ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗ ನೀರು ಕುಡಿಯುವುದು; ಮೈಲಾರಲಿಂಗೇಶ್ವರ ಸನ್ನಿಧಿ ವಿಶೇಷ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಮಾರ್ಚ್ 26; ಮೈಲಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಲಿಂಗ ನೀರು ಕುಡಿಯುವುದು ಎಂಬ ನಂಬಿಕೆ ಹೊಸದೇನಲ್ಲಾ. ಸಾವಿರಾರು ವರ್ಷಗಳ ಇತಿಹಾಸವೇ ಇದಕ್ಕೆ ಇದೆ.

ನೂತನವಾಗಿ ರಚನೆಯಾಗಿರುವ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ನಿತ್ಯವು ಸಂಭವಿಸುವ ಪವಾಡವಿದು. ಪ್ರತಿಯೊಬ್ಬ ಭಕ್ತರು ಶ್ರದ್ಧೆ, ಭಕ್ತಿಯಿಂದ ಲಿಂಗಕ್ಕೆ ಬಿಂದಿಗೆಯಿಂದ ನೀರೆರೆದರೇ ನೀರನ್ನು ಸ್ವೀಕರಿಸುತ್ತದೆ. ಶಾಂತ ಮನಸ್ಸಿನಿಂದ ಪೂಜೆ ಸಲ್ಲಿಸಿ ನೀರನ್ನು ಹಾಕಿದರೆ ಸ್ವೀಕರಿಸುವ ಪ್ರತೀತಿ ಇದೆ.

 ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ ಶಿವರಾತ್ರಿ ವಿಶೇಷ, ಕ್ಷೇತ್ರ ಪ್ರದಕ್ಷಿಣೆ: 1,300 ವರ್ಷಗಳ ಇತಿಹಾಸದ ಇನ್ನ ಮಹಾಲಿಂಗೇಶ್ವರ ದೇವಾಲಯ

ಈ ಲಿಂಗಕ್ಕೆ ಜಾತಿ, ಧರ್ಮ, ಲಿಂಗ, ಮೇಲು ಕೀಳು ಎನ್ನುವ ಬೇಧವಿಲ್ಲದೇ ಪ್ರತಿಯೊಬ್ಬ ಭಕ್ತರೂ ಭಗವಂತನನ್ನು ನೆನೆದು ಲಿಂಗಕ್ಕೆ ನೀರು ಹಾಕಿದೆರೇ ಸ್ವೀಕರಿಸುತ್ತದೆ. ಲಿಂಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದುವರೆಗೂ ಲಿಂಕ್ಕೆ ಹಾಕಿದ ನೀರು ಎಲ್ಲಿ ಹೋಗುತ್ತೆ ಎನ್ನುವುದು ಮಾತ್ರ ಇಂದಿಗೂ ತಿಳಿಯದ ಸಂಗತಿಯಾಗಿದೆ.

ನಂಜನಗೂಡು ದೊಡ್ಡ ಜಾತ್ರೆ; ಅರ್ಧಕ್ಕೆ ನಿಂತ ಪಾರ್ವತಿ ದೇವಿ ರಥ ನಂಜನಗೂಡು ದೊಡ್ಡ ಜಾತ್ರೆ; ಅರ್ಧಕ್ಕೆ ನಿಂತ ಪಾರ್ವತಿ ದೇವಿ ರಥ

History Of Mylara Lingeshwara Temple

ಉದ್ಭವ ಲಿಂಗದ ಇತಿಹಾಸ; ಗುರು ಕಪಿಲ ಎನ್ನುವ ಮಹಾಮುನಿಗಳು ಶಿವನ ಪರಮ ಭಕ್ತರಾಗಿದ್ದರು. ನಿತ್ಯವು ಶಿವನಿಗೆ ಹೂವು, ಹಣ್ಣು ಹಾಲಿನ ಅಭಿಷೇಕಗಳಿಂದ ಪೂಜಸುತ್ತಿದ್ದರು. ಈ ಮಹಾಮುನಿಗಳ ತಪಸ್ಸನ್ನು ಮೆಚ್ಚಿ ಶಿವ ಪ್ರತ್ಯಕ್ಷನಾಗಿ ಉದ್ಭವ ಲಿಂಗವನ್ನು ಮಾಡಿದ್ದಾನೆ ಎಂಬ ಪ್ರತೀತಿ ಇದೆ. ಅಂದಿನಿಂದ ಶಿವನನ್ನು ಸಾಕ್ಷಾತ್ಕರಿಸಿದ ದಿನದಿಂದಲೂ ಉದ್ಭವಲಿಂಗ ಜಲವನ್ನು ಸ್ವೀಕರಿಸುತ್ತಲೇ ಇದೆ.

ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ ಸ್ಮಾರಕಗಳ ಬಳಿ ಅಕ್ರಮ ಮಣ್ಣು ಸಾಗಣೆ; ಹಂಪಿ ಸ್ಮಾರಕಗಳಿಗೆ ಹಾನಿ

ಮೈಲಾರಲಿಂಗೇಶ್ವರ ದೇವಾಲಯದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈ ಕುರಿತು ಮಾತನಾಡಿದ್ದಾರೆ. "ಸ್ವಯಂಬು ಲಿಂಗುವಿಗೆ ಸಹಸ್ರಾರು ಬಿಂದಿಗೆಯಲ್ಲಿ ನೀರನ್ನು ಹಾಕಿದರೆ ಆ ಲಿಂಗುವು ನೀರನ್ನು ಸ್ವೀಕರಿಸುವುದು ಎಂಬ ಪ್ರತೀತಿ ಇದೆ. ಇದಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಪ್ರತಿಯೊಬ್ಬರು ಭಕ್ತಿಯಿಂದ ಆ ಭಗವಂತನನ್ನು ನೆನೆದು ನೀರನ್ನು ಲಿಂಗಕ್ಕೆ ಹಾಕಿದರೆ ಸ್ವೀಕಾರ ಮಾಡುವುದು ಸ್ವಯಂಬು ಲಿಂಗುವಿನ ವಿಶೇಷತೆಯಾಗಿದೆ" ಎಂದು ಹೇಳಿದ್ದಾರೆ.

"ಈ ಒಂದು ವಿಚಾರವು ಯಾವುದೇ ರೀತಿಯಲ್ಲಿ ಹೊಸದೇನಲ್ಲ. ಈ ವಿಚಾರವನ್ನು ವೈಭವೀಕರಿಸುವುದು ಅಗತ್ಯವಿಲ್ಲ. ಯಾರೂ ಪೂಜೆ ಮಾಡುವ ಸಮಯದಲ್ಲಿ ಲಿಂಗ ನೀರು ಕುಡಿದಿದೆ ಅಂತ ತಪ್ಪು ಸಂದೇಶ ಮಾಡಬಾರದು. ಇಲ್ಲಿ ಕೆಲವರು ಗುಂಪುಗಾರಿಕೆ ಮಾಡಲು ಹೊರಟಿದ್ದಾರೆ, ಭಕ್ತರು ಇದಕ್ಕೆ ಕಿವಿಗೊಡಬಾರದೆಂದು" ಮನವಿ ಮಾಡಿದ್ದಾರೆ.

English summary
History of the Vijayanagar district Hoovina Hadagali taluk Mylara Lingeshwara temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X