ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹರಪನಹಳ್ಳಿ ಕೆರೆಗೆ ಆಸ್ಪತ್ರೆ ತ್ಯಾಜ್ಯ; ಜನರಲ್ಲಿ ಆತಂಕ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಮೇ 28; ಕೊರೊನಾ ಸಾಂಕ್ರಮಿಕ ರೋಗದಿಂದ ಜನರು ತತ್ತರಿಸಿ ಸಾವಿನ ಮನೆಯ ಕದತಟ್ಟುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹರಪನಹಳ್ಳಿ ಪಟ್ಟಣಕ್ಕೆ ನೀರೊದಗಿಸುವ ಕೆರೆಯಲ್ಲಿ ಆಸ್ಪತ್ರೆಯ ತ್ಯಾಜ್ಯಗಳನ್ನು ಬೀಸಾಡಿ ಕಲುಷಿತಗೊಳಿಸಲಾಗುತ್ತಿದೆ ಎಂದು ವಾಯು ವಿಹಾರಿಗಳು ಹೇಳುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿರುವ ಕೆರೆಯಲ್ಲಿ ಆಸ್ಪತ್ರೆ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಇದರಿಂದ ನೀರು ಮಲೀನವಾಗುವ ಭೀತಿಯಲ್ಲಿ ವಾಯುವಿಹಾರಿಗಳು ಓಡಾಡುತ್ತಿದ್ದಾರೆ.

ದಾಳಿಂಬೆ, ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ ದಾಳಿಂಬೆ, ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ಪಟ್ಟಣದ ದಕ್ಷಿಣಕ್ಕೆ ಹಿರೆಕೆರೆ, ಉತ್ತರಕ್ಕೆ ನಾಯಕನಕೆರೆ ಹಾಗೂ ಪಶ್ಚಿಮಕ್ಕೆ ಅಯ್ಯನಕೆರೆಗಳಿವೆ. ಅಯ್ಯನಕೆರೆಗೆ ನಗರದ ತ್ಯಾಜ್ಯಗಳನ್ನು ಲಂಡನ್ ಹಳ್ಳಗಳ ಮೂಲಕ ಹರಿಸುವುದರ ಜೊತೆಗೆ ಕಸವನ್ನು ಹಾಕಿ ತ್ಯಾಜ್ಯ ವಿಲೇವಾರಿ ಘಟಕವಾಗಿ ಮಾಡಲಾಗುತ್ತಿದೆ. ಇದರಿಂದಾಗಿ ಕೆರೆಯಲ್ಲಿ ಮೀನು ಸಾಕಾಣಿಕೆ ಇರಲಿ, ಜನಸಾಮಾನ್ಯರೂ ಕೆರೆ ಹತ್ತಿರ ತಿರುಗಾಡಲು ಸಾಧ್ಯವಿಲ್ಲದಂತಾಗಿದೆ. ಕೆರೆಯ ಅಂಗಳ ಪ್ಲಾಸ್ಟಿಕ್ ಮಯವಾಗಿದೆ.

ಕೋವಿಡ್ ಕೇರ್‌‌ ಸೆಂಟರ್‌ ಆರಂಭಿಸಿದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ ಕೋವಿಡ್ ಕೇರ್‌‌ ಸೆಂಟರ್‌ ಆರಂಭಿಸಿದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ

 Hospital Waste Dumped To Lake At Harapanahalli

ಉತ್ತರ ದಿಕ್ಕಿನಲ್ಲಿರುವ ನಾಯಕನಕೆರೆ ಸಂಜೆಯ ವಾಯುವಿಹಾರಕ್ಕೆ ಸೂಕ್ತವಾಗಿದೆ. ಪಟ್ಟಣಕ್ಕೆ ನೀರು ಸರಬರಾಜು ಪೂರೈಸುವ ವ್ಯವಸ್ಥೆಗೆ ಅಂತರ್ಜಲ ವೃದ್ದಿಯ ಜೀವ ನದಿಯಂತಿದೆ ಇದು ಇದೆ. ಗ್ರಾಮೀಣ ಪ್ರದೇಶಗಳಾದ ಕಾಯಕದಳ್ಳಿ, ದಡಾಗರನಹಳ್ಳಿ, ಹೊಂಬಳಗಟ್ಟಿಗೆ ಸಂಪರ್ಕಿಸುವ ರಸ್ತೆಯೂ ಇಲ್ಲಿದ್ದು, ಸದಾ ಜನರು ಸಂಚಾರ ನಡೆಸುತ್ತಾರೆ.

ವಿಜಯನಗರ: ಎಸ್ಎಲ್ಆರ್ ಕಾರ್ಖಾನೆಯಿಂದ ಕೊರೊನಾ ಮಾರ್ಗಸೂಚಿ ಉಲ್ಲಂಘನೆವಿಜಯನಗರ: ಎಸ್ಎಲ್ಆರ್ ಕಾರ್ಖಾನೆಯಿಂದ ಕೊರೊನಾ ಮಾರ್ಗಸೂಚಿ ಉಲ್ಲಂಘನೆ

ಪಟ್ಟಣದ ನಿವಾಸಿಗಳು ವಾಯುವಿಹಾರಕ್ಕೆ ಈ ಸ್ಥಳದಲ್ಲಿ ಹಾದುಹೋಗುತ್ತಾರೆ. ಆದರೆ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಎಲ್ಲರೂ ಹರಸಾಹಸ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ತ್ಯಾಜ್ಯ ಹಾಗೂ ಪಿಪಿಇ ಕಿಟ್ ಅನ್ನು ಸಹ ಕೆರೆಯ ಆವರಣದಲ್ಲಿ ಸುರಿದು ಬೆಂಕಿ ಹಚ್ಚುತ್ತಿರುವುದು ಮುಂದಿನ ದಿನಗಳಲ್ಲಿ ಕೆರೆಯ ನೀರು ವಿಷಪೂರಿತವಾಗುವ ಆತಂಕ ಕಾಡುತ್ತಿದೆ.

ನಿರಂತರವಾಗಿ ಈ ಕೆರೆಯ ನೀರನ್ನು ಬಳಸಿಕೊಂಡು ನದಿ ನೀರು ಇಲ್ಲದ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲದೇ ಈ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆದಿದ್ದು ಉತ್ತಮ ಮೀನು ಸರಬರಾಜಿಗೆ ಹೆಸರಾಗಿದೆ.

 Hospital Waste Dumped To Lake At Harapanahalli

ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ತ್ಯಾಜ್ಯವಾದ ಪಿಪಿಇ ಕಿಟ್, ಅವಧಿ ಮೀರಿದ ಔಷಧಿ, ಸಿಲೈನ್ ಬಾಟಲ್, ಸಿರೇಂಜ್‌ಗಳನ್ನು ಹಾಕುತ್ತಿದ್ದು ಮಳೆಬಂದು ಕೆರೆ ತುಂಬಿದಾಗ ಎಲ್ಲಾ ತ್ಯಾಜ್ಯವೂ ಕೆರೆಗೆ ಸೇರಲಿದೆ. ಸಾಕಷ್ಟು ವಲಸೆ ಪಕ್ಷಿಗಳು ಆಶ್ರಯ ಪಡೆಯುವ ಜಾಗ, ಪಶುಗಳಿಗೆ ನೀರುಣಿಸುವ ಸ್ಥಳ, ಘನತ್ಯಾಜ್ಯ ವಿಲೇವಾರಿಗೆ ಸ್ಥಳವಾಗಲಿದೆ.

ಮುಂದಾಗುವ ಅನಾಹುತ ತಪ್ಪಿಸಲು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಲಿ. ಪುರಸಭೆಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ಹೊಂದಿದ್ದರೂ ಇತರರಿಗೆ ತಿಳುವಳಿಕೆ ಹೇಳುವ ಆಸ್ಪತ್ರೆಯ ಸಿಬ್ಬಂದಿ ತ್ಯಾಜ್ಯವನ್ನು ಕೆರೆಗೆ ಚಲ್ಲುತ್ತಿರುವುದು ಎಷ್ಟರ ಮಟ್ಟಿಗೆ ಸರಿ?. ತ್ಯಾಜ್ಯ ಸುರಿದವರು ಯಾರೇ ಆಗಲಿ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮಾಡದಿರಲಿ ಎಂಬುದು ಜನರ ಆಗ್ರಹ.

ತ್ಯಾಜ್ಯವನ್ನು ಸುರಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕೆರೆಯ ಭಾಗವನ್ನು ತ್ಯಾಜ್ಯ, ವಿಷಮುಕ್ತವಾಗಿ ಮಾಡಬೇಕು ಎಂದು ಸ್ಥಳೀಯ ವಾಯುವಿಹಾರಿಗಳಾದ ಲಕ್ಷ್ಮಣ್ ರಾವ್, ಹೇಮಣ್ಣ ಮೋರಿಗೇರಿ, ಚಂದ್ರಪ್ಪ, ಮಂಜುನಾಥ ಸೇರಿದಂತೆ ಹಲವರು ಮನವಿ ಮಾಡಿದ್ದಾರೆ.

"ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆರೆಯ ಬಳಿ ಆಸ್ಪತ್ರೆ ತ್ಯಾಜ್ಯವನ್ನು ಎಸೆದಿರುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಪುರಸಭೆ ಅಧಿಕಾರಿ ಬಿ. ಆರ್. ನಾಗರಾಜ ನಾಯ್ಕ್ ಹೇಳಿದ್ದಾರೆ.

English summary
In the time of Covid hospital waste dumped to lake at Vijayanagara district Harapanahalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X