ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಇದ್ದಿದ್ದರೆ ಶ್ರೀರಾಮುಲು ಡಿಸಿಎಂ ಆಗಿರುತ್ತಿದ್ದರು

|
Google Oneindia Kannada News

ಬಳ್ಳಾರಿ, ಡಿಸೆಂಬರ್ 16: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಇದ್ದಿದ್ದರೆ ಶ್ರೀರಾಮುಲು ಇಷ್ಟೋತ್ತಿಗಾಗಲೇ ಉಪ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.

ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗಬೇಕುನ ಎನ್ನುವುದು ಕರ್ನಾಟಕದ ಎಲ್ಲ ಭಾಗದ ಜನರ ಬೇಡಿಕೆಯಾಗಿದೆ. ಅವರು ವಾಲ್ಮೀಕಿ ಸಮುದಾಯದ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ, ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ ಎಂದರು.

 ನಾನು ಜನರ ಇಚ್ಚೆಗೆ ಮುಜುಗರ ಮಾಡಲ್ಲ: ಶ್ರೀರಾಮುಲು ನಾನು ಜನರ ಇಚ್ಚೆಗೆ ಮುಜುಗರ ಮಾಡಲ್ಲ: ಶ್ರೀರಾಮುಲು

ಬಳ್ಳಾರಿ ನಗರದಲ್ಲಿ ಮಾಧ್ಯಮದರೊಡನೆ ಮಾತನಾಡಿದ ಸೋಮಶೇಖರ್ ರೆಡ್ಡಿ, ನಮ್ಮ ಸಹೋದರ ಜನಾರ್ದನ ರೆಡ್ಡಿ ಇದ್ದಿದ್ದರೆ ಶ್ರೀರಾಮುಲು ಅವರಿಗೆ ರಾಜಕೀಯದಲ್ಲಿ ಮತ್ತಷ್ಟು ಬಲ ಬರುತ್ತಿತ್ತು. ರೆಡ್ಡಿ ಇದ್ದಿದ್ರೆ ಇನ್ನೂ ಬೇಗ ಡಿಸಿಎಂ ಆಗಿರುತ್ತಿದ್ದರು ಎಂದು ತಿಳಿಸಿದರು.

If Janardhan Reddy Were Present, Sriramulu Would Have Been DCM

ಆದರೆ ಕಾಲ ಚಕ್ರ ಹೀಗೆ ಇರಲ್ಲ, ಬದಲಾಗುತ್ತಿರುತ್ತದೆ. ಕೆಳಗೆ ಇದ್ದೋರು ಮೇಲೆ ಬರಲೇಬೇಕು ಎಂದು ವಿರೋಧಿಗಳಿಗೆ ತಿರುಗೇಟು ಕೊಟ್ಟರು. ಬಳ್ಳಾರಿ ಅಭಿವೃದ್ದಿ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, ಕೆಲವೊಮ್ಮೆ ಕೆಲವು ಜಿಲ್ಲೆಗಳು ಹೆಚ್ಚು ಪ್ರಭಾವ ಬೀರುತ್ತವೆ ಎಂದರು.

೨೦೦೮ ರಲ್ಲಿ ನಾವು ಪ್ರಬಲರಾಗಿದ್ದೇವು, ಈಗಲೂ ನಾವು ಪ್ರಬಲರು, ನಮ್ಮನ್ನು ದೇವರು ವೀಕ್ ಮಾಡಬೇಕೇ ಹೊರತು ಬೇರೆಯವರಲ್ಲ ಎಂದು ಹೇಳಿದರು.

ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಉಪ ಚುನಾವಣೆಯ ನಂತರ ಜಿಲ್ಲೆ ವಿಭಜನೆ ಬಗ್ಗೆ ಮಾತನಾಡುವುದಾಗಿ ಹೇಳಿದ್ದರು, ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕು ಎನ್ನುವು ನನ್ನ ನಿಲುವು ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್

ನಾನು ಆನಂದ್ ಸಿಂಗ್ ಅವರಿಗೂ ಜಿಲ್ಲೆಯನ್ನು ಒಡೆಯುವುದು ಬೇಡ ಎಂದು ಮನವಿ ಮಾಡಿದ್ದೇನೆ. ಶಾಸಕರಾದ ಕರುಣಾಕರ್ ರೆಡ್ಡಿ, ಗೋಪಾಲಕೃಷ್ಣ, ಸೋಮಲಿಂಗಪ್ಪ ಕೂಡಾ ಜಿಲ್ಲೆ ಅಖಂಡವಾಗಿರಲಿ ಎಂದಿದ್ದಾರೆ.

ಅಂದು ಸಭೆಗೆ ಸೇರಿದವರಲ್ಲಿ ಶೇ, 90 ಜನ ಜಿಲ್ಲೆ ವಿಭಜನೆ ಮಾಡುವುದು ಬೇಡ ಅಂದಿದ್ದಾರೆ. ಆನಂದ್ ಸಿಂಗ್ ಮತ್ತು ಒಬ್ಬ ಎಂಎಲ್ಸಿ ಮಾತ್ರ ಹೊಸ ಜಿಲ್ಲೆ ಬೇಕು ಅಂತ ಹೇಳಿದ್ದಾರೆ. ನೋಡೋಣ ಮುಂದೆ ಏನಾಗುತ್ತದೆ ಎಂದು ತಿಳಿಸಿದರು.

English summary
Bellary City MLA Somashekhar Reddy said former minister Janardhan Reddy when he was present Here , Minister Sriramulu was Now already Would Have Been deputy chief minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X