ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಎಂ ಹುದ್ದೆ ಬದಲಿಗೆ ರಾಮುಲು ಮುಂದಿಟ್ಟರು ಪ್ರಮುಖ ಬೇಡಿಕೆ

|
Google Oneindia Kannada News

ಬಳ್ಳಾರಿ, ಆಗಸ್ಟ್ 28: ಉಪಮುಖ್ಯಮಂತ್ರಿ ಸ್ಥಾನ ಸಿಗದೇ ಇದ್ದದ್ದಕ್ಕೆ ಬೇಸರವಿಲ್ಲ, ವಾಲ್ಮಿಕಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಿ ಸಾಕು, ಅದಾದರೆ ಎಲ್ಲವೂ ದೊರೆತಂತೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ಕೊಡಲಾಗುತ್ತದೆ ಎಂಬ ನಿರೀಕ್ಷೆ ಇತ್ತು, ಆದರೆ ಆ ಹುದ್ದೆ ಕೈತಪ್ಪಿದೆ. ರಾಮುಲು ಅವರ ಬೆಂಬಲಗಿರು ಈ ಕಾರಣದಿಂದಾಗಿ ಬಿಜೆಪಿ ನಾಯಕರ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ರಾಮುಲು ಅವರು ನನಗೆ ಡಿಸಿಎಂ ಹುದ್ದೆ ಬೇಡ ಎಂದಿದ್ದಾರೆ.

ಬಲಿಷ್ಟ ಹೈಕಮಾಂಡ್ ಎದುರು ಮಂಡಿಯೂರಿದ ಬಿಜೆಪಿ ಅತೃಪ್ತರುಬಲಿಷ್ಟ ಹೈಕಮಾಂಡ್ ಎದುರು ಮಂಡಿಯೂರಿದ ಬಿಜೆಪಿ ಅತೃಪ್ತರು

ನನಗೆ ಯಾವ ಹುದ್ದೆಯೂ ಬೇಡ, ನಾನು ಪ್ರತಿನಿಧಿಸುವ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7.5% ಕ್ಕೆ ಹೆಚ್ಚಿಸಿದರೆ ಎಲ್ಲವೂ ಸಿಕ್ಕಂತೆ ಎಂದು ರಾಮುಲು ಇಂದು ಹೇಳಿದ್ದಾರೆ.

I did not want any post, please give reservation to ST: Sriramulu

ಮೀಸಲಾತಿ ಹೆಚ್ಚಳ ಕುರಿತು ಈಗಾಗಲೇ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಈ ವಿಚಾರದ ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಶಿವನಗೌಡ ಪಾಟೀಲ್, ರಾಜೂಗೌಡ ಎಲ್ಲರೂ ಒಂದಾಗಿದ್ದೇವೆ ಎಂದರು.

ಹೆಚ್ಚಿದ ಅಸಮಾಧಾನ: ಹೈಕಮಾಂಡ್‌ನಿಂದ ಬಂತು ಖಡಕ್ ಆದೇಶಹೆಚ್ಚಿದ ಅಸಮಾಧಾನ: ಹೈಕಮಾಂಡ್‌ನಿಂದ ಬಂತು ಖಡಕ್ ಆದೇಶ

ಶ್ರೀರಾಮುಲು ಅವರಿಗೆ ಆರೋಗ್ಯ ಸಚಿವ ಸ್ಥಾನ ನೀಡಲಾಗಿದೆ. ಆದರೆ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಶ್ವಥ್‌ನಾರಾಯಣ, ಗೋವಿಂದ ಕಾರಜೋಳ, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.

English summary
Minister Sriramulu said i did not want any post i just want reservation hike to ST.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X