಾನ ಬದಲಾವಣೆಯಿಂದ ಇತರೆ ಸವಾಲು

ಭಾರತದಲ್ಲಿ ಹವಾಮಾನ ಬದಲಾವಣೆಯಿಂದ ಇತರೆ ಸವಾಲುಗಳಾದ ಅತಿಯಾದ ಬಡತನ, ನೈಸರ್ಗಿಕ ಸಂಪನ್ಮೂಲಗಳು ಕಡಿಮೆಯಾಗುತ್ತಿರುವು ಮತ್ತು ಅತಿಯಾದ ಹವಾಮಾನ ಏರಿಳಿತಗಳು ಸಂಭವಿಸುತ್ತಿವೆ. ಹವಾಮಾನ ಸ್ನೇಹಿ ಪ್ರಕ್ರಿಯೆಗಳು, ಕಾರ್ಯಾಚರಣೆಗಳು ಮತ್ತು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಪರಿಸರ ಸ್ನೇಹಿ ನಾವೀನ್ಯತೆಗಳ ಉತ್ತೇಜನ ನೀಡುವ ನಿಟ್ಟಿನಲ್ಲಿ ಬದ್ಧತೆ ಮತ್ತು ಆವಿಷ್ಕಾರಗಳಿಗೆ ಈ ಅರ್ಥ್ ಕೇರ್ ಅವಾರ್ಡ್ ಒತ್ತು ನೀಡುತ್ತಿದೆ.

ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ 15 ಭಾರತದ್ದು! ವಿಶ್ವದ 20 ಮಾಲಿನ್ಯಯುಕ್ತ ನಗರಗಳಲ್ಲಿ 15 ಭಾರತದ್ದು!

ಟಸ್ಟ್ ನ ಮುಖ್ಯಸ್ಥರಾದ ಸಂಗೀತಾ ಜಿಂದಾಲ್

ಟಸ್ಟ್ ನ ಮುಖ್ಯಸ್ಥರಾದ ಸಂಗೀತಾ ಜಿಂದಾಲ್

"ಪರಿಸರ ಸ್ನೇಹಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಂಪನ್ಮೂಲ ದಕ್ಷತೆ ಮತ್ತು ತಾಂತ್ರಿಕ ಸಾಮಥ್ರ್ಯಗಳನ್ನು ಗರಿಷ್ಟ ಮಟ್ಟದಲ್ಲಿ ಬಳಸಿಕೊಳ್ಳುವುದಾಗಿದೆ. ಇದಲ್ಲದೇ, ಸಾಂಸ್ಥಿಕ ಕಾರ್ಯವಿಧಾನಗಳು, ಸ್ಥಳೀಯ ಮಟ್ಟದಲ್ಲಿ ಮಧ್ಯಪ್ರವೇಶ ಮಾಡುವುದು, ಸಮುದಾಯ ಸ್ಥಿತಿ ಸ್ಥಾಪಕತ್ವ, ಜ್ಞಾನ ವಿತರಣೆ, ಸಿನರ್ಜಿ ಮತ್ತು ಪಾಲುದಾರಿಕೆಗಳನ್ನು ಉತ್ತೇಜಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ'' ಎಂದು ತಿಳಿಸಿದರು.

ಪರಿಸರಕ್ಕೆ ಕಂಟಕವಾಗುವ ಪ್ಲಾಸ್ಟಿಕ್ ಬ್ಯಾಗ್ ಪತ್ತೆಗೆ ಕ್ಯೂಆರ್ ಕೋಡ್ ಪರಿಸರಕ್ಕೆ ಕಂಟಕವಾಗುವ ಪ್ಲಾಸ್ಟಿಕ್ ಬ್ಯಾಗ್ ಪತ್ತೆಗೆ ಕ್ಯೂಆರ್ ಕೋಡ್

ಗೌರವಾನ್ವಿತ ತೀರ್ಪುಗಾರರು

ಗೌರವಾನ್ವಿತ ತೀರ್ಪುಗಾರರು

ಜೂನ್ ಮಧ್ಯದವರೆಗೆ ಸ್ವೀಕರಿಸುವ ಅರ್ಜಿಗಳನ್ನು ಗೌರವಾನ್ವಿತ ತೀರ್ಪುಗಾರರಾದ ಗ್ಲೋಬಲ್ ರೀಸರ್ಚ್ ಅಲಾಯನ್ಸ್‍ನ ಎಫ್.ಆರ್.ಎಸ್ ಅಧ್ಯಕ್ಷ ಡಾ.ಆರ್.ಎ.ಮಶೇಲ್ಕರ್; ಸೆಂಟರ್ ಆಫ್ ಎನ್‍ವಾಯರ್ನ್ ಮೆಂಟ್ ಎಜುಕೇಶನ್‍ನ ಸಂಸ್ಥಾಪಕ ನಿರ್ದೇಶಕ ಕಾರ್ತಿಕೇಯ ವಿ.ಸರಭಾಯಿ, ಟಿಇಆರ್‍ಆರ್‍ಇನ ಅಧ್ಯಕ್ಷ ರಾಜೇಂದ್ರ ಶಿಂಧೆ, ಸಿಡಿಎಸ್‍ಎನ ಕಾರ್ಯಕಾರಿ ನಿರ್ದೇಶಕಿ ಅನೀತಾ ಬೆನ್ನಿಂಗರ್, ಮೆಕಿನ್ಸೆ ಅಂಡ್ ಕಂಪನಿಯ ನಿರ್ದೇಶಕ ರಜತ್ ಗುಪ್ತ, ಸಿಎಸ್‍ಇನ ಡೆಪ್ಯುಟಿ ಡೈರೆಕ್ಟರ್ ಜನರಲ್ ಚಂದ್ರಭೂಷಣ್, ಐಸಿಆರ್‍ಐಎಸ್‍ಎಟಿ ಡೆವಲಪ್‍ಮೆಂಟ್ ಸೆಂಟರ್ ನ ನಿರ್ದೇಶಕ ಡಾ.ಸುಹಾಸ್ ವಾನಿ, ಟಿಇಆರ್‍ಐಯ ಪ್ರಧಾನ ನಿರ್ದೇಶಕ ಡಾ.ಅಜಯ್ ಮಾಥೂರ್, ಡಬ್ಲ್ಯೂಡಬ್ಲ್ಯೂಎಫ್-ಇಂಡಿಯಾದ ಪ್ರಧಾನ ಕಾರ್ಯದರ್ಶಿ & ಸಿಇಒ ರವಿಸಿಂಗ್, ಸಿಐಐನ ಡೆಪ್ಯೂಟಿ ಡೈರೆಕ್ಟರ್ ಜನರಲ್ ಸೀಮಾ ಅರೋರ ಮತ್ತು ನ್ಯಾಷನಲ್ ಎನ್‍ವಾಯರ್‍ನ್ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‍ಸ್ಟಿಟ್ಯೂಟ್ ನಿರ್ದೇಶಕ ಡಾ.ರಾಕೇಶ್ ಕೆಆರ್ ಸಿಂಗ್ ಅವರು ಪರಿಶೀಲನೆ ನಡೆಸಲಿದ್ದಾರೆ.

ಈ ಕೆಳಗಿನ ಐದು ವರ್ಗಗಳಿಗೆ ನೀಡಲಾಗುತ್ತದೆ

ಈ ಕೆಳಗಿನ ಐದು ವರ್ಗಗಳಿಗೆ ನೀಡಲಾಗುತ್ತದೆ

ಜೆಎಸ್‍ಡಬ್ಲ್ಯೂ ಗ್ರೂಪ್ ಅರ್ಥ್ ಕೇರ್ ಅವಾರ್ಡ್ಸ್ 2019 ಈ ಕೆಳಗಿನ ಐದು ವರ್ಗಗಳಿಗೆ ನೀಡಲಾಗುತ್ತದೆ:
1. ಜಲ ಸಂಪನ್ಮೂಲ, ಅರಣ್ಯ, ಕೃಷಿ, ಇತರೆ ಭೂಮಿ ಬಳಕೆ, ಪಶುಸಂಗೋಪನೆ ಮತ್ತು ಕ್ಲೈಮೇಟ್ ರಿಸ್ಕ್ ಪ್ರೂಫಿಂಗ್ ಸಮುದಾಯ ಆಧಾರಿತ ಉಪಶಮನ ಮತ್ತು ಅಳವಡಿಸಿಕೊಳ್ಳುವುದು.
2. ಕ್ಲೈಮೇಟ್ ಆ್ಯಕ್ಷನ್‍ನಲ್ಲಿ ನಾವೀನ್ಯತೆ.
3. ನಗರ ಹವಾಮಾನ ಕ್ರಮಗಳಲ್ಲಿ ನಾಯಕತ್ವ.
4. ಭಾರೀ ಉದ್ದಿಮೆಗಳಲ್ಲಿ ಜಿಎಚ್‍ಜಿಯನ್ನು ಕಡಿಮೆ ಮಾಡುವುದು.
5. ಹವಾಮಾನ ಪ್ರಕ್ರಿಯೆಗಳಲ್ಲಿ ಮಹಿಳಾ ನೇತೃತ್ವದಲ್ಲಿ ನಾಯಕತ್ವ.

English summary
JSW Foundation has invited applications for this year's Earth Care Awards. The Earth Care Awards (ECAs). An initiative that rewards people, community groups and corporations for their efforts to mitigate climate change.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X