• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜಯನಗರ; ಕಾರ್ಣಿಕ ಹೇಳುತ್ತಿದ್ದ ಗೊರವಯ್ಯ ಮಾಲತೇಶಪ್ಪ ನಿಧನ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ವಿಜಯನಗರ, ಜೂನ್ 22; 31 ವರ್ಷಗಳ ಕಾಲ ಕಾರ್ಣಿಕ ನುಡಿದಿದ್ದ ಗೊರವಯ್ಯ ಮಾಲತೇಶಪ್ಪ ಮಂಗಳವಾರ ಮುಂಜಾನೆ ವಿಧಿವಶರಾದರು. ಕಳೆದ 11 ವರ್ಷಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿದ್ದರು.

ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಕ್ಷೇತ್ರದ ಕಾರ್ಣಿಕದ ಗೊರವಯ್ಯ ಮಾಲತೇಶಪ್ಪ (75) ಮುಂಜಾನೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದ ಸುಕ್ಷೇತ್ರ ಮೈಲಾರ ಜಾತ್ರೋತ್ಸವಕ್ಕೆ ಪ್ರತಿ ವರ್ಷ ಲಕ್ಷಾನುಗಟ್ಟಲೆ ಜನ ಆಗಮಿಸಿ ಮೈಲಾರನ ದರ್ಶನ ಪಡೆದು ಹೋಗುತ್ತಾರೆ.

ಹೈಕೋರ್ಟ್ ಮೆಟ್ಟಿಲೇರಿದ ಮೈಲಾರಲಿಂಗೇಶ್ವರ ಕಾರ್ಣಿಕ ವಿವಾದಹೈಕೋರ್ಟ್ ಮೆಟ್ಟಿಲೇರಿದ ಮೈಲಾರಲಿಂಗೇಶ್ವರ ಕಾರ್ಣಿಕ ವಿವಾದ

ಮೈಲಾರಪ್ಪನ ಭಕ್ತರ ಮನೆ ಮಾತಾಗಿದ್ದ ಮಾಲತೇಶಪ್ಪ 31 ವರ್ಷಗಳ ಕಾಲ ತಮ್ಮ ಕಂಚಿನ ಕಂಠದಿಂದ ಕಾರ್ಣಿಕ ನುಡಿದಿದ್ದರು. ತಮ್ಮ ಗುರು ಲಿಂಗೈಕ್ಯರಾಗಿರುವುದು ಭಕ್ತರಿಗೆ ನೋವುಂಟು ಮಾಡಿದೆ.

 ಮೈತ್ರಿ ಸರ್ಕಾರ ಖತಂ: ನಿಜವಾಯ್ತೆ ಮೈಲಾರಲಿಂಗ ಕಾರ್ಣಿಕ ಭವಿಷ್ಯ? ಮೈತ್ರಿ ಸರ್ಕಾರ ಖತಂ: ನಿಜವಾಯ್ತೆ ಮೈಲಾರಲಿಂಗ ಕಾರ್ಣಿಕ ಭವಿಷ್ಯ?

ಗೊರವಯ್ಯ ಮಾಲತೇಶಪ್ಪ ಸಂಕಷ್ಟದಲ್ಲಿದ್ದ ಭಕ್ತರು ತಮ್ಮ ಗುರು ಸ್ವಾಮಿಗೆ ಸಹಾಯ ಹಸ್ತ ಚಾಚಿದ್ದರು. ಮನೆಯ ನಿರ್ಮಾಣ ಕಾರ್ಯ ಸಹ ನಡೆಯುತ್ತಿತ್ತು. ಮನೆ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ.

'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಮೈಲಾರ ಕಾರ್ಣಿಕ ಭವಿಷ್ಯ'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್‌' ಮೈಲಾರ ಕಾರ್ಣಿಕ ಭವಿಷ್ಯ

ಗೊರವಯ್ಯ ಮಾಲತೇಶಪ್ಪಗೆ ಇಬ್ಬರು ಗಂಡು ಮಕ್ಕಳಿದ್ದು ಅನಾರೋಗ್ಯದಿಂದ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಗೊರವಯ್ಯ ಮಾಲತೇಶಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

English summary
Goravaiah Malateshappa died on June 22 morning at Hoovina Hadagali taluk of Vijanagara district. He said Karnika for 31 years in famous Mylara Jatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X