ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ ವಿಶ್ವವಿಖ್ಯಾತ ಹಂಪಿ...

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ6: ಬಳ್ಳಾರಿಯ ವಿಶ್ವಪ್ರಸಿದ್ಧ ಹಂಪಿ ವೀಕ್ಷಣೆಗೆ ಇಂದಿನಿಂದ ಪ್ರವಾಸಿಗರಿಗೆ ಅವಕಾಶ ದೊರೆಯಲಿದ್ದು, ಕಳೆದ ಮೂರು ತಿಂಗಳಿಂದ ಪ್ರವಾಸಿಗರನ್ನೇ ಕಾಣದೆ ಬಿಕೋ ಎನ್ನುತ್ತಿದ್ದ ಸ್ಮಾರಕಗಳಿಗೆ ಕಳೆಬಂದಂತಾಗಿದೆ.

Recommended Video

Bubonic Plague Says Hello China:ಚೀನಾದಲ್ಲಿ 'ಬುಬೊನಿಕ್ ಪ್ಲೇಗ್' ಮಾರಣಾಂತಿಕ ರೋಗ ಪತ್ತೆ| Oneindia Kannada

ಕೊರೊನಾ ವೈರಸ್ ನಿಂದಾಗಿ ಮೂರು ತಿಂಗಳಿನಿಂದ ಹಂಪಿ ಸ್ಮಾರಕ ವೀಕ್ಷಿಸಲು ಪ್ರವಾಸಿಗರಿಗೆ ನಿರಾಸೆಯಾಗಿತ್ತು. ಇಂದಿನಿಂದ ಪ್ರವಾಸಿಗರು ಹಂಪಿ ಸ್ಮಾರಕ ವೀಕ್ಷಣೆ ಮಾಡಬಹುದಾಗಿದೆ. ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಇತ್ತೀಚೆಗೆ ಅನುಕೂಲ ಕಲ್ಪಿಸಿತ್ತು. ಆದರೆ, ವಿಶ್ವ ಪಾರಂಪರಿಕ ತಾಣವಾದ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಹಂಪಿಯ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನಲೆ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದೆ. ಹಂಪಿ ಲಾಕ್ ಡೌನ್ ನಿಂದ ಮುಕ್ತಿ ಪಡೆದಂತಾಗಿದೆ.

ವಿಶ್ವ ವಿಖ್ಯಾತ ಹಂಪಿಯಲ್ಲಿ 144 (3) ಸೆಕ್ಷನ್ ಜಾರಿವಿಶ್ವ ವಿಖ್ಯಾತ ಹಂಪಿಯಲ್ಲಿ 144 (3) ಸೆಕ್ಷನ್ ಜಾರಿ

World Famous Hampi Of Ballari District Will Open To Tourists From Today

ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 23 ರಂದು ಲಾಕ್ ಡೌನ್ ಘೋಷಿಸಿದ ಬಳಿಕ ಮೂರು ತಿಂಗಳ ಕಾಲ ಹಂಪಿ ನೋಡಲು ಅವಕಾಶವಿರಲಿಲ್ಲ. ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಂಪಿಯೊಳಗೆ ಯಾರನ್ನೂ ಬಿಡದಂತೆ ಸೂಚನೆ ನೀಡಿತ್ತು. ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಇದುವರೆಗೂ ನಿರ್ಬಂಧ ವಿಧಿಸಿತ್ತು. ಸದ್ಯ ಆ ನಿರ್ಬಂಧ ಸಡಿಲಗೊಳಿಸಿ ಹಂಪಿ ನೋಡಲು ಅವಕಾಶ ಕಲ್ಪಿಸಿದೆ.

English summary
Hampi will be open to tourists from today. It was closed since 3 months due to coronavirus lockdown,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X