• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಳ್ಳಾರಿ: ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದ ಜಿಂದಾಲ್

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜೂನ್ 18: ಬಳ್ಳಾರಿ ಜಿಲ್ಲೆಗೆ ಮಾರಕ ಆಗಿರುವ ಜಿಂದಾಲ್ ಕಾರ್ಖಾನೆ ನೌಕರರು ಬೇರೆ ಕಡೆಗೆ ಸಂಚಾರ ಮಾಡದಂತೆ ತಡೆಯುವ ನಿಟ್ಟಿನಲ್ಲಿ, ಜಿಂದಾಲ್ ಟೌನ್ ಶಿಪ್ ನ್ನು ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಬಳ್ಳಾರಿ ಜಿಲ್ಲಾಡಳಿತ ಆದೇಶ ಮಾಡಿತ್ತು.

ಈ ಮೂಲಕ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಆದೇಶದ ಅನ್ವಯ ಜಿಂದಾಲ್ ಟೌನ್ ಶಿಪ್ ನಲ್ಲಿ ಇರುವ ಉದ್ಯೋಗಿಗಳಿಂದ ಮಾತ್ರ ಕಂಪನಿ ನಡೆಸುವಂತೆ ಆದೇಶದಲ್ಲಿತ್ತು. ಆದರೆ ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ‌ ಕಿಮ್ಮತ್ತು ನೀಡಿಲ್ಲ. ಆದೇಶ ಮೀರಿ ಜಿಂದಾಲ್ ನ ಇಸಿಪಿಎಲ್ ಸಿಬ್ಬಂದಿ ಗೇಟ್ ಮೂಲಕ ಕೆಲಸಕ್ಕೆ ಒಳ ಹೋಗುವುದು ಮತ್ತು ಹೊರ ಬರುವುದು ಮಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಬುಧವಾರ 69 ಕೊರೊನಾ ವೈರಸ್ ಸೋಂಕು ಪತ್ತೆಬಳ್ಳಾರಿಯಲ್ಲಿ ಬುಧವಾರ 69 ಕೊರೊನಾ ವೈರಸ್ ಸೋಂಕು ಪತ್ತೆ

ಜಿಂದಾಲ್ ಕಾರ್ಖಾನೆಯಲ್ಲಿ 178 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ, ಬಳ್ಳಾರಿ ಜಿಲ್ಲಾಡಳಿತದಿಂದ ಜಿಂದಾಲ್ ನ್ನು ಲಾಕ್ ಡೌನ್ ಮಾದರಿ ಅನುಸರಿಸಲು ಆದೇಶ ಮಾಡಿತ್ತು. ಜಿಂದಾಲ್ ಸುತ್ತಲಿನ ವಾಸವಾಗಿರುವ ಕಾರ್ಮಿಕರು ಟೌನ್ ಶಿಪ್ ಹೊರತುಪಡಿಸಿ ಬೇರೆ ಗ್ರಾಮದ ಕಾರ್ಮಿಕರು ಯಾರೂ ಹೊರ ಹೋಗಬಾರದು, ಒಳ ಬರಬಾರದೆಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿತ್ತು.

ಬೆಳಗಾವಿ ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ: ಕರ್ನಾಟಕ-ಗೋವಾ ರಸ್ತೆ ಸಂಪರ್ಕ ಕಡಿತಬೆಳಗಾವಿ ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ: ಕರ್ನಾಟಕ-ಗೋವಾ ರಸ್ತೆ ಸಂಪರ್ಕ ಕಡಿತ

ಆದರೆ ಜಿಲ್ಲಾಡಳಿತದ ಆದೇಶ ಮೀರಿ ಜಿಂದಾಲ್ ಕಾರ್ಮಿಕರು ಕಾರ್ಖಾನೆಗೆ ಬರುತ್ತಿದ್ದಾರೆ. ಹೂವು ತರಲು ಹೊರಗಡೆಯಿಂದ ಒಳಗಡೆ, ಒಳಗಡೆಯಿಂದ ಹೊರಗಡೆ ಹೋಗರಬಾರದೆಂಬ ನಿಯಮ ಕೇವಲ ಆದೇಶ ಸೀಮಿತವಾಯಿತಾ? ಎನ್ನುವ ಅನುಮಾನ ಕಾಡುತ್ತಿದೆ. ರಾಜಾರೋಷವಾಗಿ ಸಂಡೂರು ತಾಲೂಕಿನ ಸುಲ್ತಾನಪುರದ ಬಳಿ ಇರೋ ECPL ಗೇಟಿನಿಂದ ಕಾರ್ಮಿಕರು ಒಳ ಪ್ರವೇಶ ಮಾಡುತ್ತಿದ್ದಾರೆ.

ಸುಮಾರು 35 ಸಾವಿರ ಉದ್ಯೋಗಿಗಳು ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ಜಿಂದಾಲ್ ಹೇಳಿಕೊಂಡಿತ್ತು, ಅಲ್ಲದೇ ಟೌನ್ ಶಿಪ್ ನಲ್ಲಿ ಇರುವ 3500 ಕಾರ್ಮಿಕರಿಂದ ಮಾತ್ರ ಕಂಪನಿ ನಡೆಸುವುದಾಗಿ ಹೇಳಿಕೊಂಡಿತ್ತು. ಆದರೆ ಇಂದು ಕಂಪನಿಯು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿತದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಈ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು.

English summary
The backdrop of 178 coronavirus cases being detected at the Jindal factory, Jindal has been ordered by the Ballary DC to follow the lockdown model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X