ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಂದಾಲ್ ಗೆ ಸರ್ಕಾರಿ ಜಮೀನು ಕ್ರಯ, ಎಚ್ಕೆ ಪಾಟೀಲ್ ಗರಂ

|
Google Oneindia Kannada News

ಬಳ್ಳಾರಿ, ಮೇ 28: ಜಿಂದಾಲ್ ಸ್ಟೀಲ್ ಕಂಪನಿಗೆ 3666 ಎಕರೆ ಜಮೀನು ಕ್ರಯ ಪ್ರಸ್ತಾಪಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಎಚ್ ಕೆ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ 3666 ಎಕರೆ ಜಮೀನನ್ನು ಕ್ರಯ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಸಿಕ್ಕಿದೆ. ಒಂದು ಎಕರೆಗೆ 1.22 ಲಕ್ಷ ರೂಪಾಯಿಯಂತೆ ಶುದ್ಧ ಕ್ರಯ ಪತ್ರ ಮಾಡಿಕೊಳ್ಳುವುದು ಸಮಂಜಸವಲ್ಲ, ಈ ಸಂಬಂಧ ಸಿಎಂ ಕುಮಾರಸ್ವಾಮಿ ಅವರಿಗೆ ಎಚ್ ಕೆ ಪಾಟೀಲ್ ಪತ್ರ ಬರೆದಿದ್ದಾರೆ.

ಸಾವಿರಾರು ಎಕರೆ ಭೂಮಿಯನ್ನು ಜಿಂದಾಲ್ ಕಂಪನಿ ಹೆಸರಿಗೆ ಕ್ರಯ ಮಾಡುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಜಿಂದಾಲ್ ಕಂಪನಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಇದೆ. ರಾಜ್ಯ ಸರ್ಕಾರಕ್ಕೆ ಜಿಂದಾಲ್ ಕಂಪನಿಯಿಂದ 1200 ಕೋಟಿ ರೂಪಾಯಿ ಬಾಕಿ ಉಳಿದಿದೆ. ಬಾಕಿ ಹಣವನ್ನು ವಸೂಲು ಮಾಡದೇ ಅದೇ ಕಂಪನಿಗೆ ಭೂಮಿ ನೀಡುವುದು ಸಮಂಜಸವಲ್ಲ, ಮೊದಲು ಆ ಕಂಪನಿಯಿಂದ ಬಾಕಿ ವಸೂಲು ಮಾಡಿ ಎಂದು ಎಚ್ ಕೆ ಪಾಟೀಲ್ ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ

HK Patil opposes to JSW lease conversion to sale deed, 1.5L an acre

ಕ್ರಯಕ್ಕೆ ಗುರುತಿಸಲಾಗಿರುವ ಜಮೀನು ಖನಿಜ ಸಂಪತ್ತು ಹೊಂದಿದೆ, ಈ ಜಮೀನು ಕ್ರಯ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಆಗಲಿದೆ ಎಂದು ಪತ್ರದಲ್ಲಿ ಎಚ್ ಕೆ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

English summary
The Karnataka cabinet on Monday gave its approval toHK convert the lease agreement of 3,600 acres of land in Ballari into a sale deed, to manufacturing giant JSW Steel Ltd. KPCC campaign committee chief HK Patil opposes Karnataka government move.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X