• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಜಿಎಫ್ ಚಿತ್ರದ "ಗರ್ಭದಿ ನನ್ನಿರಿಸಿ....." ಹಾಡು ಸ್ಮರಿಸಿದ ಗಾಲಿ ರೆಡ್ಡಿ

By ಗಾಲಿ ಜನಾರ್ದನ ರೆಡ್ಡಿ
|
Google Oneindia Kannada News

"ತಾಯಿ" ದೇವರು ಸೃಷ್ಟಿಗಳಲ್ಲಿ ಅದ್ಭುತ ಎಂದರೆ ತಪ್ಪಾಗಲಾರದು. ತಾಯಿ ಸಮಾಜದಲ್ಲಿ ಒಬ್ಬ ಗಣ್ಯ ವ್ಯಕ್ತಿಯನ್ನು ನಿರ್ಮಿಸುವಲ್ಲಿ ಆಕೆಯ ಅನೇಕ ತ್ಯಾಗಗಳು ಹಾಗೂ ನಿಸ್ವಾರ್ಥ ಸೇವೆ ಇರುತ್ತದೆ.

ಅಮ್ಮ ನೀನು ನಕ್ಕರೆ ...ನಮ್ಮ ಬಾಳು ಸಕ್ಕರೆ...
ಅಮ್ಮ.... ಎಂದರೆ ಏನೋ ಹರುಷವು....ನಮ್ಮ ಪಾಲಿಗೆ ಅವಳೇ ದೈವವು.....!
ಅಮ್ಮ ನೀನು ನಮಗಾಗಿ... ನೂರು ವರುಷ ಸುಖವಾಗಿ....

ಹಾಗೂ ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸುಪ್ರಸಿದ್ಧ ಕೆ.ಜಿ.ಎಫ್ ಚಲನಚಿತ್ರದಲ್ಲಿ ಮೂಡಿಬಂದ, ಉತ್ತರಕರ್ನಾಟಕದ ಕೊಪ್ಪಳ ಮೂಲದ ಕಿನ್ನಾಳ ರಾಜು ಅವರು ತಾಯಿಯ ಕುರಿತಾಗಿ ಬರೆದ ಗೀತೆ "ಗರ್ಭದಿ ನನ್ನಿರಿಸಿ..... ಊರಲಿ ನಡೆಯುತಿರೆ" ಹಾಡು ಕೇಳಿದಾಗ ಮೈ ರೋಮಾಂಚನಗೊಳ್ಳುತ್ತದೆ. ಈ ಹಾಡು ಕರ್ನಾಟಕದಲ್ಲೆಲ್ಲ ಪ್ರಸಿದ್ಧವಾಗಿ ಎಲ್ಲರ ಗಮನ ಸೆಳೆದಿರುವುದು ಸಂತೋಷದ ಸಂಗತಿ.
ಮೇ 10 ರಂದು ಆಚರಿಸುತ್ತಿರುವ ಅಮ್ಮನ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಅಮ್ಮನ ಕುರಿತಾದ ಹಲವಾರು ಚಿತ್ರಗೀತೆಗಳನ್ನು ಮೆಲುಕು ಹಾಕುತ್ತಿದ್ದೇನೆ.

ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿ 'ಅಮ್ಮ'ತನಗಾಗಿ ಬದುಕುವುದನ್ನೇ ಮರೆಯುವ ತ್ಯಾಗಮಯಿ 'ಅಮ್ಮ'

ವಿಶೇಷವಾಗಿ ನಮ್ಮ ಕುಟುಂಬದಲ್ಲಿ ಕೊನೆಯ ಮಗನಾದ ನನಗೆ ಅಮ್ಮ ಅಂದರೆ ದೈವ. ಅಮ್ಮ ಅಂದರೆ ಆಗಸ. ಅಮ್ಮ ಅಂದರೆ ಸಾಗರದಂತೆ ಗೋಚರಿಸುತ್ತಾಳೆ. ನನ್ನ ಅಮ್ಮ ತೋರಿದ ಪ್ರೀತಿ-ವಾತ್ಸಲ್ಯ ನಾನೆಂದೂ ಮರೆಯಲಾರೆ.

ಸನಾತನ ಪ್ರಪಂಚದಲ್ಲಿ ಮೊಟ್ಟ ಮೊದಲಿಗೆ ಅಮ್ಮನನ್ನು'ಮಾತೃದೇವೋಭವ' ಎಂದೇ ಸಂಬೋಧಿಸುವ ಮೂಲಕ ಅಮ್ಮನಿಗೆ ಪ್ರಾಮುಖ್ಯತೆ ನೀಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೀವನದಲ್ಲಿ ನಾವು ಏನೇ ಪಡೆಯಬೇಕೆಂದರೂ ಅದು ನಿಸರ್ಗವೇ ನೀಡುತ್ತದೆ. ಆ ನಿಸರ್ಗದ ಪ್ರತಿರೂಪವೇ ಅಮ್ಮ ಆಗಿರುತ್ತಾಳೆ. ಈ ಅಮ್ಮನ ದಿನಾಚರಣೆಯ ದಿವಸ ತಾಯಿಯ ಸ್ಥಾನದಲ್ಲಿರುವ ವಿಶ್ವದ ಎಲ್ಲ ಅಮ್ಮಂದಿರ ಪಾದ ಪದ್ಮಗಳಿಗೆ ನನ್ನ ಪ್ರಣಾಮಗಳು ಸಲ್ಲುತ್ತವೆ.

ಅಮ್ಮಂದಿರ ದಿನ ವಿಶೇಷ: ಅವ್ವ ಅಂದ್ರೆ ಆಲದ ಮರಅಮ್ಮಂದಿರ ದಿನ ವಿಶೇಷ: ಅವ್ವ ಅಂದ್ರೆ ಆಲದ ಮರ

ನನ್ನ ಮಾತೋಶ್ರೀಯವರಾದ ರುಕ್ಮಿಣಮ್ಮ ಚೆಂಗಾರೆಡ್ಡಿ ನಮ್ಮನ್ನು ಅಗಲಿದ್ದರೂ ..ಇಂದಿನವರೆಗೂ ಪ್ರತಿಕ್ಷಣ ನಾನು ಇಡುತ್ತಿರುವ ಹೆಜ್ಜೆಯ ಜೊತೆಗೆ ತಾಯಿಯ ಹೆಜ್ಜೆಯ ಆಶೀರ್ವಾದವೂ ಸೇರಿದೆ. ಪ್ರತಿ ಕ್ಷಣ ಪ್ರತಿ ನಿತ್ಯ ತಾಯಿಯನ್ನು ನೆನೆದು ಮುಂದಿನ ಹೆಜ್ಜೆಯನ್ನು ಇಡುತ್ತೇನೆ .. ಜೀವನದುದ್ದಕ್ಕೂ ನನ್ನ ಹಾಗೂ ನನ್ನ ಕುಟುಂಬದವರ ಪ್ರತಿ ಹೆಜ್ಜೆ ಮುಂದೆ ಅವರ ಆಶೀರ್ವಾದ ಹೆಜ್ಜೆ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಮಕ್ಕಳ ಪ್ರತಿ ಹೆಜ್ಜೆಯ ಒಳಿತನ್ನೇ ಬಯಸುವ ತಾಯಿಗೆ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ವಿಶ್ವದ ತಾಯಂದಿರನ್ನು ಎಲ್ಲರೂ ಗೌರವಿಸೋಣ. ತಾಯಿಯ ಆರೋಗ್ಯ ರಕ್ಷಣೆ ನೀಡುವ ಮೂಲಕ ಅಮ್ಮನ ಋಣ ತೀರಿಸುವ ಪ್ರಯತ್ನ ಮಾಡೋಣ. ಮದರ್ಸ್ ಡೇ ಆಚರಿಸುವ ಈ ಶುಭದಿನದಂದು ಎಲ್ಲ ತಾಯಂದಿರಿಗೂ ಭಗವಂತ ಆಯುಷ್ಯ, ಆರೋಗ್ಯ ಕರುಣಿಸಿ ಸುಖವಾಗಿಟ್ಟಿರಲಿ ಎಂದು ಪ್ರಾರ್ಥಿಸುತ್ತೇನೆ.

ವಿಶ್ವಕ್ಕೆ ಕಂಟಕವಾಗಿರುವ ಕೊರೊನವನ್ನು ಹತ್ತಿಕ್ಕುವಲ್ಲಿ ನಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿದೆ. ಈ ಸಂಕಷ್ಟ, ಅತಿ ಶೀಘ್ರದಲ್ಲೇ ಶಮನವಾಗಲೆಂದು ಪ್ರಾರ್ಥಿಸುತ್ತಾ, ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಮ್ಮ ಹಾಗೂ ಎಲ್ಲರ ಆರೋಗ್ಯವನ್ನೂ ಕಾಪಾಡೋಣ.

ಮತ್ತೊಮ್ಮೆ ವಿಶ್ವದ ಎಲ್ಲಾ ತಾಯಂದಿರಿಗೆ ವಂದಿಸುತ್ತಾ ಶುಭಾಶಯಗಳೊಂದಿಗೆ ....
- ಗಾಲಿ ಜನಾರ್ದನ ರೆಡ್ಡಿ

English summary
I wish all mothers a Happy Mother’s Day. Let us convey our respect to every mother in this world. Let us protect our mothers and pay back our debt posted former Minister Gali Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X