ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ ಭೇಟಿ ನೀಡಲು ರೆಡ್ಡಿಗೆ ಸುಪ್ರೀಂ ಒಪ್ಪಿಗೆ ಇಲ್ಲ

|
Google Oneindia Kannada News

Recommended Video

ಬಳ್ಳಾರಿ ಭೇಟಿ ನೀಡಲು ರೆಡ್ಡಿಗೆ ಸುಪ್ರೀಂ ಒಪ್ಪಿಗೆ ಇಲ್ಲ | Oneindia Kannada

ಬಳ್ಳಾರಿ, ಸೆಪ್ಟೆಂಬರ್ 04 : ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ನಿರಾಸೆ ಉಂಟು ಮಾಡಿದೆ. ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡುವಂತೆ ಕೋರಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಜಂತಕಲ್ ಅಕ್ರಮ ಗಣಿಗಾರಿಕೆ: 'ಎಸ್ಐಟಿ'ಗೆ ದಾಖಲೆ ಸಲ್ಲಿಸಿದ ಜನಾರ್ದನ ರೆಡ್ಡಿಜಂತಕಲ್ ಅಕ್ರಮ ಗಣಿಗಾರಿಕೆ: 'ಎಸ್ಐಟಿ'ಗೆ ದಾಖಲೆ ಸಲ್ಲಿಸಿದ ಜನಾರ್ದನ ರೆಡ್ಡಿ

ಜಾಮೀನಿನ ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸೋಮವಾರ ನಡೆಯಿತು. ವಿಚಾರಣೆ ಸಮಯದಲ್ಲಿ ಬಳ್ಳಾರಿಗೆ ಭೇಟಿ ನೀಡಲು ಅವಕಾಶ ನೀಡುವಂತೆ ಕೋರಿದ್ದ ಮಾಡಿದ ಮನವಿಯನ್ನು ಕೋರ್ಟ್ ಒಪ್ಪಲಿಲ್ಲ.

Janardhana Reddy plea to modify bail conditions : SC quashes petition

ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಬಳ್ಳಾರಿಗೆ ಅವರು ಭೇಟಿ ನೀಡಿದರೆ ಸಾಕ್ಷಿ ನಾಶಮಾಡಬಹುದು ಎಂಬ ಕಾರಣಕ್ಕೆ ಅವರು ಬಳ್ಳಾರಿಗೆ ಹೋಗದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ. ಆದರೆ, ಈ ಷರತ್ತನ್ನು ಮಾರ್ಪಾಡು ಮಾಡಬೇಕು ಎಂದು ರೆಡ್ಡಿ ಕೋರ್ಟ್ ಮೊರೆ ಹೋಗಿದ್ದರು.

ಗಾಲಿ ರೆಡ್ಡಿ ಸಂಕ್ರಾಂತಿ ಆಚರಣೆಗೆ ಸುಪ್ರೀಂ ಅನುಮತಿಗಾಲಿ ರೆಡ್ಡಿ ಸಂಕ್ರಾಂತಿ ಆಚರಣೆಗೆ ಸುಪ್ರೀಂ ಅನುಮತಿ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ 5 ವರ್ಷಗಳ ಬಳಿಕ ಬಳ್ಳಾರಿಗೆ ಭೇಟಿ ನೀಡಿದ್ದರು. ಪುತ್ರಿ ಬ್ರಹ್ಮಿಣಿ ವಿವಾಹದ ಸಮಯದಲ್ಲಿ 21 ದಿನಗಳ ಕಾಲ ಬಳ್ಳಾರಿಯಲ್ಲಿರುವ ಕೋರ್ಟ್ ಒಪ್ಪಿಗೆ ನೀಡಿತ್ತು.

ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳುಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು

2017ರ ಜನವರಿಯಲ್ಲಿ ಜ.12 ರಿಂದ 16ರ ತನಕ ಬಳ್ಳಾರಿಗೆ ಭೇಟಿ ನೀಡಿ ಸಂಕ್ರಾಂತಿ ಆಚರಣೆ ಮಾಡಲು ಕೋರ್ಟ್ ಒಪ್ಪಿಗೆ ನೀಡಿತ್ತು. ಈಗ ಬಳ್ಳಾರಿಗೆ ಭೇಟಿ ನೀಡುವ ಕುರಿತು ಹಾಕಿರುವ ಷರತ್ತು ಸಡಿಲಗೊಳಿಸುವಂತೆ ರೆಡ್ಡಿ ಕೋರ್ಟ್ ಮೆಟ್ಟಿಲೇರಿದ್ದರು.

English summary
The Supreme Court of India on Monday scrapped a petition filed by Karnataka former minister Gali Janardhana Reddy. In his petition requested to modify bail conditions to visit his hometown Ballari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X