ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

220ಕ್ಕೂ ಹೆಚ್ಚು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ಡಾ. ಶಾರದಾ

|
Google Oneindia Kannada News

ಬಳ್ಳಾರಿ, ಮಾರ್ಚ್ 06: ಕೊರೊನಾ ಕಾಲದಲ್ಲಿ ತಿಂಗಳುಗಟ್ಟಲೆ ಜನ ಮನೆಯಲ್ಲೇ ಬಂಧಿಯಾಗಿದ್ದರು. ಈಗಲೂ ಲಕ್ಷಾಂತರ ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ತನ್ನ ಕುಟುಂಬ ಹಾಗೂ ಆ ಮೂಲಕ ದೇಶವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ನೆರವಾಗಿದ್ದು ಮಹಿಳೆ.

ಹಾಗೆಯೇ ಈ ಕೊರೊನಾ ಕಾಲದಲ್ಲಿ ಅತಿ ಹೆಚ್ಚು ಕಷ್ಟ ಅನುಭವಿಸಿದವಳು ಕೂಡ ಮಹಿಳೆಯೇ, ತನ್ನ ಉದ್ಯೋಗದ ಜತೆ ಮನೆ ನಡೆಸಿಕೊಂಡು ಹೋಗುವುದರ ಜತೆಗೆ, ಕುಟುಂಬದ ಆರೋಗ್ಯವನ್ನು ಕಾಪಾಡಿಕೊಂಡು ಯಶಸ್ವಿಯಾದವಳು ಮಹಿಳೆ.

ಕೊರೊನಾ ವೈರಸ್: ದಕ್ಷಿಣ ಕನ್ನಡ ಮೂಲದ 7 ತಿಂಗಳ ಗರ್ಭಿಣಿ ದುಬೈನಲ್ಲಿ ಸಾವುಕೊರೊನಾ ವೈರಸ್: ದಕ್ಷಿಣ ಕನ್ನಡ ಮೂಲದ 7 ತಿಂಗಳ ಗರ್ಭಿಣಿ ದುಬೈನಲ್ಲಿ ಸಾವು

ಇಂತಹ ಮಹಿಳೆ ಕೊರೊನಾ ಅವಧಿಯಲ್ಲಿ ದೊಡ್ಡ ಸಂಕಷ್ಟವನ್ನೂ ಎದುರಿಸಿದ್ದಾಳೆ. ಕೊರೊನಾ ಪೀಡಿತ ಗರ್ಭಿಣಿಯರಿಗೆ ಇದೊಂದು ಸವಾಲಿನ ಕ್ಷಣವೂ ಆಗಿತ್ತು. ಇಂತಹ ಸಂದರ್ಭದಲ್ಲಿ ನೂರಾರು ಕೋವಿಡ್ 19 ಸೋಂಕಿತ ಗರ್ಭಿಣಿಯರ ಜೀವ ಉಳಿಸಿ ಇನ್ನೊಂದು ಜೀವ ಸುರಕ್ಷಿತವಾಗಿ ಹೊರಬರುವಂತೆ ಆರೋಗ್ಯ ಯಜ್ಞ ಮಾಡಿದ ದಿಟ್ಟ ಮಹಿಳೆಯೊಬ್ಬರು ಇದ್ದಾರೆ..

ಒಂದೇ ಸಲ ಕೊರೊನಾ ಪ್ರಕರಣವೂ ಏರ ತೊಡಗಿತ್ತು

ಒಂದೇ ಸಲ ಕೊರೊನಾ ಪ್ರಕರಣವೂ ಏರ ತೊಡಗಿತ್ತು

ಕೊರೊನಾ ಸೋಂಕು ರಾಜ್ಯಕ್ಕೆ ಕಾಲಿಟ್ಟು ಕೆಲವೇ ದಿನಗಳಲ್ಲಿ ಬಳ್ಳಾರಿಯಲ್ಲೂ ಸೋಂಕಿನ ಪ್ರಮಾಣ ವಿಪರೀತವಾಗುತ್ತಿತ್ತು. ಅದರಲ್ಲೂ ಸಾಮಾನ್ಯ ಜನರ ಜತೆಗೆ ಗರ್ಭಿಣಿಯರು ಕೂಡ ಕೊರೊನಾ ಸೋಂಕಿಗೆ ತುತ್ತಾಗತೊಡಗಿದರು. ಆಗ ಹಿರಿಯ ಸ್ತ್ರೀರೋಗ ತಜ್ಞೆ ಡಾ. ಶಾರದಾ ತಮ್ಮ ಜೀವವನ್ನೂ ಪಣಕ್ಕಿಟ್ಟು ಆರೋಗ್ಯಕರ ಶಿಶುಗಳ ಹುಟ್ಟಿಗಾಗಿ ಶ್ರಮಿಸಿದರು.

200 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಶಾರದಾ

200 ಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಶಾರದಾ

ಶಾರದಾ ಅವರು ಬಳ್ಳಾರಿಯ ವಿವಿಧ ಪ್ರಮುಖ ಆಸ್ಪತ್ರೆಗಳಿಗೆ ತೆರಳಿ ಗರ್ಭಿಣಿಯರಿಗೆ ಚಿಕಿತ್ಸೆ ನೀಡಿ, ಸುಸೂತ್ರವಾಗಿ ಹೆರಿಗೆಯಾಗುವಂತೆ ನೋಡಿಕೊಂಡರು. ಸುಮಾರು 200 ಕ್ಕೂ ಹೆಚ್ಚು ಹೆರಿಗೆಯನ್ನು ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತಿದೆ.

ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸುರಕ್ಷಿತವೇ?ಮಹಿಳೆಯರು ಮತ್ತು ಗರ್ಭಿಣಿಯರಿಗೆ ಕೊರೊನಾ ಲಸಿಕೆ ಸುರಕ್ಷಿತವೇ?

ಆಸ್ಪತ್ರೆಗಳೇ ಕುಟುಂಬವಾಗಿತ್ತು

ಆಸ್ಪತ್ರೆಗಳೇ ಕುಟುಂಬವಾಗಿತ್ತು

ಅವರಿಗೆ ಆಸ್ಪತ್ರೆಗಳೇ ಕುಟುಂಬವಾಗಿತ್ತು. ಸುಮಾರು ನಾಲ್ಕೈದು ತಿಂಗಳುಗಳ ಕಾಲ ಕುಟುಂಬದಿಂದ ದೂರವಿದ್ದು, ರೋಗಿಗಳ ಸೇವೆ ಮಾಡಿಸಿದರು. ಗರ್ಭಿಣಿಗೆ ಸೋಂಕು ತಗುಲಿದೆ ಎಂದಾದರೆ ಏನಾದರೂ ಹೆಚ್ಚು ಕಡಿಮೆಯಾದೀತು ನಮಗ್ಯಾಕೆ ತೊಂದರೆ ಎಂದು ಹೇಳದೆ ತಕ್ಷಣವೇ ಅವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದವರು ಶಾರದಾ.

ಹೆರಿಗೆ ಮಾಡಿಸುವ ವೈದ್ಯರಿಗೂ ಸೋಂಕು ತಗುಲಬಹುದು

ಹೆರಿಗೆ ಮಾಡಿಸುವ ವೈದ್ಯರಿಗೂ ಸೋಂಕು ತಗುಲಬಹುದು

ಗರ್ಭಿಣಿಯರಿಗೆ ಆತ್ಮವಿಶ್ವಾಸ ಹುಟ್ಟಿಸುವುದರ ಜತೆಗೆ ದಾದಿಯರಿಗೂ ಸೋಂಕು ಹರಡುವುದಿಲ್ಲ ಎಂದು ಧೈರ್ಯ ಹೇಳುವುದು ಕೂಡ ವೈದ್ಯರ ಪ್ರಮುಖ ಕೆಲಸವಾಗಿತ್ತು. ಅವರು ತಾಯಿಗೆ ರಕ್ಷಣೆ ನೀಡುವುದಲ್ಲದೆ ಮಗುವಿನ ರಕ್ಷಣೆಯನ್ನೂ ಮಾಡಬೇಕಿತ್ತು. ಹೀಗಾಗಿ ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿದ್ದರು.

English summary
International Womens Day 2021 Inspiring Story of Ballari Doctor Sharada who delivers more than 220 Covid-19 pregnant women successfully. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X