ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿ ತಾಣ ಹಂಪಿ ಸುತ್ತಾಡಲು ಪ್ರವಾಸಿಗರಿಗೆ ಸೈಕಲ್ ಭಾಗ್ಯ

|
Google Oneindia Kannada News

ವಿಜಯನಗರ, ಮಾರ್ಚ್ 20; ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಅಪ್ಲಿಕೇಶನ್ ಆಧಾರಿತ ಸೈಕಲ್ ಸೇವೆ ಆರಂಭಿಸಲು ಪ್ರವಾಸಿಗರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಸಲಹೆಗಳನ್ನು ಆಹ್ವಾನಿಸಿದೆ. ಈಗಾಗಲೇ ಕೆಲವು ರೆಸಾರ್ಟ್‌ಗಳು ಸೈಕಲ್ ನೀಡುತ್ತಿದ್ದು, ಸರಿಯಾದ ಮಾರ್ಗ ನಕ್ಷೆ ನೀಡದೆ ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿವೆ.

ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ)ಗೆ ಪ್ರವಾಸಿಗರು ಆನ್‌ಲೈನ್ ಅಥವ ಆಫ್‌ಲೈನ್ ಮೂಲಕ ಸಲಹೆ ನೀಡಬಹುದಾಗಿದೆ. ಸೈಕಲ್ ಸೇವೆ ಹೇಗಿರಬೇಕು?, ಯಾವ ಮಾದರಿಯಲ್ಲಿರಬೇಕು ಎಂದು ಜನರು ಸಲಹೆ ನೀಡಬಹುದಾಗಿದೆ.

ಹಂಪಿ ಕನ್ನಡ ವಿವಿ ಹಗರಣ; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ ಹಂಪಿ ಕನ್ನಡ ವಿವಿ ಹಗರಣ; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಹಂಪಿ ಸುತ್ತಲಿನ ಕೆಲವು ರೆಸಾರ್ಟ್‌, ಹೊಂ ಸ್ಟೇಗಳು ಈಗಾಗಲೇ ಪ್ರವಾಸಿಗರಿಗೆ ಬಾಡಿಗೆಗೆ ಸೈಕಲ್ ನೀಡುತ್ತಿವೆ. ಆದರೆ ಸರಿಯಾದ ಮಾರ್ಗ ನಕ್ಷೆಯನ್ನು ನೀಡದೆ ಪ್ರವಾಸಿಗರಿಗೆ ಗೊಂದಲ ಉಂಟು ಮಾಡುತ್ತಿವೆ.

ಪ್ರವಾಸಿಗರ ಭೇಟಿಗೆ ವಿಶ್ವ ವಿಖ್ಯಾತ ಹಂಪಿ ಮುಕ್ತ ಪ್ರವಾಸಿಗರ ಭೇಟಿಗೆ ವಿಶ್ವ ವಿಖ್ಯಾತ ಹಂಪಿ ಮುಕ್ತ

Hampi Management Authority Planned Bicycle Service For Tourists

ಈ ಹಿನ್ನಲೆಯಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರ ಅಪ್ಲಿಕೇಶನ್ ಆಧಾರಿತ ಸೈಕಲ್ ಸೇವೆ ನೀಡಲು ಬಯಸಿದ್ದು, ಅದಕ್ಕಾಗಿ ಜನರಿಂದ ಸಲಹೆಗಳನ್ನು ಆಹ್ವಾನಿಸಿದೆ. ಹಂಪಿಯ ಎಲ್ಲಾ ಪ್ರವಾಸಿ ತಾಣಗಳ ಬಳಿಗೂ 4 ಚಕ್ರದ ವಾಹನದಲ್ಲಿ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸೈಕಲ್ ಸೇವೆ ನೀಡಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲುಹೊಸಪೇಟೆಯಿಂದ ಹಂಪಿ ಎಕ್ಸ್‌ಪ್ರೆಸ್ ಈಗ ಎಲೆಕ್ಟ್ರಿಕಲ್ ರೈಲು

ಅಲ್ಲದೇ ಹಂಪಿಗೆ ಬರುವ ವಿದೇಶಿ ಪ್ರವಾಸಿಗರ ಹೆಚ್ಚು ಸೈಕಲ್ ಬಳಕೆ ಮಾಡಲು ಉತ್ಸುಕರಾಗಿದ್ದಾರೆ. ಆದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಪ್ರವಾಸಿಗರ ಕೈಗೆ ಸೈಕಲ್ ನೀಡಲು ಮುಂದಾಗಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರ ವಿವಿಧ ಕಾರಣಗಳಿಂದ ಸೈಕಲ್ ಓಡಿಸಲು ಸಾಧ್ಯವಿಲ್ಲ ಪ್ರವಾಸಿಗರಿಗಾಗಿ ಎಲೆಕ್ಟ್ರಿಕಲ್ ಸೈಕಲ್ ಸೇವೆ ಆರಂಭಿಸಲು ಮುಂದಾಗಿದೆ. ಎಲ್ಲದಕ್ಕು ಮೊದಲು ಜನರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ.

ಸಮೀಕ್ಷೆ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಸಂಸ್ಥೆಯೊಂದಕ್ಕೆ ಇದರ ನಿರ್ವಹಣೆ ಉಸ್ತುವಾರಿ ನೀಡಲು ಹಂಪಿ ಅಭಿವೃದ್ದಿ ಪ್ರಾಧಿಕಾರ ಮುಂದಾಗಿದೆ. ಮಾರ್ಗ, ಸೈಕಲ್ ನಿರ್ವಹಣೆ ಸೇರಿದಂತೆ ಇತರ ಎಲ್ಲಾ ಕಾರ್ಯಗಳನ್ನು ಈ ಸಂಸ್ಥೆಯೇ ನೋಡಿಕೊಳ್ಳಲಿದೆ.

ಬ್ಯಾಟರಿ ಚಾಲಿತ ರೈಲು; ಹಂಪಿಯಲ್ಲಿ ಸುಮಾರು ಪ್ರವಾಸಿ ತಾಣಗಳಿವೆ. ಅವುಗಳನ್ನು ನಡೆದುಕೊಂಡು ಹೋಗಿ ನೋಡುವುದು ಅಸಾಧ್ಯ. ಈಗ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ರೈಲು ಸೇವೆ ಆರಂಭಿಸಲಾಗಿದೆ.

ಬ್ಯಾಟರಿ ಚಾಲಿತ ಮೂರು ಬೋಗಿಯ ರೈಲು ಒಂದು ಸಮಯದಲ್ಲಿ 90 ಪ್ರವಾಸಿಗರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೋವಿಡ್ ಪರಿಸ್ಥಿತಿ ಸುಧಾರಣೆ ಬಳಿಕ ಹಂಪಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಪರಿಚಯಿಸಲು ಈ ಬ್ಯಾಟರಿ ಚಾಲಿತ ರೈಲು ತರಲಾಗಿದೆ.

ಈ ರೈಲಿನ ಮೂಲಕ ವಿರೂಪಾಕ್ಷ ದೇವಾಲಯ, ಉಗ್ರ ನರಸಿಂಹ ದೇವಾಲಯ, ಸಾಸಿವೆಕಾಳು ಗಣಪತಿ, ಕ್ವೀನ್ಸ್ ಬಾತ್ ಮತ್ತು ಲೋಟಸ್ ಟೆಂಪಲ್ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ನೋಡಬಹುದಾಗಿದೆ. ಸಂದರ್ಶಕರು ಒಂದು ದಿನದ ಟಿಕೆಟ್ ಖರೀದಿಸಬೇಕಾಗುತ್ತದೆ ಮತ್ತು ಅದರ ನಂತರ ಹಂಪಿಯ ಯಾವುದೇ ಸ್ಥಳದಿಂದ ಪ್ರಯಾಣಿಸಬಹುದು.

ಕಾಲ್ನಡಿಗೆ ಮೂಲಕ ಸಾಗುವಾಗ ಹಲವಾರು ಪ್ರಮುಖ ಸ್ಮಾರಕಗಳನ್ನು ಸಂದರ್ಶಕರು ತಪ್ಪಿಸಿಕೊಳ್ಳುತ್ತಾರೆ. ಇದನ್ನು ತಪ್ಪಿಸಲು ಮತ್ತು ಉತ್ತಮ ಪ್ರವಾಸಿ ಅನುಭವವನ್ನು ಹೆಚ್ಚಿಸಲು ಈ ಬ್ಯಾಟರಿ ಚಾಲಿತ ರೈಲು ಸೇವೆ ಆರಂಭಗೊಂಡಿದೆ.

ಕೋವಿಡ್ ಪರಿಸ್ಥಿತಿ ಸುಧಾರಣೆ ಬಳಿಕ ಹಂಪಿಗೆ ವಾರದ ದಿನಗಳಲ್ಲಿ ಸುಮಾರು 200 ಪ್ರವಾಸಿಗರು, ವಾರಾಂತ್ಯದಲ್ಲಿ 800ಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ.

English summary
Hampi management authority has invited public opinion to introduce an app-based bicycle service. Tourist may submit opinions either online or offline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X