• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ

|
   ಜನಾರ್ಧನ ರೆಡ್ಡಿ ಸ್ವಾರಸ್ಯಕರ ವಿಷಯ ಬಿಚ್ಚಿಟ್ಟ ಸಿದ್ದರಾಮಯ್ಯ | Oneindia Kannada

   ಬೆಂಗಳೂರು, ಅಕ್ಟೋಬರ್ 23: ಬಳ್ಳಾರಿಯಲ್ಲಿ ಲೋಕಸಭೆ ಉಪಚುನಾವಣೆ ಪ್ರಚಾರದಲ್ಲಿರುವ ಸಿದ್ದರಾಮಯ್ಯ ಪ್ರಚಾರ ಸಮಯದಲ್ಲಿ ಸ್ವಾರಸ್ಯಕರವಾದ ಹಳೆಯ ಘಟನೆ ಒಂದನ್ನು ನೆನಪಿಸಿಕೊಂಡಿದ್ದಾರೆ.

   ಸಿದ್ದರಾಮಯ್ಯ ಅವರು ವಿರೋಧಪಕ್ಷದಲ್ಲಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಬಂದ ಘಟನೆಯನ್ನು ರಾಜಕೀಯದ ಬಗ್ಗೆ ಆಸಕ್ತಿ ಉಳ್ಳ ಯಾರೂ ಸಹ ಮರೆಯುವಂತಿಲ್ಲ ಅದೇ ಸಂದರ್ಭದ ಘಟನೆ ಒಂದನ್ನು ಇಂದು ಪ್ರಚಾರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ.

   ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್‌ ವಾರ್!

   ವಿರೋಧ ಪಕ್ಷದ ನಾಯಕರಾಗಿದ್ದಾಗ ಒಮ್ಮೆ ಸಂಡೂರಿಗೆ ಬಂದಾಗ ನನ್ನ ಮೇಲೆ ಗೂಂಡಾಗಳನ್ನು ಜನಾರ್ಧನ ರೆಡ್ಡಿ ಗುಂಪು ತಮ್ಮ ರೌಡಿಗಳನ್ನು ನಮ್ಮ ಮೇಲೆ ಛೂ ಬಿಟ್ಟಿದ್ದರು, ಹೆದರಿಕೆಗೆ ಪೊಲೀಸರು ಸಹ ನಮ್ಮೊಂದಿಗೆ ಬಂದಿರಲಿಲ್ಲ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.

   ಸಂಡೂರಿನ ಜನ ಜೀವ ಭಯದಲ್ಲಿದ್ದರು

   ಸಂಡೂರಿನ ಜನ ಜೀವ ಭಯದಲ್ಲಿದ್ದರು

   ಅಂದು ನಾನು ಬಳ್ಳಾರಿಗೆ ಬಂದಾಗ ಸಮಾವೇಶ ಮಾಡಲು ಸಹ ಜಾಗ ಕೊಡಲು ಸಿದ್ದವಿರಲಿಲ್ಲ, ಸಂಡೂರಿನ ಜನ ಜೀವಭಯದಲ್ಲಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರೆಡ್ಡಿ ಮತ್ತು ಶ್ರೀರಾಮುಲು ಜನರನ್ನು ಹೆದರಿಸಿ ರಾಜಕೀಯ ಮಾಡಿದ್ದಾರೆ ಎಂದು ಅವರು ಹೇಳಿದರು.

   ರಾಮುಲುಗೆ 371ಜೆ ಎಂದರೇನು ಗೊತ್ತಿಲ್ಲ

   ರಾಮುಲುಗೆ 371ಜೆ ಎಂದರೇನು ಗೊತ್ತಿಲ್ಲ

   ಶ್ರೀರಾಮುಲು 371ಜೆ ಎಂದರೆ ಏನು ಎಂಬುದು ಗೊತ್ತಿಲ್ಲ. ಆದರೆ ಅವರಿಗೆ ಅಪರಾಧ ಕಾಯ್ದೆಗಳ ಮಾತ್ರ ಚೆನ್ನಾಗಿ ಅರಿವಿದೆ ಎಂದು ಸಿದ್ದರಾಮಯ್ಯ ಅವರು ರಾಮುಲು ಕಾಲೆಳೆದರು. ಟ್ವಿಟ್ಟರ್‌ ಖಾತೆಯಲ್ಲಿ ಸಹ ಅವರು ಇದನ್ನು ಪ್ರಕಟಿಸಿದ್ದಾರೆ.

   ಬಳ್ಳಾರಿ ನೆಲದಲ್ಲಿ ಶ್ರೀರಾಮುಲುಗೆ 5 ಪ್ರಶ್ನೆ ಕೇಳಿದ ಸಿದ್ದರಾಮಯ್ಯ!

   ನನ್ನನ್ನು ಬೈದರೆ ಕುರುಬ ಸಮುದಾಯವನ್ನು ಬೈದಂತಾ?

   ನನ್ನನ್ನು ಬೈದರೆ ಕುರುಬ ಸಮುದಾಯವನ್ನು ಬೈದಂತಾ?

   ಶ್ರೀರಾಮುಲುಗೆ ಬೈದರೆ ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ ಹಾಗಾದರೆ ನನ್ನ ಟೀಕಿಸಿದರೆ ಕುರುಬ ಸಮುದಾಯವನ್ನು ಟೀಕಿಸಿದಂತೆ ಆಗುತ್ತದೆಯೇ ಎಂದ ಸಿದ್ದರಾಮಯ್ಯ, ವ್ಯಕ್ತಿಯೊಬ್ಬನನ್ನು ಸಮುದಾಯಕ್ಕೆ ಹೋಲಿಸುವುದು ತರವಲ್ಲ ಎಂದರು. ಅಷ್ಟೆ ಅಲ್ಲದೆ ನಾಯಕ ಸಮುದಾಯಕ್ಕೆ ರಾಮುಲು ಕೊಡುಗೆ ಏನು ಎಂದು ಅವರು ಪ್ರಶ್ನೆ ಮಾಡಿದರು.

   ಬಳ್ಳಾರಿ ಉಪ ಚುನಾವಣೆ : ಕಣದಲ್ಲಿ ನಾಲ್ವರು, ತಿಪ್ಪೇಸ್ವಾಮಿ ನಾಮಪತ್ರ ವಾಪಸ್!

   ಡಿ.ಕೆ.ಶಿವಕುಮಾರ್ vs ಶ್ರೀರಾಮುಲು

   ಡಿ.ಕೆ.ಶಿವಕುಮಾರ್ vs ಶ್ರೀರಾಮುಲು

   ಬಳ್ಳಾರಿ ಲೋಕಸಭೆ ಉಪಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದೆ. ಕಾಂಗ್ರೆಸ್‌ನಿಂದ ವಿಎಸ್ ಉಗ್ರಪ್ಪ ಚುನಾವಣೆಗೆ ನಿಂತಿದ್ದರೆ. ಬಿಜೆಪಿಯಿಂದ ಶ್ರೀರಾಮುಲು ಅವರ ಸಹೋದರಿ ಶಾಂತಾ ಅವರು ಚುನಾವಣೆಗೆ ನಿಂತಿದ್ದಾರೆ. ಬಳ್ಳಾರಿ ಉಪಚುನಾವಣೆ ಡಿ.ಕೆ.ಶಿವಕುಮಾರ್ ಮತ್ತು ಶ್ರೀರಾಮುಲು ನಡುವಿನ ಸ್ಪರ್ಧೆ ಎಂಬಂತೆ ಭಾರಿ ಕುತೂಹಲ ಕೆರಳಿಸಿದೆ.

   ಡಿ.ಕೆ.ಶಿವಕುಮಾರ್ ಯಾವುದೇ ಸಮಯದಲ್ಲಿ ಜೈಲು ಪಾಲಾಗಬಹುದು: ರಾಮುಲು

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Siddaramaiah recalled a incident while he was opposition leader. He said when i visited Bellary Janardhan Reddy and team let goons upon me. Bellary people were so afraid of them that no one ready to give place to do rally.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more