ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: "ಕೊರೊನಾ ವೈರಸ್ ನಿಯಂತ್ರಣ ಆಗದಿದ್ದರೆ, ಜಿಂದಾಲ್ ಲಾಕ್ ಡೌನ್'

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜೂನ್ 24: ರಾಜ್ಯದ ಪ್ರತಿಷ್ಠಿತ ಉಕ್ಕು ಕಾರ್ಖಾನೆ ಬಳ್ಳಾರಿಯ ಜಿಂದಾಲ್ ನಲ್ಲಿ ಕೊರೊನಾ ವೈರಸ್ ಸೋಂಕು ತನ್ನ ಅಟ್ಟಹಾಸ ಮುಂದುವರೆಸಿದೆ.

ಈ ಬಗ್ಗೆ ಬುಧವಾರ ಜಿಂದಾಲ್ ಮುಖ್ಯಸ್ಥ ವಿನೋದ್ ನಾವೆಲ್, ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯ ಮುಖ್ಯ ಕಾರ್ಯದರ್ಶಿ ಜೊತೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದಾರೆ.

ಬಳ್ಳಾರಿ: ಜಿಂದಾಲ್ ನೌಕರರ ಕುಟುಂಬಕ್ಕೆ ಕಂಟಕವಾದ ಕೊರೊನಾ ವೈರಸ್ಬಳ್ಳಾರಿ: ಜಿಂದಾಲ್ ನೌಕರರ ಕುಟುಂಬಕ್ಕೆ ಕಂಟಕವಾದ ಕೊರೊನಾ ವೈರಸ್

ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು, ""ಜಿಂದಾಲ್ ಹೇಗೆ ಕೆಲಸ‌ ಮಾಡುತ್ತೆ ಎಂಬುದು ಎಲ್ಲರಿಗೂ ಗೊತ್ತು, ನಾನು ವಯಕ್ತಿಕವಾಗಿ ಜಿಂದಾಲ್ ಬಗ್ಗೆ ಮೃದು ಧೋರಣೆ ತೋರಲ್ಲ, ನಾನು ಈ ಹಿಂದೆ ರಾಜೀನಾಮೆ ಯಾಕೆ ನೀಡಿರುವೆ ಎಂಬುದು ಎಲ್ಲರಿಗೂ ಗೊತ್ತು'' ಎಂದು ಮತ್ತೆ ಜಿಂದಾಲ್ ವಿರುದ್ಧ ಗುಡುಗಿದ್ದಾರೆ.

If Coronavirus Cases Not Coming To Control Will Lockdown Jindal Factory: Anand Singh

ಒಂದು ವೇಳೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಜಿಂದಾಲ್ ಸಂಸ್ಥೆ ಪಾಲನೆ ಮಾಡದೇ ಇದ್ದರೆ, ಜಿಂದಾಲ್ ವಿರುದ್ಧ ಯಾವುದೇ ಕ್ರಮ‌ ಕೈಗೊಳ್ಳಲು ನಾನು ಸಿದ್ದ. ನಾನು ಯಾವುದೇ ಸರ್ಕಾರದ ಪರವಾಗಿಲ್ಲ, ನಾನು ಜನರ ಪರವಾಗಿ ಕೆಲಸ ಮಾಡುತ್ತೇನೆ‌. ಜಿಂದಾಲ್ ನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರದಿದ್ದರೆ ಜಿಂದಾಲ್ ನ್ನು ಸಂಪೂರ್ಣ ಲಾಕ್ ಡೌನ್ ಮಾಡುತ್ತೇನೆ ಎಂದು ಅರಣ್ಯ ಸಚಿವ ಆನಂದ್ ಸಿಂಗೆ ಹೇಳಿದ್ದಾರೆ.

English summary
Coronavirus infection continues to rise in the state's prestigious steel factory, Jindal at Ballary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X