ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯನವರು ಸಿಎಂ ಆಗಬೇಕೆಂಬುದು ನನ್ನ ಆಶಯ: ಸಚಿವ ಶ್ರೀರಾಮುಲು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಆಗಸ್ಟ್‌, 16: ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ. ಅವರು ಮುಖ್ಯಮಂತ್ರಿ ಆಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಸಚಿವ ಬಿ.ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದರು. ಹೀಗೆ ಹೇಳುವ ಮೂಲಕ ಬಾದಾಮಿಯಲ್ಲಿ‌ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದಾರೆಂಬ ಕುರುಬ ಸಮುದಾಯದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.

ಬಳ್ಳಾರಿಯಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟನೆ ಸಮಾರಂಭ ಬಳಿಕ ಮಾತನಾಡಿದ ಅವರು, "ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ. ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಏನು ವಿರೋಧಗಳು ಇಲ್ಲ. ನನಗೂ ಬಿಜೆಪಿಯಿಂದ ಸಿಎಂ ಅವಕಾಶ‌ ಬಂದರೆ, ಹಿಂದುಳಿದ ಸಮುದಾಯದಿಂದ ಆಗಲಿ ಎಂದು ಬಯಸುತ್ತೇನೆ. ರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರು ಒಪ್ಪಿಕೊಳ್ಳುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇವುಗಳನ್ನು ಮಾಡಬೇಕು. ಇವು ರಾಜಕಾರಣದ ತಂತ್ರಗಾರಿಕೆ. ಇದನೆಲ್ಲ ಮಾಡಿಕೊಂಡು ಹೋದರೆ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ," ಎಂದರು.

'ನಾವು ಹಿಂದುಳಿದ ಸಮುದಾಯವನ್ನು ಕೈಬಿಡಲ್ಲ'
"ಸಿದ್ದರಾಮಯ್ಯ ಮತ್ತು ನಾವು ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹಿಂದುಳಿದ ಸಮುದಾಯಗಳು ಒಂದಾದರೆ ರಾಜ್ಯ ಮತ್ತು ದೇಶದಲ್ಲಿ ಕ್ರಾಂತಿ ಮಾಡಬಹುದು. ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕು. ಹಿಂದುಳಿದವರ ವಿಚಾರ ಬಂದಾಗ ನಾನು ಮತ್ತು ಸಿದ್ದರಾಮಯ್ಯ ಒಂದೇ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ರಾಜ್ಯದಲ್ಲಿ ನೀವು ಇನ್ನೊಬ್ಬ ದೇವರಾಜ ಅರಸ ಆಗಬೇಕೆಂದು ನಾನು ಹೇಳಿದ್ದೆ. ಬಾದಾಮಿಯಲ್ಲಿ ಹೇಗೆ ಗೆದ್ದರೆಂದು ಒಮ್ಮೆ ಕೇಳಿ. ಅವರು ಬಹಿರಂಗವಾಗಿ ಹೇಳಲ್ಲ, ಬದಲಾಗಿ ರಾತ್ರಿ ಹೋಗಿ ಕೇಳಿದರೆ ಕಿವಿಯಲ್ಲಿ ಹೇಳುತ್ತಾರೆ. ಹಿಂದುಳಿದ ಸಮುದಾಯವನ್ನು ನಾವು ಬಿಟ್ಟು ಕೊಡುವುದಕ್ಕೆ ತಯಾರಿಲ್ಲ. ಏಕೆಂದರೆ ಅದು ನಮ್ಮ ಸಮುದಾಯ," ಎಂದರು.

'ಸಿದ್ದರಾಮಯ್ಯ ಮತ್ತು ನಾನು ಶ್ರೇಷ್ಟರಿದ್ದೇವೆ'

ನಾನು ರಾಜಕೀಯವಾಗಿ ಕುರುಬ ಸಮುದಾಯದ ನಾಯಕನ್ನು ಎದುರಿಸುತ್ತಿದ್ದೇನೆ. ಅದಕ್ಕಾಗಿ ಕುರುಬ ಸಮುದಾಯಕ್ಕೆ ನನ್ನ ಬಗ್ಗೆ ಸಿಟ್ಟು ಇದೆ. ಅದಕ್ಕಾಗಿ ನಾನು ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ, ಆದರೆ ಹಾಗೇನಿಲ್ಲ ಎಂದು ಸೋಮಶೇಖರ್‌ ರೆಡ್ಡಿ ನನ್ನನ್ನ ಕರೆದುಕೊಂಡು ಬಂದರು. ರಾಜಕೀಯದಲ್ಲಿ ನಾನು ಮತ್ತು ಸಿದ್ದರಾಮಯ್ಯನವರು ಶ್ರೇಷ್ಟರಿದ್ದೇವೆ. ಯಾರು ಅನ್ಯತಾ ಭಾವಿಸಬೇಡಿ ಎಂದರು.

"ಒಮ್ಮೊಮ್ಮೆ ಸಿದ್ದರಾಮಯ್ಯ ಮತ್ತು ನಾನು ಮಾತನಾಡುತ್ತಿರುತ್ತೇವೆ. ನೀವು ಏನು ತಿಳಿದುಕೊಳ್ಳಬಾರದು, ನಾವು ರಾಜಕೀಯಗೋಸ್ಕರ ಮಾತನಾಡುತ್ತೇವೆ." ರಾಮುಲು ಕುರುಬ ಸಮಾಜ ಮತ್ತು ಸಿದ್ದರಾಮಯ್ಯ ವಿರುದ್ಧ ಎಂದು ತಿಳಿದು ಕೊಳ್ಳಬಾರದು. ಕುರುಬ ಸಮಾಜಕ್ಕೆ ನಾನು ವಿರೋಧಿ ಅಲ್ಲ. ಸಿದ್ದರಾಮಯ್ಯ ಮತ್ತು ನಾನು ಎರಡೆರಡು ಕ್ಷೇತ್ರದಲ್ಲಿ ನಿಂತು ಒಂದರಲ್ಲಿ ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದೇವೆ. ನನಗೆ ಯಾವುದೇ ವಿಚಾರ ಹೇಳುವುದಕ್ಕೆ ಯಾರ ಭಯವಿಲ್ಲ. ನಾನು ಯಾರಿಗೂ ಗುಲಾಮನಲ್ಲ. ನಾನು ಯಾರ ಕೈಯಲ್ಲಿ ಕೆಲಸ ಮಾಡುತ್ತಿಲ್ಲ‌," ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.

I will be very happy to if Siddaramaiah becomes Chief Minister: Minister Sriramulu

"ಸಿದ್ದರಾಮಯ್ಯ ಮತ್ತು ನಾನು ನೋಡುವುದಕ್ಕೆ ರಾಜಕೀಯವಾಗಿ ವಿರುದ್ಧ ಆಗಿರುತ್ತೇವೆ. ಆದರೆ ನಾವಿಬ್ಬರು ಬಹಳಷ್ಟು ದೋಸ್ತಿಗಳು, ನಾವು ಒಳಗೊಳಗೆ ಏನೋ ಮಾಡಿಕೊಳ್ಳುತ್ತೇವೆ." ಇಬ್ಬರು ರಾಜಕಾರಣದಲ್ಲಿರಬೇಕು. ಏನೋ ಮಾಡಿಕೊಂಡು ಇಬ್ಬರು ವಿಧಾನಸಭೆ ಪ್ರವೇಶ ಮಾಡುತ್ತೇವೆ. ಏಕೆ ಯೋಚನೆ ಮಾಡುತ್ತೀರಿ ಎಂದು ಜನರಿಗೆ ಹೇಳಿದರು.

ಕಾರ್ಯಕ್ರಮದಲ್ಲಿ ಸಿದ್ದರಾಮನಂದ ಸ್ವಾಮಿ, ಶಾಸಕ ಬಿ.ನಾಗೇಂದ್ರ, ಮೇಯರ್ ರಾಜೇಶ್ವರಿ, ಕುರುಬ ಸಂಘದ ಅಧ್ಯಕ್ಷ ಎರ್ರೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

English summary
I will be very happy to if Siddaramaiah becomes Chief Minister: Minister Sriramulu said in Ballari, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X