ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಂಪಿಯ ನಿಸರ್ಗ ಸೌಂದರ್ಯದ ಸೊಬಗನ್ನು ಕಣ್ತುಂಬಿಕೊಳ್ಳಿ

ಹಂಪಿಯ ವಾಸ್ತುಶಿಲ್ಪದಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯವೂ ಅಷ್ಟೇ ನಯನ ಮನೋಹರವಾಗಿದ್ದು, ‘ಹಂಪಿ ಹಾಳು ಕೊಂಪೆ’ ಎಂದು ಹಳಿಯುವ ಜನರಿಗೆ ಹಂಪಿಯ ಇನ್ನೊಂದು ಮುಖ ಪರಿಚಯವಾಗಲಿದೆ.ನೈಸರ್ಗಿಕ ಶಿಲ್ಪಕಲೆ ಎಂಥವರನ್ನೂ ಬೆರಗುಗೊಳಿಸುವಂತಿದೆ.

By Basavaraj
|
Google Oneindia Kannada News

ಬಳ್ಳಾರಿ, ಜೂನ್ 28 : ವಿಜಯನಗರ ಅರಸರ ರಾಜಧಾನಿ ಹಂಪಿ ಎಂದಾಕ್ಷಣ ನೆನಪಾಗುವುದು ಇಲ್ಲಿನ ಶಿಲ್ಪಕಲೆ. ಅಲ್ಲದೆ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಹಂಪಿಯ ಬೀದಿಗಳು ಮುತ್ತು-ರತ್ನಗಳನ್ನು ಬೀದಿಯಲ್ಲಿಟ್ಟು ಮಾರಾಟ ಮಾಡುವ ಅಂತರರಾಷ್ಟ್ರೀಯ ಮಾರುಕಟ್ಟೆಯಾಗಿತ್ತು ಎಂಬ ಇತಿಹಾಸ.

ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಶಿಲ್ಪಕಲೆ ಶ್ರೀಮಂತಿಕೆಗೆ ಹೆಸರಾಗಿರುವ ಸ್ಮಾರಕಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಆದರೆ, ಹಂಪಿಯ ನಿಸರ್ಗಕ್ಕೂ ಒಂದು ಶಕ್ತಿ ಹಾಗೂ ಸೌಂದರ್ಯವಿದೆ ಎಂಬುದು ಇಲ್ಲಿಗೆ ಭೇಟಿ ನೀಡುವ ಬಹುತೇಕರಿಗೆ ತಿಳಿಯದ ವಿಷಯ.

Recommended Video

ಇಲ್ಲಿನ ಕಲ್ಲು-ಬಂಡೆಗಳು ಸೃಷ್ಟಿಸುತ್ತಿರುವ ದೃಶ್ಯ-ಕಾವ್ಯ ಬಹುತೇಕರ ಕಣ್ಣಿಗೆ ಬಿದ್ದಂತಿಲ್ಲ. ಆಪ್‍ ಬೀಟ್ ಟೂರಿಸಂ ಹೆಸರಲ್ಲಿ ಬೆಳೆಯುತ್ತಿರುವ ಈ ಸೌಂದರ್ಯವನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ ನೋಡಿ...

 ನಯನ ಮನೋಹರ

ನಯನ ಮನೋಹರ

ಹೌದು, ವಾಸ್ತುಶಿಲ್ಪದಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯವೂ ಅಷ್ಟೇ ನಯನ ಮನೋಹರವಾಗಿದ್ದು, 'ಹಂಪಿ ಹಾಳು ಕೊಂಪೆ' ಎಂದು ಹಳಿಯುವ ಜನರಿಗೆ ಹಂಪಿಯ ಇನ್ನೊಂದು ಮುಖ ಪರಿಚಯವಾಗಲಿದೆ. ಹಂಪಿಯಲ್ಲಿ ವಿಜಯನಗರದ ಅರಸರಿಂದ ನಿರ್ಮಾಣವಾದ ಸುಂದರ ಕೆತ್ತನೆಯ ಸ್ಮಾರಕಗಳು ಒಂದೆಡೆಯಾದರೆ, ತುಂಗಭದ್ರೆಯ ಒಡಲಿನಲ್ಲಿ ನೈಸರ್ಗಿಕ ಕಲ್ಲಿನ ಸೌಂದರ್ಯ ಅದರ ಎರಡು ಪಟ್ಟಿದೆ. ಪ್ರತಿವರ್ಷ ಬೇಸಿಗೆಯಲ್ಲಿ ತೆರೆದುಕೊಳ್ಳುವ ನೈಸರ್ಗಿಕ ಕಲ್ಲಿನ ಚಿತ್ತಾರ ಹಂಪಿಯ 'ಆಪ್‍ ಬೀಟ್ ಟೂರಿಸಂ'ನ ಟ್ರೆಂಡ್ ಅನ್ನು ಹೆಚ್ಚಿಸುತ್ತಿದ್ದು, ಸ್ಥಳೀಯರಿಗಿಂತ ವಿದೇಶಿ ಪ್ರವಾಸಿಗರೇ ಈ ಸೌಂದರ್ಯಕ್ಕೆ ಹೆಚ್ಚು ಸಾಕ್ಷಿಯಾಗುತ್ತಿದ್ದಾರೆ.

 ಬಳುಕುವ ಬಳ್ಳಿಯಂತೆ ಬರುವ ತುಂಗಭದ್ರೆ

ಬಳುಕುವ ಬಳ್ಳಿಯಂತೆ ಬರುವ ತುಂಗಭದ್ರೆ

ಬಳುಕುವ ಬಳ್ಳಿಯಂತೆ ಬರುವ ತುಂಗಭದ್ರೆಯ ವೇಗಕ್ಕೆ ವಿವಿಧ ವಿನ್ಯಾಸಗಳೊಂದಿಗೆ ರೂಪುಗೊಂಡಿರುವ ನದಿಯೊಳಗಿನ ನೈಸರ್ಗಿಕ ಶಿಲ್ಪಕಲೆ ಎಂಥವರನ್ನೂ ಬೆರಗುಗೊಳಿಸುವಂತಿದೆ. ಝುಳು ಝುಳು ಎಂದು ಶಬ್ದ ಮಾಡುತ್ತಾ ಹರಿಯುವ ನದಿಯ ನಿನಾದದೊಂದಿಗೆ ಶಿಲ್ಪಿಯ ಹೊಡೆತಕ್ಕೆ ಬಾಗಿದಂತೆ ಕಾಣುವ ಇಲ್ಲಿನ ಕಲ್ಲು-ಬಂಡೆಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲುವುದಿಲ್ಲ. ಛಾಯಾಚಿತ್ರ ಗ್ರಾಹಕರ ಸ್ವರ್ಗವೇ ಆಗಿರುವ ಈ ಸ್ಥಳದ ಬಗ್ಗೆ ಹಂಪಿಗೆ ಭೇಟಿ ನೀಡುವ ಶೇ 80ರಷ್ಟು ಪ್ರವಾಸಿಗರಿಗೆ ಮಾಹಿತಿ ಇಲ್ಲ.

v

 ಕೈ ಬೀಸಿ ಕರೆಯುವ ವಾಟರ್ ಫಾಲ್ಸ್

ಕೈ ಬೀಸಿ ಕರೆಯುವ ವಾಟರ್ ಫಾಲ್ಸ್

ಹಂಪಿಗೆ ಭೇಟಿ ನೀಡುವ ಬಹುತೇಕ ವಿದೇಶಿ ಪ್ರವಾಸಿಗರು ಇಲ್ಲಿನ ವಾಸ್ತುಶಿಲ್ಪ ಕಲೆಯಷ್ಟೇ ಇಲ್ಲಿನ ಪ್ರಕೃತಿ ಸೌಂದರ್ಯಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಾರೆ. ಬೇಸಿಗೆಯಲ್ಲಿ ನಿರ್ಮಾಣವಾಗುವ ಪ್ರಾಕೃತಿಕ ಜಲಪಾತಗಳು ಎಂತವರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಬಿಸಿಲಿನ ಬೆಗೆಯಲ್ಲಿ ಬೆಂದ ಜನರಿಗೆ ಹಿತವನ್ನು ನೀಡುವ ಈ ಸಣ್ಣ-ಸಣ್ಣ ಜಲಪಾತಗಳು ಮನಸ್ಸು ಹಾಗೂ ದೇಹಕ್ಕೆ ಇಂಪು ನೀಡುವುದರಿಂದಲೇ ಇತ್ತೀಚಿಗೆ ಈ ರೀತಿಯ ಪ್ರವಾಸೋದ್ಯಮ ವೇಗವಾಗಿ ಬೆಳೆಯುತ್ತಿದ್ದು, ಹಂಪಿಯ ಈ ಪರಿಸರದಲ್ಲಿ ಪ್ರಾಕೃತಿಕ ಸೌಂದರ್ಯ ಹೊರ ಜಗತ್ತಿಗೆ ತಿಳಿಯುತ್ತಿದೆ.

 ಹಲವು ಪ್ರಕೃತಿ ಸೌಂದರ್ಯದ ತಾಣಗಳು

ಹಲವು ಪ್ರಕೃತಿ ಸೌಂದರ್ಯದ ತಾಣಗಳು

ಇದಿಷ್ಟೇ ಅಲ್ಲ, ಮಾಲ್ಯವಂತ ಬೆಟ್ಟ, ಹೇಮಕೂಟ, ಅಂಜನಾದ್ರಿ ಬೆಟ್ಟ ಸೇರಿದಂತೆ ಹಲವು ಪ್ರಕೃತಿ ಸೌಂದರ್ಯದ ತಾಣಗಳು ಹಂಪಿಯ ಸುತ್ತಮುತ್ತಲಿವೆ. ಅಲ್ಲದೆ ಇವುಗಳನ್ನು ಪರಿಚಯಿಸಲೆಂದೇ ಇತ್ತೀಚೆಗೆ ಹಲವು ಪ್ರವಾಸಿ ಸಂಸ್ಥೆಗಳು ಹುಟ್ಟಿಕೊಂಡಿವೆ.

English summary
World heritage site Hampi well known by its ancient architect, lakhs together tourists are visiting to Hampi from local as well as foreign. But recently Hampi off bit tourism is gradually increasing. Most of tourists are experiencing pleasant nature along with history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X