ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಾ. ಸಿದ್ದಲಿಂಗಯ್ಯ ನೆನಪು ಮಾಡಿಕೊಂಡ ಹಂಪಿ ಕನ್ನಡ ವಿವಿ

By ಭೀಮರಾಜ.ಯು. ವಿಜಯನಗರ
|
Google Oneindia Kannada News

ವಿಜಯನಗರ, ಜೂನ್ 13; ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಬೆನ್ನಲುಬಾಗಿ ಡಾ. ಸಿದ್ದಲಿಂಗಯ್ಯ ನಿಂತಿದ್ದರು. ಅವರ ನಿಧನದಿಂದಾಗಿ ಕನ್ನಡ ವಿವಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಇಡೀ‌ ಜಗತ್ತಿನಲ್ಲಿಯೇ ಒಂದು ಭಾಷೆಗಾಗಿ ಹುಟ್ಟಿಕೊಂಡಿರುವ ಏಕೈಕ ವಿಶ್ವವಿದ್ಯಾಲಯವಾಗಿದೆ.

ಕನ್ನಡ ನಾಡು, ನುಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಹುಟ್ಟಿಕೊಂಡಿರುವ ಕನ್ನಡ ವಿವಿಯ ಜೊತೆ ನಿಕಟ ಸಂಬಂಧವನ್ನು ಡಾ. ಸಿದ್ದಲಿಂಗಯ್ಯ ಹೊಂದಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ತಮ್ಮದೇ ಆದ ಮಾರ್ಗದರ್ಶನವನ್ನು ನೀಡಿದ್ದರು. ಇಂತಹ ಮಾಹನ್‌‌ ವ್ಯಕ್ತಿಯನ್ನು ಕಳೆದುಕೊಂಡು ತುಂಬಲಾರದ ನಷ್ಟವನ್ನು ವಿವಿ ಅನುಭವಿಸುತ್ತಿದೆ.

ಕಲಾಗ್ರಾಮದಲ್ಲಿ ಕವಿ ಸಿದ್ದಲಿಂಗಯ್ಯ ಅಂತಿಮ ಯಾನಕಲಾಗ್ರಾಮದಲ್ಲಿ ಕವಿ ಸಿದ್ದಲಿಂಗಯ್ಯ ಅಂತಿಮ ಯಾನ

ಹಂಪಿ ಕನ್ನಡ ವಿವಿ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಕಾಲದಿಂದಲೂ ವಿವಿಯ ಮೇಲೆ ಎಲ್ಲಿಲ್ಲದ ಪ್ರೀತಿ ಡಾ. ಸಿದ್ದಲಿಂಗಯ್ಯ ಅವರಿಗಿತ್ತು. ತಮ್ಮ ಬಿಡುವಿನ ವೇಳೆಯಲ್ಲಿಯೂ ಸಹ ತಮ್ಮ ಮನಸ್ಸಿನ ನೆಮ್ಮದಿಗೆ ಕನ್ನಡ ವಿವಿಗೆ ಬಂದು ಸಲಹೆ ಸೂಚನೆಗಳನ್ನ ನೀಡುತ್ತಿದ್ದರು.

ನುಡಿ ನಮನ: ಆಪ್ತರು ಕಂಡಂತೆ ''ಎಲ್ಲರ ಕವಿ'' ಡಾ. ಸಿದ್ದಲಿಂಗಯ್ಯನುಡಿ ನಮನ: ಆಪ್ತರು ಕಂಡಂತೆ ''ಎಲ್ಲರ ಕವಿ'' ಡಾ. ಸಿದ್ದಲಿಂಗಯ್ಯ

ಕನ್ನಡ ವಿವಿಯ ಕುಲಪತಿಗಳಾದ ಡಾ. ಚಂದ್ರಶೇಖರ ಕಂಬಾರರಿಂದ ಎಂ. ಎಂ. ಕಲ್ಬುರ್ಗಿ, ಹೆಚ್. ಜೆ. ಲಕ್ಕಪ್ಪ ಗೌಡ್ರು, ಡಾ. ಬಿ. ಎ ವಿವೇಕ ರೈ, ಡಾ. ಮುರಿಗೆಪ್ಪ, ಈ. ಚಿ. ಬೋರಲಿಂಗಯ್ಯ, ಮಲ್ಲಿಕಾ ಘಂಟಿ ಈಗಿನ ಸ. ಚಿ. ರಮೇಶ ತನಕ ಎಲ್ಲಾ ಕುಲಪತಿಗಳೊಂದಿಗೆ ಸಿದ್ದಲಿಂಗಯ್ಯ ನಂಟನ್ನು ಬೆಳಿಸಿಕೊಂಡು ಸಕ್ರಿಯರಾಗಿದ್ದರು.

Breaking: ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ Breaking: ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ

"ಕನ್ನಡ ವಿವಿ ಬೆಳವಣಿಗೆಗೆ ಮಾರ್ಗದರ್ಶಕರಾಗಿದ್ದ ನಾಡೋಜ ಡಾ. ಸಿದ್ದಲಿಂಗಯ್ಯನವರನ್ನು ಕಳೆದುಕೊಂಡು ಇಡೀ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಯುವ ಸಂಶೋಧಕರು, ಸಾಹಿತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಕಾಲಿಕ ನಿಧನ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಖಃಭರಿಸುವ ಶಕ್ತಿ ನೀಡಲಿ" ಎಂದು ವಿವಿ ಕುಲಪತಿ ಡಾ. ಸ. ಚಿ. ರಮೇಶ ಸಂತಾಪ ಸೂಚಿಸಿದ್ದಾರೆ.

ಕೊನೆಯದಾಗಿ ವಿವಿಗೆ ಬಂದಿದ್ದರು

ಕೊನೆಯದಾಗಿ ವಿವಿಗೆ ಬಂದಿದ್ದರು

ಡಾ. ಸಿದ್ದಲಿಂಗಯ್ಯಗೆ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗೆ ಸೇರಿದ್ದರು. ವಿಶೇಷವೆಂದರೆ ಆಸ್ಪತ್ರೆಗೆ ಸೇರುವ ಮುಂಚಿತವಾಗಿ ಅವರು ಕನ್ನಡ ವಿವಿಗೆ ಭೇಟಿ ಕೊಟ್ಟು ಹೋಗಿದ್ದರು. ಆ ಸಂದರ್ಭದಲ್ಲಿ ಈಗಿನ ಕುಲಪತಿ ಡಾ. ಸ. ಚಿ. ರಮೇಶ ಜೊತೆಗೆ ಈಗಿನ ತಂತ್ರ ಜ್ಞಾನ ಯುಗದಲ್ಲಿ ಕನ್ನಡವನ್ನು ಹೇಗೆ ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಬೇಕು ಎಂಬುದರ ಬಗ್ಗೆ ಚರ್ಚಿಸಿದ್ದರು. ಈ ಬಗ್ಗೆ ಸೂಕ್ತ ಸಲಹೆಗಳನ್ನು ಕೂಡ ನೀಡಿದ್ದರು.

ಕನ್ನಡ ಕಟ್ಟುವ ಕಾಯಕ

ಕನ್ನಡ ಕಟ್ಟುವ ಕಾಯಕ

ಡಾ. ಸಿದ್ದಲಿಂಗಯ್ಯಗೆ ಕನ್ನಡ‌ ವಿವಿ ಎಂದರೆ ಎಲ್ಲಿಲ್ಲದ ಪ್ರೀತಿ ಮತ್ತು ವಿವಿಯನ್ನು ತಮ್ಮ ಮನೆಯೆಂದೇ ಭಾವಿಸಿದ್ದರು ಅಷ್ಟೊಂದು ಅಭಿಮಾನ ಅವರಿಗಿತ್ತು. ಕನ್ನಡ ವಿವಿಯಲ್ಲಿ ಎರಡು ಬಾರಿ ಸಿಂಡಿಕೇಟ್ ಸದಸ್ಯರಾಗಿ ಕನ್ನಡವನ್ನು ಕಟ್ಟಿ ಬೆಳೆಸುವುದಕ್ಕೆ ಹಲವಾರು ಹೊಸ ಯೋಜನೆಗಳನ್ನ ರೂಪಿಸಿ ಕೈಗೆತ್ತಿಕೊಂಡರು. ಸಿಂಡಿಕೇಟ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಎಲ್ಲಾ ಸದಸ್ಯರಿಗಿಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ವಿವಿಯ ಪ್ರಸಾರಂಗದಿಂದ ಉತ್ತಮ ಸಂಶೋಧನಾ ಗ್ರಂಥಗಳು ಹಾಗೂ ಐತಿಹಾಸಿಕ ಮತ್ತು ಸಾಹಿತ್ಯಿಕ ಕೃತಿಗಳನ್ನು ಹೊರ ತರಲು ಸಲಹೆ, ಸೂಚನೆಗಳನ್ನು ನೀಡುತ್ತಿದ್ದರು.

ನಾಡೋಜ ಗೌರವ ಪದವಿ

ನಾಡೋಜ ಗೌರವ ಪದವಿ

ಹಂಪಿ ಕನ್ನಡ ವಿಶ್ವವಿದ್ಯಾಲಯವು 2008ರ ಜನವರಿಯಲ್ಲಿ ಡಾ. ಸಿದ್ದಲಿಂಗಯ್ಯಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಿತ್ತು. ಈ ವೇಳೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದ್ದರು. ಇದೀಗ ದಲಿತ ಕವಿಯನ್ನು ಕಳೆದುಕೊಂಡ ಕನ್ನಡ ವಿವಿ ಶೋಕದಲ್ಲಿ ಮುಳುಗಿದೆ.

ಅವರಿಗೆ ವಿವಿಯ ಮೇಲೆ ಅಪಾರ ಕಾಳಜಿ ಮತ್ತು ಪ್ರೀತಿ ಹಾಗಾಗಿ ಅವರು ಕನ್ನಡ ವಿವಿಗೆ ರಾಜ್ಯ ಸರ್ಕಾರ ಅನುದಾನ ನೀಡುವಲ್ಲಿ ಮೀನ ಮೇಷ ಎಣಿಸಿದಾಗಲೆಲ್ಲ ಹೋರಾಟಕ್ಕೆ ಧುಮುಕುತ್ತಿದ್ದರು. ಅನ್ಯಾಯವಾದಗಲೆಲ್ಲ ಯಾರ ಮೂಲಾಜಿಗೆ ಒಳಗಾಗದೆ ನೇರವಾಗಿ ಮತನಾಡುತ್ತಿದ್ದರು. ನೇರ ಮತ್ತು ನಿಷ್ಠೂರವಾದಿಯಾಗಿದ್ದರು. ಕನ್ನಡ ಕಟ್ಟುವ ಕಾರ್ಯಕ್ಕೆ ಪ್ರಭುತ್ವ ಎಂದಿಗೂ ಹಿಂದೇಟು ಹಾಕಬಾರದು ಎಂದು ಖಡಕ್ ಆಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದರು.

ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು

ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು

ಕನ್ನಡ ವಿವಿಗೆ 25 ವರ್ಷ ಪೂರೈಸಿದ ಸಂದರ್ಭದಲ್ಲಿ ಆಳುವ ಸರ್ಕಾರ ಅನುದಾನ ನೀಡಲು ಹಾಗೂ ವಿವಿ ಕಾಯ್ದತಿದ್ದುಪಡಿ ಮಾಡಲು ಹೋರಾಟಾಗ ಆಗಿನ ಕುಲಪತಿ ಡಾ. ಮಲ್ಲಿಕಾ ಘಂಟಿಯವರ ಜತೆಗೂಡಿ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದನ್ನು ಸ್ಮರಿಸಬಹುದು.

ಇನ್ನೂ ಕನ್ನಡ ವಿವಿ ಆವರಣದಲ್ಲಿ 80 ಎಕರೆಯಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಕಾರ್ಯಕ್ಕೆ ಸರ್ಕಾರ ಯೋಜನೆ ರೂಪಿಸಿದ ಸಂದರ್ಭದಲ್ಲೂ ವಿವಿಯ ಪರ ಧ್ವನಿ ಎತ್ತಿದ್ದರು. ಕನ್ನಡ ವಿವಿ ಸಂಕಷ್ಟ ಎದುರಿಸಿದ ಸಂದರ್ಭದಲ್ಲಿ ವಿವಿ ಪರ ಗಟ್ಟಿಯಾಗಿ ನಿಂತು ಪ್ರಭುತ್ವವನ್ನು ಎದುರು ಹಾಕಿಕೊಂಡು ಕನ್ನಡ ವಿವಿ ಪರವಾಗಿ ನಿಂತು ಆಪತ್ಬಾಂಧವರಾಗಿ ರಕ್ಷಣೆಗೆ ನಿಂತಿದ್ದರು.

Recommended Video

ಅರ್ಜೆಂಟಿನಾದ ಈ ಪೆಂಗ್ವಿನ್ ಗೂಡಿನಲ್ಲಿ ಪ್ಲಾಸ್ಟಿಕ್ | Oneindia Kannada
ಹಂಪಿ ಕನ್ನಡ ವಿವಿ ಕುಲಪತಿ ಹುದ್ದೆ

ಹಂಪಿ ಕನ್ನಡ ವಿವಿ ಕುಲಪತಿ ಹುದ್ದೆ

ಹಂಪಿ ಕನ್ನಡ ವಿವಿಯ ಕುಲಪತಿ ಹುದ್ದೆಯ ಬಗ್ಗೆ ಚರ್ಚೆ ನಡೆದಿತ್ತು. ಆ ವೇಳೆ ಡಾ. ಸಿದ್ದಲಿಂಗಯ್ಯ ಹೆಸರು ಕೇಳಿ‌ ಬರುತ್ತಿದ್ದಂತೆ "ಅಯ್ಯೋ ಸ್ವಾಮಿ ಅವೆಲ್ಲ ನಮಗ್ಯಾಕಯ್ಯ" ಅಂತ ಹಾಸ್ಯದ ಪ್ರವೃತ್ತಿಯಿಂದಲೇ ಪ್ರತಿಕ್ರಿಯಿಸಿದ್ದನ್ನು ಸ್ಮರಿಸಬಹುದು.

"ಡಾ.ಸಿದ್ದಲಿಂಗಯ್ಯನವರು ಬಹಳ ಸರಳ ಮತ್ತು ಸಜ್ಜನ ವ್ಯಕ್ತಿಯಾಗಿದ್ದರು, ಜನಸಾಮಾನ್ಯರಲ್ಲಿ ಒಂದಾಗಿ ಬೆರೆಯುತ್ತಿದ್ದರು, ಬಹಳ ಹಾಸ್ಯ ಪ್ರವೃತ್ತಿಯನ್ನು ಹೊಂದಿದ್ದರು ಅದರ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ದಲಿತ ಕವಿ ಅಂತ ಬಿರುದು ತೆಗೆದುತೆಗೆದುಕೊಂಡಿದ್ದಾರೆ ಅವರ ಬಗ್ಗೆ ಹೇಳುವುದಕ್ಕೆ ಪದಗಳೇ ಸಾಲುವುದಿಲ್ಲ" ಎಂದು ವಿವಿ ಮಾಹಿತಿ ಕೇಂದ್ರದ ಉಪ ನಿರ್ದೇಶಕರಾದ ಡಾ. ಮೀನಾಕ್ಷಿ ಹೇಳಿದ್ದಾರೆ.

English summary
Senior Kannada poet Dr. Siddalingaiah passed away on Friday. Vijayanagara district Hampi Kannada university remembered Siddalingaiah contribution to university and Kannada language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X