ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ: 1000ಬೆಡ್ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ನಿರ್ಮಿಸಿ

|
Google Oneindia Kannada News

ಹೊಸಪೇಟೆ, ಜುಲೈ 19: ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾವೈರಸ್ ಸೋಂಕಿತರು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೂ ಮಧ್ಯವಿರುವ ಹೊಸಪೇಟೆ ಮುನ್ಸಿಪಲ್ ಮೈದಾನದ ಒಳ ಕ್ರೀಡಾಂಗಣದಲ್ಲಿ ತಕ್ಷಣವೇ 1000 ಹಾಸಿಗೆಯ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ತಪಾಸಣಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರರಾದ ಪತ್ರೇಶ್ ಹಿರೇಮಠ ಮತ್ತು ನಿಂಬಗಲ್ ರಾಮಕೃಷ್ಣ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಹೊಸಪೇಟೆ ತಹಶಿಲ್ದಾರರ ಮುಖಾಂತರ ಮನವಿ ಸಲ್ಲಿಸಿದ್ದಾರೆ

Recommended Video

Rafael fighter jet lands in India | Oneindia Kannada

ಜೊತೆಗೆ ಕೊರೋನಾ ಸೋಂಕು ಮುಂದಿನ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು ಬಳ್ಳಾರಿ ಜಿಲ್ಲೆಯಲ್ಲಿಯೇ 20 ಸಾವಿರಕ್ಕೂ ಹೆಚ್ಚು ಸೋಂಕಿತರ ಪ್ರಮಾಣ ತಲುಪುವ ಸಾಧ್ಯತೆಯನ್ನು ತಜ್ಞರು ಅಂದಾಜಿಸಿದ್ದು ಜಿಲ್ಲಾಡಳಿತ ಎಚ್ಚರಿಕೆ ವಹಿಸಲು ಕಾಂಗ್ರೆಸ್ ಒತ್ತಾಯಿಸಿದೆ.

Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್ ಜೋನ್Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್ ಜೋನ್

ಒಂದುವೇಳೆ ಅನುದಾನದ ಕೊರತೆ ಕಂಡುಬಂದಲ್ಲಿ ಜಿಲ್ಲಾ ಖನಿಜ ನಿಧಿಯಲ್ಲಿ 3 ಸಾವಿರ ಕೋಟಿಗೂಅಧಿಕ ಹಣವಿದ್ದು ತಕ್ಷಣವೇ ಅದನ್ನು ಬಳಸಿ ಇಂತಹ ದೊಡ್ಡ ಸ್ಥಳಗಳಲ್ಲಿ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಮುಂದಾಗಬೇಕೆಂದು ಮನವಿ ಮೂಲಕ ಒತ್ತಾಯಿಸುತ್ತಿದ್ದಾರೆ

Hospet: Congress demand 1000 bed Covid Hospital in Indoor Stadium

ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ತಿಂಗಳು ಸೋಂಕು ವಿಪರೀತವಾಗಿ ಹರಡಿ ಚಿಕಿತ್ಸೆಗೆ ಸ್ಥಳವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗುವ ಸಂಭವವಿದ್ದು ತಕ್ಷಣವೇ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಲು ಕಾಂಗ್ರೆಸ್ ವಕ್ತಾರರಾದ ಪತ್ರೇಶ್ ಹಿರೇಮಠ ಮತ್ತು ನಿಂಬಗಲ್ ರಾಮಕೃಷ್ಣ ಒತ್ತಾಯಿಸಿದ್ದಾರೆ.

English summary
Hospet: Congress spokesperson Pathresh Hiremath and Nimbagal Ramakrishna demanded 1000 bed Covid Hospital in Indoor Stadium and submitted a request letter to Hospet Tahasildar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X