ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಹನಾ ಕ್ರೆಡಿಟ್ ಸಂಸ್ಥೆಯಲ್ಲಿ 9 ಕೋಟಿ ವಂಚನೆ, 23 ಮಂದಿ ವಿರುದ್ಧ ಕೇಸ್

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ, ಏಪ್ರಿಲ್ 23: ಅಹನಾ ಕ್ರೆಡಿಟ್ ಸೌಹಾರ್ದ ಕೋ- ಆಪರೇಟಿವ್‌ನಲ್ಲಿ 9.32 ಕೋಟಿ ವಂಚನೆಯ ಅರೋಪದಡಿ 23 ಜನರ ವಿರುದ್ದ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ನಗರದ ಅಹನಾ ಕ್ರೆಡಿಟ್ ಸೌಹಾರ್ದ ಕೋ- ಆಪರೇಟಿವ್‌ನಲ್ಲಿ ಅಂದಾಜು 9.32 ಕೋಟಿ ರೂ. ವಂಚನೆ ಹಿನ್ನೆಲೆಯಲ್ಲಿ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಏಪ್ರಿಲ್ 03ರಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿಯ ಅಧಿಕಾರಿ ಕೆ.ಆರ್.ರವಿಕುಮಾರ ದೂರು ನೀಡಿದ್ದಾರೆ.

ಠೇವಣಿದಾರರ ಆರೋಪ: ಕೋ-ಆಪರೇಟಿವ್‌ನಲ್ಲಿ ಠೇವಣಿದಾರರು ಹಣ ಕೇಳಿದರೆ ಕೊಡುತ್ತಿಲ್ಲ. ಸಹಕಾರಿ ಗ್ರಾಹಕರಿಗೆ ಇಂದು ನಾಳೆ ಅಂತ ಓಡಾಡಿಸುತ್ತಿದ್ದಾರೆ. ಈ ಕುರಿತು ಕಳೆದ ಲಾಕ್‌ಡೌನ್‌ಕ್ಕಿಂತ ಮುಂದೆ ಇಬ್ಬರು ದೂರು ನೀಡಿದರು. ಕಳೆದ ಜನವರಿ, ಫೆಬ್ರವರಿಯಲ್ಲಿ 38 ಜನರು ದೂರು ನೀಡಿದ್ದಾರೆ.

Hospet: Ahana Souharda Credit Co Operative Multi crore Scam, 23 Arrested

ತನಿಖೆ ಜಾರಿಯಲ್ಲಿದೆ:
ದೂರು ಬಂದ ಹಿನ್ನೆಲೆ ಪ್ರಾಥಮಿಕ ತನಿಖೆ ಕೈಗೊಂಡಿದ್ದು ಅಹನಾ ಕ್ರೇಡಿಟ್ ಸೌಹಾರ್ದ ಕೋ-ಆಪರೇಟಿವ್‌ನ ಅಧ್ಯಕ್ಷ ಕೆ.ವೀರಭದ್ರಪ್ಪ, ನಿರ್ದೇಶಕರಾದ ಕೆ.ಉಮೇಶಪ್ಪ, ಕೆ.ಮಲ್ಲಿಕಾರ್ಜುನ, ಮಲ್ಲಿಕಾರ್ಜುನಯ್ಯ, ಚಂದ್ರಪ್ಪ, ರಂಜಿತ್ ಸೇರಿ ಒಟ್ಟು 23 ಜನರ ಮೇಲೆ ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ ಶ್ರೀನಿವಾಸ್ ಮೇಟಿ ಮತ್ತವರ ತಂಡ ತನಿಖೆಯನ್ನು ಮುಂದುವರೆಸಿದ್ದಾರೆ.

ಒಟ್ಟು ಠೇವಣಿದಾರರು: ಅಹನಾ ಕ್ರೇಡಿಟ್ ಸೌಹಾರ್ದ ಕೋ-ಆಪರೇಟಿವ್‌ನ 400ಕ್ಕೂ ಅಧಿಕ ಠೇವಣಿದಾರರನ್ನು ಹೊಂದಿದ್ದು, ಒಟ್ಟು 32 ಕೋಟಿ ರೂ. ಠೇವಣಿ ಹೊಂದಿದೆ.

ಸಹಕಾರಿ ನಿಯಮದ ಪ್ರಕಾರ ಆಡಳಿತ ವರ್ಗಕ್ಕೆ ಕೇವಲ ಶೇ.10 ರಷ್ಟು ಮಾತ್ರ ಸಾಲ ಪಡೆಯಲು ಅನುಮತಿ ಇದೆ. ಆದರೆ ಸಹಕಾರಿ ಠೇವಣಿದಾರರ ಹಣವನ್ನು ಸೂಕ್ತ ದಾಖಲಾತಿಗಳಿಲ್ಲದೆ ಸ್ವತಃ ಅಧ್ಯಕ್ಷರು ಒಬ್ಬರೆ 7.50 ಕೋಟಿ ಸಾಲ ಪಡೆದು ಸಹಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.

ಕಾಲ್ಪನಿಕ ಜಮೆ, ಖರ್ಚು ತೋರಿಸಿ ಒಟ್ಟು 9.32ಕೋಟಿ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲದೆ ಹಣ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ಅಹನಾ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್‌ನ ಅಧ್ಯಕ್ಷ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದೆ. 2012 ರಿಂದ 2021ರ ವರೆಗೆ ತನಿಖೆ ನಡೆಯ ಬೇಕಿದೆ. ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದು ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಶ್ರೀನಿವಾಸ್ ಮೇಟಿ ಹೇಳಿದ್ದಾರೆ.

ಠೇವಣಿ ಹಣ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆಯಿಂದ ಸಾಬಿತು ಆಗಿದೆ. ಆದ್ದರಿಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ನಿಯಮಿತದ ಬಳ್ಳಾರಿ ಜಿಲ್ಲಾ ಸಂಯೋಜಕ ಕೆ.ಆರ್.ರವಿಕುಮಾರ ಪ್ರತಿಕ್ರಿಯಿಸಿದ್ದಾರೆ.

English summary
Hospet: Ahana Souharda Credit Co Operative Multi crore Scam, 23 Arrested, investigation is going on said CPI Rural police station Srinivas Meti.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X