ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಮನಸ್ಸು ಮಾಡಿದರೆ ಸಿಎಂ ಆಗಬಲ್ಲೇ: ಜನಾರ್ದನ ರೆಡ್ಡಿ

|
Google Oneindia Kannada News

ಬಳ್ಳಾರಿ, ಜೂನ್ 22: "ನಾನು ಮನಸ್ಸು ಮಾಡಿದರೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಆಗಬಹುದು. ಅದರೆ ನನಗೆ ಸಿಎಂ ಆಗಬೇಕೆನ್ನುವ ಆಸೆಯಿಲ್ಲ. ಆದರೆ ಮನಸ್ಸು ಮಾಡಿದರೆ ಖಂಡಿತವಾಗಿ ಒಂದು ದಿನವಾದರೂ ಸಿಎಂ ಆಗಿಯೇ ಆಗುತ್ತೇನೆ" ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿ ನಗರದ ಹೊರ ವಲಯದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್​​ನಲ್ಲಿ ಆಯೋಜಿಸಲಾಗಿದ್ದ ಸಹೋದರ ಹಾಗೂ ಶಾಸಕ ಸೋಮಶೇಖರ್ ರೆಡ್ಡಿ ಜನ್ಮದಿನದ ಕಾರ್ಯಮ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿರು.

 ಸಕ್ರಿಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ? ವರಿಷ್ಠರಿಂದ ಅನುಮತಿ ಡೌಟು ಸಕ್ರಿಯ ರಾಜಕಾರಣಕ್ಕೆ ಜನಾರ್ದನ ರೆಡ್ಡಿ? ವರಿಷ್ಠರಿಂದ ಅನುಮತಿ ಡೌಟು

"ಕರುಣಾಕರ ರೆಡ್ಡಿ ಬಳ್ಳಾರಿ ಸಾಮಾನ್ಯ ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕೆಲಸ ಮಾಡಿದರು. ಸೋಮಶೇಖರ ರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷರಾಗಿ ಇಂದು ಶಾಸಕರಾಗಿ ಕೆಲಸ ಮಾಡಿದರು. ನನಗೆ ಯಾರಿಗೂ ಕೊಡಲಾರದಷ್ಟು ಕಷ್ಟವನ್ನು ಕೊಟ್ಟರೂ ಇಂದು ನಿಮ್ಮ ಮುಂದೆ ಬಂದು ನಿಂತಿದ್ದೇನೆ. ಇದಕ್ಕೆಲ್ಲಾ ಶ್ರೀ ಕನಕದುರ್ಗಮ್ಮ ದೇವಿಯ ಆಶೀರ್ವಾದ ಕಾರಣ" ಎಂದು ಜನಾರ್ದನ ರೆಡ್ಡಿ ಹೇಳಿದರು.

I Will Become Chief Minister at Least One Day if I Decide Says Janardhana Reddy

ತೊಂದರೆ ಕೊಡಬೇಕೆಂದು ಮೇಲಿಂದಲೇ ಆದೇಶ; "ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದಿದ್ದರೂ ಇಷ್ಟೊಂದು ಸಮಸ್ಯೆ ಎದುರಿಸಲಾಗುತ್ತಿರಲಿಲ್ಲ. ನನಗೆ ಅಷ್ಟು ತೊಂದರೆ ಕೊಟ್ಟಿದ್ದಾರೆ. ನನ್ನನ್ನು ಬಂಧಿಸಲು ಬಂದಿದ್ದ ಸಿಬಿಐ ಅಧಿಕಾರಿಗಳೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನಿಂದ ಆದೇಶ ಇದೆ, ಆದರೆ, ಬಳ್ಳಾರಿಯ ಪ್ರತಿ ಸಾಮಾನ್ಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ" ಎಂದು ಅವರು ಹೇಳುವ ಮೂಲಕ ತಮ್ಮ ಹಿಂದಿನ ದಿನಗಳ ಬಗ್ಗೆ ತಿಳಿಸಿದರು.

 ಜನಾರ್ದನ ರೆಡ್ಡಿ ಚುನಾವಣೆಗೆ ನಿಂತ್ರೆ ಗೆಲ್ಲೊಕ್ಕೆ ಬಿಡಬೇಡಿ: ಜನರಿಗೆ ಸಾಮಾಜಿಕ ಕಾರ್ಯಕರ್ತನ ಕರೆ ಜನಾರ್ದನ ರೆಡ್ಡಿ ಚುನಾವಣೆಗೆ ನಿಂತ್ರೆ ಗೆಲ್ಲೊಕ್ಕೆ ಬಿಡಬೇಡಿ: ಜನರಿಗೆ ಸಾಮಾಜಿಕ ಕಾರ್ಯಕರ್ತನ ಕರೆ

ತಮ್ಮ ಸೋಮಶೇಖರ್ ರೆಡ್ಡಿ ಜನಸ್ನೇಹಿ, ನಮ್ಮ ಕುಟುಂಬದಲ್ಲೇ ಅತಿ ಹೆಚ್ಚು ಜನರನ್ನು ಪ್ರೀತಿಯಿಂದ ಕಾಣುವ ಶಕ್ತಿ ಇರುವುದು ಸೋಮಶೇಖರರೆಡ್ಡಿಗೆ. ಜನರ ಜೊತೆ ನಿತ್ಯ ಬೆರೆಯುತ್ತಾರೆ ತನ್ನ ಸಹೋದರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಣ, ಅಧಿಕಾರದ ಅವಶ್ಯಕತೆಯಿಲ್ಲ; "ರೆಡ್ಡಿ, ರಾಮುಲು ಸಹೋದರರಿಗೆ ಇಂದು ದುಡ್ಡಿನ ಅವಶ್ಯಕತೆಯಿಲ್ಲ ನನಗೆ ಶಾಸಕನಾಗಬೇಕು , ಮಂತ್ರಿಯಾಗ ಬೇಕು ಎಂಬ ಆಸೆಯಿಲ್ಲ. ನಾನು ಮನಸ್ಸು ಮಾಡಿದ್ರೆ ಇವತ್ತು ಒಂದು ದಿನ ಆದರೂ ಸಿಎಂ ಆಗುವೆ" ಎಂದು ಜನಾರ್ದನ ರೆಡ್ಡಿ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಬಳ್ಳಾರಿ-ವಿಜಯನಗರ ಅಭಿವೃದ್ಧಿಗೆ ನನ್ನ ಐಡಿಯಾ ಕಾರಣ; "ಇಲ್ಲಿನ ಅದಿರಿಗೆ ಪ್ರತ್ಯೇಕ ತೆರಿಗೆ ವಿಧಿಸುವಂತೆ ಸಿಎಂ ಆಗಿದ್ದ ಬಿಎಸ್ ಯಡಿಯೂರಪ್ಪ ನಾನು ಹೇಳಿದ್ದಕ್ಕೆ ಒಪ್ಪಿ ತೆರಿಗೆ ವಿಧಿಸಿದರು. ಆದರೆ ಕೆಲವರು ಇದನ್ನು ವಿರೋಧಿಸಿ ನ್ಯಾಯಾಲಯಕ್ಕೆ ಹೋದರು. ಆದರೆ ನ್ಯಾಯಾಲಯ ನನ್ನ ವಾದವನ್ನು ಒಪ್ಪಿ ತೆರಿಗೆ ವಿಧಿಸಿದ್ದನ್ನು ಎತ್ತಿ ಹಿಡಿಯಿತು. ಹೀಗಾಗಿ ಕಳೆದ 13 ವರ್ಷಗಳಲ್ಲಿ 25 ಸಾವಿರ ಕೋಟಿ ತೆರಿಗೆ ಸಂಗ್ರಹ ಆಗಿದೆ. ಇದರಿಂದಾಗಿ ಬಳ್ಳಾರಿ ವಿಜಯನಗರ ಎರಡೂ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ. ಈ ಎರಡೂ ಜಿಲ್ಲೆಗಳು ನಮ್ಮ ಎರಡು ಕಣ್ಣುಗಳಿದ್ದಂತೆ" ಎಂದರು.

Recommended Video

ಮಹಾಸರ್ಕಾರಕ್ಕೆ ಸಿಡಿಲು ಬಡಿದಿರುವಾಗ್ಲೇ CM Uddhav Thackeray ಗೆ ಕೊರೊನಾ | *Politics | OneIndia Kannada

English summary
Former minister Gali janardhana reddy said he did not interest to any MLA, minister post, But if I decided, he would became a Chief Minister in future. He spoke at Somashekar Reddy birthday program in Ballari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X