ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸಪೇಟೆ; ಭಾರೀ ಮಳೆ; ಬೆಳೆಗಳು ಸಂಪೂರ್ಣ ಜಲಾವೃತ

By ವಿಜಯನಗರ ಪ್ರತಿನಿಧಿ
|
Google Oneindia Kannada News

ವಿಜಯನಗರ , ಜೂನ್ 03; ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಬೆಳೆದು ನಿಂತಿದ್ದ ಬೆಳೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಹೊಸಪೇಟೆ ತಾಲೂಕಿನದ್ಯಾಂತ ಬುಧವಾರ ಸಂಜೆಯಿಂದ ಶುರುವಾಗಿ ರಾತ್ರಿಯವರೆಗೂ ಉತ್ತಮ ಮಳೆಯಾಗಿದೆ. ರಾತ್ರಿಯ ವೇಳೆ ಸುರಿದ ಧಾರಕಾರ ಮಳೆಗೆ ಹೊಲಗದ್ದೆಗಳಿಗೆ ನೀರು ನುಗ್ಗಿ ಹಲವುಕಡೆ ಬೆಳೆಗಳು ಹಾನಿಯಾಗಿವೆ.

 ಜೂನ್ 3 ಹಾಗೂ 4 ರಂದು ರಾಜ್ಯದಲ್ಲಿ ಭಾರಿ ಮಳೆ, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜೂನ್ 3 ಹಾಗೂ 4 ರಂದು ರಾಜ್ಯದಲ್ಲಿ ಭಾರಿ ಮಳೆ, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ವರ್ಷಾನುಗಟ್ಟಲೇ ಬೆಳೆದ ಬೆಳೆ ಒಂದೇ ಸಮಯಕ್ಕೆ ಮಳೆಗೆ ಬೆಳೆಗಳು ಹಾನಿಯಾಗಿದ್ದರಿಂದ ರೈತ ಕಂಗಲಾಗಿದ್ದಾನೆ. ಹೊಸಪೇಟೆಯ ರಾಯರ ಕೆರೆಯಲ್ಲಿರುವ ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಬಾಳೆ, ನವಣೆ, ಮೆಕ್ಕೆಜೋಳ ಸೇರಿದಂತೆ ಇನ್ನಿತರ ಬೆಳೆಗಳು ಜಲಾವೃತವಾಗಿವೆ.

 ಜೂನ್ ಮೊದಲ ವಾರ ಮುಂಗಾರು ಪ್ರವೇಶ; ರಾಜ್ಯಕ್ಕೆ ಭಾರಿ ಮಳೆ ಸೂಚನೆ ಜೂನ್ ಮೊದಲ ವಾರ ಮುಂಗಾರು ಪ್ರವೇಶ; ರಾಜ್ಯಕ್ಕೆ ಭಾರಿ ಮಳೆ ಸೂಚನೆ

Heavy Rain In Hospet Damages Standing Crops

ಈ ಕೆರೆಗೆ ಕಲ್ಲಹಳ್ಳಿ, ರಾಜಾಪುರ, ವೆಂಕಟಗಿರಿ, ಸಿದ್ದಾಪುರ ಗ್ರಾಮಗಳಿಂದ ಸ್ವಲ್ಪ ಮಳೆಯಾದರೆ ಸಾಕು ನೀರು ಒಮ್ಮೆ ಹರಿದು ಬರುತ್ತದೆ. ರಾಷ್ಟ್ರೀಯ ಹೆದ್ದಾರಿ 50 ನಿರ್ಮಿಸಿದಾಗಿನಿಂದ ನೀರು ಸರಿಯಾಗಿ ಹೋಗದೆ ಇರುವುದರಿಂದ ಈ ಸಮಸ್ಯೆ ಕಾಡುತ್ತಿದೆ.

 ಜೂನ್ 3ರಂದು ಮುಂಗಾರು ಪ್ರವೇಶಕ್ಕೆ ವಾತಾವರಣ ಪಕ್ಕಾ ಜೂನ್ 3ರಂದು ಮುಂಗಾರು ಪ್ರವೇಶಕ್ಕೆ ವಾತಾವರಣ ಪಕ್ಕಾ

ಕೆರೆಯ ನೀರು ಹರಿಯುವ ತೂಬು ಬಂದ್ ಆಗಿರುವುದರಿಂದ ಪ್ರತಿವರ್ಷ ಈ ಸಮಸ್ಯೆ ರೈತರಿಗೆ ಕಾಡುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಲು ರೈತರು ಆಗ್ರಹಿಸಿದ್ದಾರೆ.

Heavy Rain In Hospet Damages Standing Crops

"ನಮಗೆ ವರ್ಷ ಇದೇ ಸಮಸ್ಯೆ ಕಾಡುತ್ತದೆ, ಮಳೆ ಬಂದು ಹಾನಿಯಾಗುವುದಕ್ಕಿಂತ ರಾಯರಕೆರೆ ತೂಬು ಸುತ್ತಲೂ ಗಿಡ ಗಂಟೆಗಳು ಬೆಳೆದಿವೆ. ಅದನ್ನು ಸರ್ಕಾರದಿಂದ ಸ್ವಚ್ಛಗೊಳಿಸಿದರೆ ಸಾಕು ನಮಗೆ ಯಾವುದೇ ಬೆಳೆ ಪರಿಹಾರ ಬೇಡ" ಎಂದು ಕಲ್ಲಗುಡಿ ರೈತ ಮಂಜುನಾಥ ಹೇಳಿದ್ದಾರೆ.

English summary
Heavy rain in Vijayanagara district Hospet taluk have caused damage to standing crops. A setback for farmer in the time of Coronavirus lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X